ಬೆಂಗಳೂರು: ಹೆಂಡತಿ ಮತ್ತು ಮಗುವನ್ನು ಕರೆದೊಯ್ಯಲು ಬಂದ ಅಳಿಯನ್ನು ಮಾವನ ಮನೆಯವರೇ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಭೀಕರ ಘಟನೆ ಆನೇಕಲ್ ಬಳಿ ನಡೆದಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಸಮೀಪ ನಡೆದಿರುವ ಘಟನೆಯಲ್ಲಿ ತಮಿಳುನಾಡು ಮೂಲದ ನವೀನ್ ಎಂಬ 36 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ.ಆತನ ಸುಟ್ಟು ಕರಕಲಾದ ಶವ ಪತ್ತೆಯಾಗಿದೆ.
ತಮಿಳುನಾಡು ಮೂಲದ ನವೀನ್ಗೆ ಆನೇಕಲ್ ನಲ್ಲಿ ಮದುವೆಯಾಗಿತ್ತು. ತನ್ನ ಹೆಂಡತಿ ಮತ್ತು ಮಗುವನ್ನು ಕರೆದುಕೊಂಡು ಬರುವುದಾಗಿ ಹೇಳಿ ಆತನ ತನ್ನ ಮಾವನ ಮನೆಗೆ ಬಂದಿದ್ದ, ಆ ವೇಳೆ ಮಾವನ ಮನೆಯವರೇ ಕೊಂದಿದ್ದಾರೆ ಎಂದು ಆತನ ಕುಟುಂಬಸ್ಥರು ದೂರಿದ್ದಾರೆ.
ಘಟನೆ ಸಂಬಂಧ ಪೊಲೀಸರು, ನವೀನ್ ನ ಮಾವ ಸಂಪಂಗಿ, ಮತ್ತು ಮೈದುನ ಮುನೇಶ್ ಎಂಬಾತನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

