ಉಪಯುಕ್ತ ಸುದ್ದಿ

ಸಿ.ಐ.ಎಸ್.ಸಿ.ಇ 10ನೇ, 12ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ

Share It

ನವದೆಹಲಿ: ಸಿಐಎಸ್‌‍ಸಿಇ (ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೇಷನ್ಸ್ ) 10 ಮತ್ತು 12 ನೇ ತರಗತಿಯ ಬೋರ್ಡ್‌ ಪರೀಕ್ಷೆಗಳಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.

ಇಂದು ಸೋಮವಾರ ಬೆಳಿಗ್ಗೆ ಫಲಿತಾಂಶಗಳನ್ನು ಪ್ರಕಟಿಸಲಾಗಿದ್ದು ಶೇ. 99.47 ರಷ್ಟು ವಿದ್ಯಾರ್ಥಿಗಳು 10 ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರೆ, 98.19 ರಷ್ಟು ವಿದ್ಯಾರ್ಥಿಗಳು 12 ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

10ನೇ ತರಗತಿಯಲ್ಲಿ ಬಾಲಕರ ಉತ್ತೀರ್ಣ ಪ್ರಮಾಣ ಶೇ.99.31ರಷ್ಟಿದ್ದರೆ, ಬಾಲಕಿಯರ ಪಾಸಾದ ಪ್ರಮಾಣ ಶೇ.99.65. ಅದೇ ರೀತಿ 12ನೇ ತರಗತಿ ಪರೀಕ್ಷೆಯಲ್ಲಿ ಬಾಲಕರು ಶೇ.97.53ರಷ್ಟು ಉತ್ತೀರ್ಣರಾಗಿದ್ದರೆ, ಬಾಲಕಿಯರ ಉತ್ತೀರ್ಣ ಪ್ರಮಾಣ ಶೇ.98.92ರಷ್ಟಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಜೋಸೆಫ್‌ ಇಮ್ಯಾನುಯೆಲ್‌‍ ತಿಳಿಸಿದ್ದಾರೆ.

10 ನೇ ತರಗತಿಯಲ್ಲಿ, ಇಂಡೋನೇಷ್ಯಾ, ಸಿಂಗಾಪುರ್‌ ಮತ್ತು ದುಬೈನಿಂದ ವಿದೇಶದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳು ಶೇಕಡಾ 100 ರಷ್ಟು ಉತ್ತೀರ್ಣವಾಗಿವೆ. 12 ನೇ ತರಗತಿಯಲ್ಲಿ, ಸಿಂಗಾಪುರ ಮತ್ತು ದುಬೈನಿಂದ ಉತ್ತಮ ಪ್ರದರ್ಶನ ನೀಡುವ ಶಾಲೆಗಳು ಎಂದು ಮಾಹಿತಿ ನೀಡಿದ್ದಾರೆ.


Share It

You cannot copy content of this page