ಉಪಯುಕ್ತ ಕ್ರೀಡೆ ಸುದ್ದಿ

ಆರ್.ಸಿ.ಬಿ-ಸಿ‌.ಎಸ್.ಕೆ ಪಂದ್ಯಕ್ಕೆ ಮಳೆ ಕಾಡುವ ಸಾಧ್ಯತೆ ಹೆಚ್ಚು!

Share It

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ ಶನಿವಾರ ಮೇ 18 ಸಂಜೆ 7:30 ರಿಂದ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನೈ ಸೂಪರ್ ಕಿಂಗ್ಸ್ ನಡುವೆ ನಿರ್ಣಾಯಕ ಐಪಿಎಲ್ ಪಂದ್ಯ ನಡೆಯಲಿದೆ.

ಆದರೆ ಈ ನಿರ್ಣಾಯಕ ಐಪಿಎಲ್ ಪಂದ್ಯಕ್ಕೆ ಭಾರಿ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಮೇ 18 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಹವಾಮಾನ ಇಲಾಖೆ ಪ್ರತಿ ಬೆಂಗಳೂರಿನಲ್ಲಿ ಶೇಕಡಾ 73 ರಷ್ಟು ಮಳೆ ಸುರಿಯುವ ಸಾಧ್ಯತೆ ಇದೆ. ಅದರಲ್ಲೂ ಅಂದು ಸಂಜೆ 6 ಗಂಟೆಗೆ ಬೆಂಗಳೂರಿನಲ್ಲಿ ಶೇಕಡಾ 80 ರಷ್ಟು ಮಳೆ ಬೀಳುವ ಸಂಭವ ಹೆಚ್ಚು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ‌.

ಇದರಿಂದ ಆರ್.ಸಿ.ಬಿ ತಂಡವು ಪ್ಲೇ-ಆಫ್ ಪ್ರವೇಶಿಸಲು ಮಳೆ ಮರ್ಮಾಘಾತ ನೀಡುವ ಸಾಧ್ಯತೆ ಇದೆ.
ಇಷ್ಟಾದರೂ ಐಪಿಎಲ್ ಟೂರ್ನಿಯ ನಿಯಮಾವಳಿ ಪ್ರಕಾರ ಅಂದು ಮಳೆ ಸುರಿದರೆ ರಾತ್ರಿ 10:56 ರವರೆಗೆ ಕನಿಷ್ಟ 5 ಓವರ್ ಗಳಿಗೆ ಪಂದ್ಯವನ್ನು ನಡೆಸಿ ಫಲಿತಾಂಶವನ್ನು ಘೋಷಿಸಬಹುದಾಗಿದೆ‌.

ಜೊತೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮಳೆ ನೀರನ್ನು ಪಿಚ್ ಮತ್ತು ಮೈದಾನದ ಮೇಲೆ ನಿಲ್ಲದಂತೆ ಮಾಡುವ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿದೆ. ಇದರಿಂದ ಮೇ 18 ಶನಿವಾರ ಸಂಜೆ 7:30 ಕ್ಕೆ ಏನಾಗಬಹುದು? ಎಂಬ ಕುತೂಹಲ ಇದೀಗ ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿದೆ.


Share It

You cannot copy content of this page