ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಹಾಗೂ ನಟಿ ಹಷರ್ಿಕಾ ಪೂಣಚ್ಚ ದಂಪತಿ ಮೇಲೆ ಹಲ್ಲೆ ನಡೆಸಿ ದುಷ್ಕಮರ್ಿಗಳು ಪರಾರಿಯಾಗಿದ್ದು, ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಹಷರ್ಿಕಾ ಪತಿ ಭುವನ್ ನೀಡಿದ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಏಪ್ರಿಲ್ 2 ರಂದು ಹೊಟೇಲ್ವೊಂದರಲ್ಲಿ ಊಟ ಮುಗಿಸಿ ಪಾಕಿರ್ಂಗ್ನಲ್ಲಿ ಕಾರು ಹಿಂತೆಗೆದುಕೊಳ್ಳುವ ವೇಳೆ ಓರ್ವ ಕಿರಿಕ್ ತೆಗೆದು ನಿಂದಿಸಿದ್ದಲ್ಲದೇ, ಹಲ್ಲೆ ಮಾಡಿದ್ದ. ಅವನ ಜೊತೆ ಹಲವರು ಕೂಡ ಸೇರಿದ್ದರು ಎಂದು ಭುವನ್ ಪೊನ್ನಪ್ಪ ಆರೋಪಿಸಿ ದೂರು ನೀಡಿದ್ದಾರೆ.
ಏಪ್ರಿಲ್ 2 ರಂದು ಹೊಟೇಲ್ನಲ್ಲಿ ಊಟ ಮುಗಿಸಿ ಪಾಕಿರ್ಂಗ್ನಲ್ಲಿದ್ದ ಕಾರು ಹಿಂತೆಗೆದುಕೊಳ್ಳುವಾಗ ಕಿಡಿಗೇಡಿಯೊಬ್ಬ ನಿಮ್ಮ ಕಾರು ದೊಡ್ಡದಾಗಿದೆ, ಏಕಾಏಕಿ ಕಾರು ತೆಗೆದರೆ ನಮಗೆ ಟಚ್ ಆಗುತ್ತೆ ಅಂತಾ ಕಿರಿಕ್ ತೆಗೆದಿದ್ದ. ಅದಕ್ಕೆ ಆಯ್ತು ದಾರಿ ಬಿಡಿ ನಾನು ಹೋಗಬೇಕು ಎಂದು ಹೇಳಿದರೂ ಕಿರಿಕ್ ಮುಂದುವರೆಸಿ ಕಾರಿನ ಕಿಟಕಿ ತೆಗೆದು ಹಲ್ಲೆಗೆ ಯತ್ನಿಸಿದ್ದಾನೆ. ಈ ಲೋಕಲ್ ಕನ್ನಡದವ್ರಿಗೆ ಬುದ್ಧಿ ಕಲಿಸಬೇಕು ಅಂತಾ ನಿಂದಿಸಿದ್ದ. ನಂತರ ನನ್ನ ಕುತ್ತಿಗೆಯಲ್ಲಿದ್ದ ಚೈನ್ ಕಿತ್ತುಕೊಳ್ಳಲು ಯತ್ನಿಸಿದ್ದ. ವಿಡಿಯೋ ಮಾಡಲು ಯತ್ನಿಸಿದ ಹಷರ್ಿಕಾ ಮೊಬೈಲ್ ಕಸಿಯಲು ಯತ್ನಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿರುವ ಪೊಲೀಸರು, ಮೊಬೈಲ್ನಲ್ಲಿ ಸೆರೆ ಹಿಡಿರುವ ಇಬ್ಬರು ವ್ಯಕ್ತಿಗಳ ಭಾವಚಿತ್ರ ಆಧರಿಸಿ ಹುಡುಕಾಟ ತೀವ್ರಗೊಳಿದ್ದಾರೆ.