ಹಾಸನ: ಪೆನ್ ಡ್ರೈವ್ ಪ್ರಕರಣ ಹಾಸನ ಜಿಲ್ಲೆಯ ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಕಿದೆ. ರಾಜಕೀಯ ಕಾರಣಕ್ಕೆ ಇದು ಷಡ್ಯಂತ್ರ ಎಂದು ಸುಮ್ಮನಾಗಬಹುದು. ಆದರೆ, ಅದರ ಸಂತ್ರಸ್ತೆಯರೆಲ್ಲರೂ ಜಿಲ್ಲಯವರೇ ಆಗಿದ್ದು, ಎಲ್ಲರಿಗೂ ಗೊತ್ತಿದೆ ಇದು ನಿಜವೋ ಸುಳ್ಳೋ ಎಂಬುದು.
ಹೌದು, ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕೆಂದರೆ, ಸಾಕ್ಷಿಗಳು ಬಹುಮುಖ್ಯ. ಅಂತಹ ಸಾಕ್ಷಿಗಳ ನಾಶ ಅಧಿಕಾರಸ್ಥರಿಗೆ ಬಲು ಸುಲಭ, ಸಾಕ್ಷಿಗಳನ್ನು ನಾಶ ಮಾಡಬಹುದು, ತಿರುಚಬಹುದು ಮತ್ತು ಇಲ್ಲದಂತೆಯೇ ಮಾಡಬಹುದು. ಇಂತಹ ಅನೇಕ ಪ್ರಕರಣಗಳನ್ನು ಜಿಲ್ಲೆ ಈಗಾಗಲೇ ಕಂಡಿದೆ.
ಪೆನ್ ಡ್ರೆöÊವ್ ಪ್ರಕರಣವನ್ನೇ ತೆಗೆದುಕೊಂಡರೆ, ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಈವರೆಗೆ ಪೊಲೀಸರ ಕೈಗೆ ಸಿಕ್ಕಿಲ್ಲ, ನೂರಾರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಕುರುಹುಗಳಿದ್ದರೂ, ಕುಮಾರಸ್ವಾಮಿ ಅವರು ತಮ್ಮ ಅಣ್ಣನ ಮಗನ ಅನ್ಯಾಯಕ್ಕಿಂತ ಪೆನ್‌ಡ್ರೆöÊವ್ ಹಂಚಿದವರ ಮೇಲೆ ಹೆಚ್ಚು ಸಿಟ್ಟು ವ್ಯಕ್ತಪಡಿಸುತ್ತಾರೆ.
ತಪ್ಪು ಮಾಡಿದವ ಉಪ್ಪು ತಿನ್ನುತ್ತಾನೆ ಎನ್ನುತ್ತಲೇ ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಬೇಕಾದ ಇನ್ನಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಹೀಗಾಗಿ, ಎಲ್ಲೆಲ್ಲಿ ಕಾನೂನು ದುರ್ಬಲಗೊಳಿಸಬಹುದು ಎಂಬುದನ್ನು ಕಾಯುತ್ತಲೇ ಇದ್ದಾರೆ.
ಮನೆಗೆಲಸದ ಮಹಿಳೆಯ ದೂರಿನ ಅನ್ವಯ ಬಂಧನವಾಗಿದ್ದ ರೇವಣ್ಣ ಬೇಲ್ ಸಿಗುವ ಹಿಂದಿನ ದಿನ, ಆಕೆಯಿಂದಲೇ ರೇವಣ್ಣ ಸಆಹೇಬ್ರು, ಭವಾನಿ ಅಕ್ಕ ಒಳ್ಳೆಯವರು ಅವರಿಂದ ನನಗೇನು ತೊಂದರೆ ಇಲ್ಲ ಎಂದು ಹೇಳಿಸಲಾಗಿದೆ. ನನ್ನ ಮಗ ತಪ್ಪು ತಿಳುವಳಿಕೆಯಿಂದ ದೂರು ನೀಡಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಇದರ ಹಿಂದೆ ಬೆದರಿಕೆ ಇದೆಯೋ, ಆಮಿಷವಿದೆಯೋ ಅಥವಾ ಮತ್ತೇನಿದೆಯೋ ದೇವರಿಗೆ ಗೊತ್ತು. ಆದರೆ, ಇಂತಹದ್ದೇ ಸಾಕ್ಷಿಗಳ ಬದಲಾವಣೆ ಮುಂದೆ ಒಂದೊAದಾಗಿ ಆಗುತ್ತಲೇ ಇರುತ್ತದೆ.
ಸಿರಿವಂತರ ದೌರ್ಜನ್ಯ ಪ್ರಕರಣಗಳಲ್ಲಿ ಎಲ್ಲವೂ ಅವರ ಪರವಾಗಿಯೇ ಇರುತ್ತದೆ. ವಿಚಾರಣೆ ನಡೆಸುವ ಅಧಿಕಾರಿಗಳು ಆಗಾಗ, ಅವರ ಪರವಾಗುತ್ತಾರೆ. ನ್ಯಾಯಾಲಯದಲ್ಲಿ ಸಾಕ್ಷಿಯ ಕೊರತೆ ಕಾಡುತ್ತದೆ, ಅತ್ಯುತ್ತಮ ವಕೀಲರು ಸಿಗುತ್ತಾರೆ. ಜೈಲಿನಲ್ಲಿ ಅತ್ಯುತ್ತಮ ವ್ಯವಸ್ಥೆ ಸಿಗುತ್ತದೆ. ಜಾಮೀನು ಸಿಕ್ಕಿದಾಗ ಅಭಿಮಾನಿಗಳು ಪಟಾಕಿ ಹೊಡೆಯುತ್ತಾರೆ.
ಹೋಗಹೋಗುತ್ತಾ ಪ್ರಕರಣ ಹಳ್ಳ ಹಿಡಿಯುತ್ತದೆ. ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣನಿಗೂ ಜಾಮೀನು ಸಿಗುತ್ತದೆ. ಮುಂದೊAದು ದಿನ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕರೂ ಸಿಗಬಹುದು. ಆದರೆ, ದೌರ್ಜನ್ಯಕ್ಕೊಳಗಾದವರಿಗಾದ ಮಾನಸಿಕ ಗಾಯ ಮಾಸದು.
ಒಪ್ಪಿತ ಸೆಕ್ಸೋ, ಬಲವಂತದ ಸೆಕ್ಸೋ ಮಹಿಳೆಯನ್ನು ಬಳಸಿಕೊಂಡಿರುವುದAತೂ ನಿಜ. ಆ ಮಹಿಳೆಯ ವಿಡಿಯೋ ಹರಿಬಿಡುತ್ತಿದ್ದಂತೆ, ಆಕೆಯ ಕುಟುಂಬ ಜಿಲ್ಲೆಯೊಳಗೆ ತಲೆ ಎತ್ತಲು ಸಾಧ್ಯವಾಗುತ್ತಿಲ್ಲ. ವಿಡಿಯೋದಲ್ಲಿ ಅದೆಷ್ಟೋ ಹಳ್ಳಿಯ ಹೆಣ್ಣು ಮಕ್ಕಳಿದ್ದಾರೆ. ಅವರಿಗೆ ಇಡೀ ಊರಿನಲ್ಲಿಯೇ ಮರ್ಯಾದೆ ಇಲ್ಲದಾಗಿದೆ.
ಇಡೀ ಕುಟುಂಬವನ್ನು ಅಪರಾಧಿಭಾವದಲ್ಲಿ ನೋಡಲಾಗುತ್ತಿದೆ. ಮಕ್ಕಳು ತಾಯಿಯನ್ನು ಅನುಮಾನದಿಂದ ನೋಡುತ್ತಿದ್ದಾರೆ. ಗಂಡ ಮಡದಿಯ ಮೇಲೆ ನಂಬಿಕೆ ಗಳಿಸಿಕೊಳ್ಳುವುದು ದೂರದ ಮಾತು.
ಕೆಲ ವಿದ್ಯಾರ್ಥಿನಿಯರು ತಮ್ಮ ಓದನ್ನು ಮೊಟುಕುಗೊಳಿಸಿಕೊಂಡಿದ್ದಾರೆ. ಮದುವೆ ನಿಶ್ಚಯವಾಗಿದ್ದ ಒಬ್ಬಾಕೆಯ ನಿಶ್ಚಿತಾರ್ಥವೇ ಮುರಿದುಬಿದ್ದಿದೆ. ಸಾಮಾಜಿಕ ಸ್ಥಾನಮಾನದಿಂದ ಹೊರಹೋಗುವಂತೆ ಸೂಚನೆಗಳು ಬಂದಿದೆ. ರಾಜಕೀಯ ವಲಯದಲ್ಲಿ ಇರುವವರಿಗೆ ಇವರು ಸಂಪಾದನೆ ಮಾಡಿರುವುದೆಲ್ಲ ಇಂತಹದ್ದರಿAದಲೇ ಎಂಬ ಕುಹಕ ಕೇಳಿಬರುತ್ತಿದೆ.
ಸಾಮಾಜಿಕ ಸ್ಥಾನಮಾನ ಇಲ್ಲದಾಗಿದೆ. ಇಂತಹದ್ದೆಲ್ಲ ನೋವು ಅನುಭವಿಸುತ್ತಿರುವ ಹಾಸನ ಜಿಲ್ಲೆಯ ಹೆಣ್ಣು ಮಕ್ಕಳು, ದೇವೇಗೌಡರ ಕುಟುಂಬವನ್ನು ಮತ್ತೊಮ್ಮೆ ನಂಬುತ್ತಾರಾ? ಹೆಣ್ಣು ಮಕ್ಕಳ ನೋವುಗಳನ್ನು ಕಂಡೂ ಜಿಲ್ಲೆಯ ಪ್ರಜ್ಞಾಬಂತ ಸಮಾಜ ಅವರ ಕುಟುಂಬವನ್ನು ಇನ್ನೊಮ್ಮೆ ರಾಜಕೀಯವಾಗಿ ಮೇಲೆತ್ತುತ್ತಾ? ಬಿಜೆಪಿಗೆ ಹೋದ ಮಾತ್ರಕ್ಕೆ ಪ್ರಜ್ವಲ್ ಮಾಡಿದ ಪಾಪಗಳೆಲ್ಲ ಕಳೆದು ಪಾವನವಾಗ್ತಾರಾ? ಕಾದು ನೋಡಬೇಕಿದೆ.