ನವದೆಹಲಿ: ಎಸ್ಐಆರ್ ಅಕ್ರಮದ ಸಂಬಂಧ ಮುಖ್ಯ ಚುನಾವಣಾ ಯುಕ್ತ ಜ್ನಾನೇಶ್ ಕುಮಾರ್ ಅಮಾನತು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂ ಕೋಟ್ ಮೂವರು ಚುನಾವಣಾ ಆಯುಕ್ತರಿಗೆ ನೊಟೀಸ್ ನೀಡಿದೆ.
ಚುನಾವಣಾ ಅಕ್ರಮದ ಕುರಿತಂತೆ ಜ್ನಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್ಗೆ ಸರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಜ್ನಾನೇಶ್ ಕುಮಾರ್ ಹಾಗೂ ಇಬ್ಬರು ಉಪ ಚುನಾವಣಾ ಆಯುಕ್ತರಿಗೆ ನೊಟೀಸ್ ನೀಡಿದೆ.
ಅಮಾನತಿಗೆ ಕೋರಿದ್ದ ಅರ್ಜಿಯ ಕುರಿತು ಮದ್ಯಂತರ ಆದೇಶ ಹೊರಡಿಸಲು ನಿರಾಕರಣೆ ಮಾಡಿರುವ ನ್ಯಾಯಾಲಯ, ಸಾಂವಿಧಾನಿಕ ಸಂಸ್ಥೆಗಳು ಕಾನೂನಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ಒಂದು ವೇಳೆ ಅದಕ್ಕೆ ಚ್ಯುತಿ ಬಂದಿದ್ದರೆ, ವಿಚಾರಣೆ ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದು, ನೊಟೀಸ್ ನೀಡಿದೆ.
