ರಾಜಕೀಯ ಸುದ್ದಿ

ಬ್ರಾಹ್ಮಣ ಪ್ರಾತಿನಿಧ್ಯವಿಲ್ಲದ ಸಂಪುಟ , ದೇಶಪಾಂಡೆ ಬೆಂಬಲಿಗರ ಆಕ್ರೋಶ

Share It

ಬೆಂಗಳೂರು : ಹಿರಿಯ ಕಾಂಗ್ರೆಸ್ ಮುಖಂಡ ಆರ್ .ವಿ. ದೇಶಪಾಂಡೆ ಅವರಿಗೆ ಸಚಿವ ಸ್ಥಾನ ನೀಡದ ಪಕ್ಷದ ಕ್ರಮ ವಿರೋಧಿಸಿ ಕೆಪಿಸಿಸಿ ಕಚೇರಿ ಮುಂದೆ ನೂರಾರು ಕಾರ್ಯಕರ್ತರು, ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಸತತ 9 ಭಾರಿ ಶಾಸಕರಾಗಿ, 13 ವರ್ಷ ಕೈಗಾರಿಕಾ ಸಚಿವರಾಗಿ ಅತ್ಯಂತ ಹಿರಿತನ ಹೊಂದಿರುವ ನಾಯಕನನ್ನೂ ಕಡೆಗಣಿಸಿರುವುದಕ್ಕೆ ಹಳಿಯಾಳದಿಂದ ಬಂದಿದ್ದ ಅಸಂಖ್ಯಾತ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
1952 ರಿಂದ ಇಲ್ಲಿಯವರೆಗೆ ರಚಿಸಲಾದ ಎಲ್ಲಾ ಸರ್ಕಾರದಲ್ಲೂ ಬ್ರಾಹ್ಮಣರಿಗೆ ಪ್ರಾತಿನಿಧ್ಯ ದೊರಕಿತ್ತು ಇದೇ ಮೊದಲ ಬಾರಿಗೆ ಬ್ರಾಹ್ಮಣ ಸಮುದಾಯ ಕಡೆಗಣಿಸಿ ಯಾವುದೇ ಒಬ್ಬ ಶಾಸಕರಿಗೂ ಮಂತ್ರಿಮಂಡಲದಲ್ಲಿ ಅವಕಾಶ ನೀಡಿಲ್ಲ.

ಗುಂಡೂರಾಯರ ಕಾಲದಲ್ಲಿ ಮೂವರು ದೇವರಾಜ ಕಾಲದಲ್ಲಿ ನಾಲ್ವರು, ವೀರಪ್ಪ ಮೊಯ್ಲಿ ಕಾಲದಲ್ಲೂ ನಾಲ್ವರು ಬ್ರಾಹ್ಮಣ ಶಾಸಕರಿಗೆ ಮಂತ್ರಿ ಅವಕಾಶ ಕಲ್ಪಿಸಲಾಗಿತ್ತು. ಕೆ. ಸಿ.ರೆಡ್ಡಿ ಕಾಲದಿಂದ ಸಿದ್ದರಾಮಯ್ಯ ಸರ್ಕಾರದ ವರೆಗೂ ಬ್ರಾಹ್ಮಣರಿಗೆ ಅವಕಾಶ ನೀಡಲಾಗಿತ್ತು. ಸ್ವಾತಂತ್ರ ನಂತರದ 70 ವರ್ಷಗಳ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ರಾಹ್ಮಣ ಪ್ರಾತಿನಿಧ್ಯವಿಲ್ಲದ ಸಂಪುಟ ರಚಿಸಿ ಸಮುದಾಯಕ್ಕೆ ಘೋರ ಅನ್ಯಾಯ- ಅಪಚಾರವೆಸಗಲಾಗಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Share It

You cannot copy content of this page