ಉಪಯುಕ್ತ ಸುದ್ದಿ

ಜೆಮಿನಿ‌ ಸರ್ಕಸ್ ನಲ್ಲಿ ದೇಶ ವಿದೇಶಗಳ ಹೆಸರಾಂತ ಕಲಾವಿದರಿಂದ ಅಮೋಘ ಪ್ರದರ್ಶನ

Share It

ಪೀಣ್ಯ ದಾಸರಹಳ್ಳಿ‌: ಬೆಂಗಳೂರಿನ‌ ಪೀಣ್ಯ ಎರಡನೇ ಹಂತದ ಜಿಕೆಡಬ್ಲ್ಯೂ ಲೇಔಟ್ ಮೈದಾನದಲ್ಲಿ ಇಂದಿನಿಂದ ಜೂನ್ 10ರ ವರೆಗೆ ಪ್ರತಿದಿನ ಮಧ್ಯಾಹ್ನದ ಆಟ 1,4, 7 ಗಂಟೆಗೆ ಮೂರು ಶೋ ಗಳ ಮೂಲಕ ದೇಶ ವಿದೇಶಗಳ‌ ಹೆಸರಾಂತ ಕಲಾವಿದರ ತಂಡದಿಂದ ಕೂಡಿದ ಜೆಮಿನಿ ಸರ್ಕಸ್ ರೋಚಕ ಮತ್ತು ಅದ್ಭುತ ಪ್ರದರ್ಶನ ಏರ್ಪಡಿಸಲಾಗಿದೆ.

ಹಾಗೆಯೇ ಶಾಲಾ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಪ್ರದರ್ಶನ ನೀಡಲಿದ್ದಾರೆ. ಸರ್ಕಸ್ ನ‌‌ ಪ್ರಮುಖ ಆಕರ್ಷಣೆಯಾದ ಪ್ರಾಣಿಗಳ ಪ್ರದರ್ಶನ ನಿಷೇಧದ ನಂತರ ಸರ್ಕಸ್ ಅನ್ನು ಇನ್ನಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ರಷ್ಯಾ ಸಹಿತ ವಿವಿಧ ದೇಶಗಳ ಕಲಾವಿದರನ್ನು ಬಳಸಿಕೊಂಡು ಸರ್ಕಸ್ ಪ್ರದರ್ಶನ ನೀಡುವ ಮೂಲಕ ಸರ್ಕಸ್ ನ ಜನಾಕರ್ಷಣೆ ಹೆಚ್ಚಿಸುವ ಕಾರ್ಯದಲ್ಲಿ ಜೆಮಿನಿ ಸರ್ಕಸ್ ಮುಂಚೂಣಿಯಲ್ಲಿದೆ.

1951ರಲ್ಲಿ ಎಂ.ವಿ.ಶಂಕರನ್ ಹಾಗೂ‌ ಕೆ. ಸಹಾದೇವನ್ ರವರಿಂದ ಆರಂಭವಾದ ಜೆಮಿನಿ ಸರ್ಕಸ್ ಈವರೆಗೂ ದೇಶ ವಿದೇಶಗಳಲ್ಲಿ ಸಾವಿರಾರು ಪ್ರದರ್ಶನ ನೀಡುವ ಮೂಲಕ ಸರ್ಕಸ್ ಕಲೆಯನ್ನು ಜೀವಂತವಾಗಿ ಉಳಿಸಿದೆ. ಇಂದು ಎಂ.ವಿ.ಶಂಕರನ್ ಅವರ ಮಕ್ಕಳಾದ ಅಜಯ್ ಶಂಕರ್ ಹಾಗೂ ಅಶೋಕ್ ಶಂಕರ್ ಜೆಮಿನಿ ಸರ್ಕಸ್ ಅನ್ನು ಮುಂದುವರಿಸುವ ಮೂಲಕ ತಮ್ಮ ತಂದೆಯ ಹೆಸರಿಗೆ ಕೀರ್ತಿ ತಂದಿದ್ದಾರೆ.

ಬೇಸಿಗೆ ರಜಾ ಸಮಯದಲ್ಲಿ ಬೆಂಗಳೂರು ನಾಗರೀಕರಿಗೆ ಶುದ್ದ ಮನರಂಜನೆ ನೀಡುವ ಉದ್ದೇಶದಿಂದ ಬೆಂಗಳೂರಿನ ಪೀಣ್ಯ ಎರಡನೇ ಹಂತದ ಜಿಕೆಡಬ್ಲ್ಯೂ ಬಡಾವಣೆಯ ಸಮೀಪದ ಮೈದಾನದಲ್ಲಿ ಜೆಮಿನಿ ಸರ್ಕಸ್ ಪ್ರದರ್ಶನ ಆರಂಭವಾಗಿ ಸರ್ಕಸ್ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಬೆಂಗಳೂರಿನ ಪೀಣ್ಯ ಎರಡನೇ ಹಂತದ ಜಿಕೆಡಬ್ಲ್ಯೂ ಬಡಾವಣೆಯ ಸಮೀಪದ ಮೈದಾನದಲ್ಲಿ ಪ್ರದರ್ಶನವಾಗುತ್ತಿರುವ ಜೆಮಿನಿ ಸರ್ಕಸ್ ನಲ್ಲಿ ರಷ್ಯಾ, ತಾಂಜೇನಿಯಾ, ಇಥಿಯೋಪಿಯಾ ಹಾಗೂ ಭಾರತದ ವಿವಿಧ ಭಾಗದ ಹೆಸರಾಂತ ಕಲಾವಿದರ ವೈವಿಧ್ಯಮಯ ರೋಮಾಂಚನಕಾರಿ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ.

ಜೆಮಿನಿ ಸರ್ಕಸ್ ನಲ್ಲಿ ಭಾರತ, ತಾಂಜೇನಿಯಾ, ಇಥಿಯೋಪಿಯಾ ಸಹಿತ ವಿವಿಧ ದೇಶಗಳ ಕಲಾವಿದರ ಸಹಿತ 300 ಕ್ಕೂ ಅಧಿಕ ಮಂದಿ ಉದ್ಯೋಗಿಗಳಿದ್ದು ಅವರಲ್ಲಿ 40 ಮಂದಿ ಪುರುಷ ಕಲಾವಿದರು ಹಾಗೂ 60 ಮಹಿಳಾ ಕಲಾವಿದರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪ್ರಮೋಟರ್ ಪ್ರೇಮನಾಥ್, ಸಂಯೋಜಕರಾದ ಟೈಟಸ್ ವರ್ಗಿಸ್, ಉಸ್ತುವಾರಿ ದಿವಾಕರ್, ಮೇಲ್ವಿಚಾರಕರಾದ ಸೇತು ಮೋಹನ್ ಭಾಗವಹಿಸಿದ್ದರು.


Share It

You cannot copy content of this page