ನವದೆಹಲಿ: ಇವಿಎಂಗಳಲ್ಲಿ ಚುನಾವಣೆ ನಡೆಸುವ ಸಂಬಧ ದೇಶದಲ್ಲಿ ಪರ ವಿರೋಧ ಚರ್ಚೆಗಳು ಇನ್ನೂ ನಡೆಯುತ್ತಲೇ ಇದ್ದು, ಸುಪ್ರಿಂ ಕೋರ್ಟ್ ಈ ಸಂಬAಧ ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದೆ.
ಬುಧವಾರ ಸುಪ್ರಿಂ ಕೋರ್ಟ್ ಈ ವಿಚಾರದ ಸಂಬAಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದು, ಸೂಕ್ತ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದೆ, ಜತೆಗೆ ಮಧ್ಯಾಹ್ನ ೨ ಗಂಟೆಗೆ ನಡೆಯುವ ವಿಚಾರಣೆ ವೇಳೆ ಹಿರಿಯ ಅಧಿಕಾರಿಯೊಬ್ಬರು ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಿದೆ.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ದೀಪಂಕರ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಕೆಲವು ಅಂಶಗಳ ಕುರಿತು ನ್ಯಾಯಾಲಯಕ್ಕೆ ಸ್ಪಷ್ಟನೆ ಬೇಕಿದೆ. ಚುನಾವಣಾ ಆಯೋಗ ನೀಡಿರುವ ಉತ್ತರದಲ್ಲಿ ಕೆಲ ಗೊಂದಲಗಳಿವೆ ಎಂದು ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ, ನಾವು ತಪ್ಪು ಆದೇಶ ನೀಡಲು ಬಯಸುವುದಿಲ್ಲ. ನಮ್ಮ ಪರಿಶೀಲನೆ ವೇಳೆಯಲ್ಲಿ ಚುನಾವಣಾ ಆಯೋಗ ಸಲ್ಲಿಸಿರುವ ದಾಖಲೆಗಳು ಮತ್ತು ಉತ್ತರದಲ್ಲಿ ಕೆಲ ಗೊಂದಲಗಳಿರುವುದು ಕಂಡು ಬಂದಿದೆ. ಹೀಗಾಗಿ, ಅದಕ್ಕೆ ಸೂಕ್ತ ಸ್ಪಷ್ಟನೆಯನ್ನು ಬಯಸುತ್ತೇವೆ” ಎಂದು ಚುನಾವಣಾ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿಗೆ ನ್ಯಾಯಪೀಠ ತಿಳಿಸಿದೆ.
ಮಧ್ಯಾಹ್ನದ ನಂತರ ನಡೆಯುವ ವಿಚಾರಣೆಯಲ್ಲಿ ಉಪಚುನಾವಣಾ ಆಯುಕ್ತ ನಿತೇಶ್ ಕುಮಾರ್ ವ್ಯಾಸ್ ಅವರನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿರುವ ನ್ಯಾಯಪೀಠ, ಇವಿಎಂಗಳಲ್ಲಿ ಮತಗಳ ಸಂಗ್ರಹ, ಇವಿಎಂ ಕಂಟ್ರೋಲಿAಗ್ ಯೂನಿಟ್‌ನ ಮೈಕ್ರೋಚಿಪ್ ಮತ್ತು ಇತರ ಅಂಶಗಳ ಕುರಿತು ಸ್ಪಷ್ಟನೆ ಕೇಳಲು ಬಯಸಿದೆ.
ಇತ್ತೀಚೆಗೆ ಸುಪ್ರಿಂ ಕೋರ್ಟ್ನ ಅನೇಕ ನ್ಯಾಯವಾದಿಗಳು ಇವಿಎಂ ಕಾರ್ಯವೈಖರಿ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಕೆಲ ಸ್ಥಳಗಳಲ್ಲಿ ಒಂದು ಪಕ್ಷಕ್ಕೆ ಮತ ಹಾಕಿದರೆ, ಮತ್ತೊಂದು ಪಕ್ಷದ ಚಿಹ್ನೆಗೆ ನಮೂದಾಗುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿದ್ದವು.
ಈ ಎಲ್ಲ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ಗೆ ಉಪಚುನಾವಣಾ ಆಯುಕ್ತರು ನೀಡುವ ಉತ್ತರ ಮತ್ತು ಸುಪ್ರಿಂ ಕೋರ್ಟ್ ನೀಡುವ ತೀರ್ಮಾನ ಮಹತ್ವದ್ದಾಗಿದೆ. ಈಗಾಗಲೇ ಅನೇಕ ಮುಂದುವರಿದ ದೇಶಗಳಲ್ಲಿ ಇವಿಎಂ ಬಳಕೆಯನ್ನು ನಿಷೇಧಿಸಿ, ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ನಡೆಸಲಾಗುತ್ತಿದೆ.