ಹೆಚ್ಚುತ್ತಿದೆ ಪ್ರಕೃತಿ ವಿಕೋಪ

WhatsApp Image 2024-04-04 at 7.53.41 AM
Share It

ತೈವಾನ್ನಲ್ಲಿ ಭೂಕಂಪ, ದಕ್ಷಿಣ ಜಪಾನಿನಲ್ಲಿ ಸುನಾಮಿ

ಪ್ರಬಲ ಭೂಕಂಪದ ಹಿನ್ನೆಲೆ ದಕ್ಷಿಣ ಜಪಾನಿನ ಎರಡು ದ್ವೀಪಗಳಿಗೆ ಸುನಾಮಿಯ ಮೊದಲ ಅಲೆಗಳು ಅಪ್ಪಳಿಸಿವೆ ಎಂದು ಜಪಾನ್ ಸಕರ್ಾರ ತಿಳಿಸಿದೆ. ಜೊತೆಗೆ ತೈವಾನ್ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದರಿಂದ ಕಟ್ಟಡಗಳು ಕುಸಿದಿವೆ.

ಬುಧವಾರ ಮುಂಜಾನೆ ತೈವಾನ್ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಿಲುಕಿ ನಾಲ್ಕು ಜನರ ಸಾವನ್ನಪ್ಪಿದ್ದಾರೆ. ಇಡೀ ದ್ವೀಪದಲ್ಲಿ ಭೀಕರ ಪರಿಸ್ಥಿತಿ ನಿಮರ್ಾಣವಾಗಿದೆ. ದ್ವೀಪದಲ್ಲಿರುವ ಕಟ್ಟಡಗಳು ಕುಸಿದಿವೆ. ಇದಕ್ಕೂ ಮುನ್ನ, ದಕ್ಷಿಣ ಜಪಾನಿನ ಓಕಿನಾವಾ ದ್ವೀಪ ಸಮೂಹಕ್ಕೆ ಜಪಾನ್ ಹವಾಮಾನ ಸಂಸ್ಥೆ ಸುನಾಮಿಯ ಎಚ್ಚರಿಕೆ ನೀಡಿತ್ತು. ಆದರೆ, ಇದೀಗ ಪ್ರಬಲ ಭೂಕಂಪದ ನಂತರ, ಸುನಾಮಿಯ ಮೊದಲ ಅಲೆಗಳು ಎರಡು ದಕ್ಷಿಣ ದ್ವೀಪಗಳನ್ನು ಆವರಿಸಿವೆ.

ಹುವಾಲಿಯನ್ ಕೌಂಟಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ತೈವಾನ್ ರಾಷ್ಟ್ರೀಯ ಅಗ್ನಿಶಾಮಕ ಸಂಸ್ಥೆ ತಿಳಿಸಿದೆ. ಬುಧವಾರ ಬೆಳಿಗ್ಗೆ 8 ಗಂಟೆಗೆ ಸಂಭವಿಸಿದ ಭೂಕಂಪದ ಕೇಂದ್ರ ಬಿಂದು ಹುವಾಲಿಯನ್ ಆಗಿದೆ. ಭೂಕಂಪನದ ಪರಿಣಾಮ ತಾರೊಕೊ ರಾಷ್ಟ್ರೀಯ ಉದ್ಯಾನವನದಲ್ಲಿ ಬಂಡೆಗಳು ಕುಸಿದು ಮೂವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಜಪಾನ್ನ ಹವಾಮಾನ ಸಂಸ್ಥೆಯು 3 ಮೀಟರ್ (9.8 ಅಡಿ) ವರೆಗಿನ ಸುನಾಮಿಯ ಮುನ್ಸೂಚನೆ ನೀಡಿದೆ. ತೈವಾನ್ನ ಭೂಕಂಪ ಮಾನಿಟರಿಂಗ್ ಏಜೆನ್ಸಿಯು ಪ್ರಕಾರ, 7.2 ರ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಅಮೆರಿಕ ಜಿಯೋಲಾಜಿಕಲ್ ಸವರ್ೆ ಮಾಹಿತಿ ಪ್ರಕಾರ, 7.5 ತೀವ್ರತೆಯೆ ಭೂಕಂಪನ ಇದಾಗಿದೆ. ಹುವಾಲಿಯನ್ನ ಕಟ್ಟಡಗಳು ಕುಸಿದಿವೆ. ಸ್ಥಳೀಯ ಕಾಲಮಾನ ಬೆಳಗ್ಗೆ 7.58ಕ್ಕೆ ಭೂಕಂಪ ಸಂಭವಿಸಿದ್ದು, ರಾಜಧಾನಿ ತೈಪೆಯಲ್ಲಿ ಭೂಮಿ ನಡುಗಿದ ಅನುಭವವಾಗಿದೆ.

23 ಮಿಲಿಯನ್ ಜನರಿರುವ ತೈಪೆಯ ದ್ವೀಪದಾದ್ಯಂತ ಸುರಂಗಮಾರ್ಗ ಹಾಗೂ ರೈಲು ಸೇವೆಯನ್ನು ಬಂದ್ ಮಾಡಲಾಗಿದೆ. ಆದರೆ, ರಾಜಧಾನಿಯಲ್ಲಿ ಪರಿಸ್ಥಿತಿ ತ್ವರಿತವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಮಕ್ಕಳು ಶಾಲೆಗೆ ಹೋಗಲು ಆರಂಭಿಸಿದ್ದಾರೆ. ಜೊತೆಗೆ ಬೆಳಗಿನ ಜನ ಸಂಚಾರ ಸಾಮಾನ್ಯವಾಗಿರುವುದು ಕಂಡು ಬಂದಿದೆ.

ಭೂಕಂಪ ಸಂಭವಿಸಿದ 15 ನಿಮಿಷಗಳ ನಂತರ ಯೋನಾಗುನಿ ದ್ವೀಪದ ಕರಾವಳಿಯಲ್ಲಿ 30 ಸೆಂಟಿಮೀಟರ್ (ಸುಮಾರು 1 ಅಡಿ) ಸುನಾಮಿ ಅಲೆ ಪತ್ತೆಯಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.


Share It

You cannot copy content of this page