ಅಪರಾಧ ಸುದ್ದಿ

ರೈಲ್ವೆ ನಿಲ್ದಾಣಗಳ ಆವರಣದ ಹೋಟೆಲ್‌, ಕ್ಯಾಂಟೀನ್‌ಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

Share It

ರೈಲ್ವೆ ನಿಲ್ದಾಣಗಳ ಆವರಣದ ಹೋಟೆಲ್‌ಗಳು, ಕ್ಯಾಂಟೀನ್‌ಗಳು ಇತರ ಆಹಾರ ಸಂಸ್ಥೆಗಳಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಕೆಎಸ್‌ಆರ್ ನಿಲ್ಧಾಣ, ಯಶವಂತಪುರ, ಕೆ.ಆರ್.ಪುರಂ, ಯಲಹಂಕ, ಕೋಲಾರ, ಮೈಸೂರು, ಹಾವೇರಿ, ಉಡುಪಿ, ಕೊಪ್ಪಳ, ಗದಗ, ದಾವಣಗೆರೆ, ಬಾಗಲಕೋಟೆ, ಕಾರವಾರ, ಯಾದಗಿರಿ, ಬೀರೂರು, ಕಡೂರು ಜಂಕ್ಷನ್, ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿ ಹಾಗೂ ಮಂಗಳೂರು ಸೇರಿ ಒಟ್ಟು 36 ರೈಲ್ವೆ ನಿಲ್ದಾಣಗಳಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.

ನಿಲ್ದಾಣಗಳ ಆವರಣದ ಕ್ಯಾಂಟೀನ್, ಹೋಟೆಲ್ ಹಾಗೂ ಪ್ಯಾಂಟ್ರಿ ಕಾರ್‌ಗಳು ಸೇರಿ 112 ಆಹಾರ ಸಂಸ್ಥೆಗಳಲ್ಲಿ ಆಹಾರ ಗುಣಮಟ್ಟ, ನೈರ್ಮಲ್ಯತೆ, ಲೇಬಲಿಂಗ್ ಮತ್ತು ಸಂಗ್ರಹಣೆಯನ್ನ ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಕಾರ್ಯಾಚರಣೆ ವೇಳೆ ಹಲವು ಗಂಭೀರ ಲೋಪದೋಷ ಬೆಳಕಿಗೆ ಬಂದಿವೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


Share It

You cannot copy content of this page