ಉಪಯುಕ್ತ ಸುದ್ದಿ

ಮಳೆ ಕೊರತೆಯ ಹಿನ್ನೆಲೆ ಮೋಡ ಬಿತ್ತನೆ ಮಾಡಲು ತೀರ್ಮಾನ : ಸಚಿವ ಚಲುವರಾಯಸ್ವಾಮಿ

Share It

ಬೆಂಗಳೂರು: ಮಳೆ ಕೊರತೆ ಹಿನ್ನಲೆ‌ ಮೋಡ ಬಿತ್ತನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯದಲ್ಲಿ ಮಳೆ ಕೊರತೆಯಿಂದ ಜನ ಜಾನುವಾರಗಳಿಗೆ ಕುಡಿಯುವ ನೀರು, ಮೇವಿನ ಸಮಸ್ಯೆ ಉಂಟಾಗುವುದರೊಂದಿಗೆ ಬೆಳೆಗಳು ಸಹ ಒಣಗುತ್ತಿರುವುದರಿಂದ ಅಂತಹ ತಾಲೂಕುಗಳಲ್ಲಿ ತುರ್ತಾಗಿ ಮೋಡ ಬಿತ್ತನೆ ಕಾರ್ಯ ಕೈಗೊಳ್ಳುವ ಬಗ್ಗೆ ಕೋನರೆಡ್ಡಿ ಅವರು, ಭಾರಿ ಮತ್ತು ಮಧ್ಯಮ ನೀರಾವರಿ ಸಚಿವರ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಸಚಿವರು, ಮೋಡ ಬಿತ್ತನೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ‌. ಮೋಡ ಬಿತ್ತನೆ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೋನರೆಡ್ಡಿ ನಿಮಗಾಗಿಯೇ ಮೋಡ ಬಿತ್ತನೆ ಮಾಡಲಾಗುವುದು ಎಂದು ತಿಳಿಸಿದರು.‌

ಮೋಡ ಬಿತ್ತನೆಗೆ ಅಂದಾಜು 28 ಕೋಟಿ ರೂ. ವೆಚ್ಚ ಆಗಬಹುದು. 60 ದಿನಗಳಲ್ಲಿ ಗರಿಷ್ಠ 200 ಗಂಟೆ ಮೋಡ ಬಿತ್ತನೆ ಮಾಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಮೋಡಗಳ ಸಾಂದ್ರತೆ ನೋಡಿ ಎಲ್ಲಿ, ಯಾವಾಗ ಮೋಡ ಬಿತ್ತನೆ ಮಾಡಬೇಕು ಎಂದು ತೀರ್ಮಾನ ಕೈಗೊಳ್ಳಲಾಗುವುದು. ಎರಡು ದಿನದಲ್ಲಿ ಈ ಪ್ರಕ್ರಿಯೆ ಮುಗಿಯಲಿದೆ.‌ ಬಳಿಕ ಮೋಡ ಬಿತ್ತನೆ ಆರಂಭಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Share It

You cannot copy content of this page