ಅಪರಾಧ ರಾಜಕೀಯ ಸುದ್ದಿ

100 ಕೋಟಿ ಹಗರಣ 1000 ಕೋಟಿಗೆ ದಾಟಿದ್ದೇಗೆ?

Share It

ನವದೆಹಲಿ: ದೆಹಲಿ ಅಬಕಾರಿ ಹಗರಣ ಕುರಿತು ಅನುಮಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇಡಿ ಸಲ್ಲಿಕೆ ಮಾಡಿರುವ ಅಂಕಿ-ಅAಶಗಳ ಕುರಿತು ಅನುಮಾನ ವ್ಯಕ್ತಪಡಿಸಿದೆ.

ಅರವಿಂದ ಕೇಜ್ರೀವಾಲ್ ಸಲ್ಲಿಕೆ ಮಾಡಿರುವ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಈ ವೇಳೆ ಹಗರಣದಲ್ಲಾಗಿರುವ ಬದಲಾವಣೆಗಳ ಬಗ್ಗೆ ಇಡಿ ವಕೀಲರನ್ನು ಪ್ರಶ್ನಿಸಿತು. ನೀವು ಮೊದಲು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದಾಗ, ದೆಹಲಿ ಅಬಕಾರಿ ನೀತಿ ಹಗರಣದ ಪ್ರಮಾಣ 100 ಕೋಟಿ ಇತ್ತು. ಬಳಿಕ 2-3 ವರ್ಷಗಳಲ್ಲಿ ಅದು 1,100 ಕೋಟಿ ರೂಪಾಯಿ ಎಂದು ವಾದಿಸಲಾಗಿದೆ. ಅದು ಹೇಗೆ ಹೆಚ್ಚಳವಾಯಿತು ಎಂದು ಪ್ರಶ್ನಿಸಿತು.

ಇದಕ್ಕೆ ಉತ್ತರ ನೀಡಿದ ಇಡಿ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ೧೦೦ ಕೋಟಿ ನಗದನ್ನು ಹವಾಲಾ ಮಾರ್ಗಗಳ ಮೂಲಕ ವರ್ಗಾಯಿಸಲಾಗಿದೆ. ಇದನ್ನು ಇತರ ರಾಜ್ಯಗಳಲ್ಲಿ ವ್ಯಯಿಸಲಾಗಿದೆ. ಒಟ್ಟು ಹಗರಣದ ಮೊತ್ತ ೧,೧೦೦ ರೂಪಾಯಿಯಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದರು. ಈ ನಡುವೆ ದೆಹಲಿ ಸಿಎಂ ಕೇಜ್ರಿವಾಲ್ ನಿಯಮಾವಳಿ ಪ್ರಕಾರ ನಡೆದುಕೊಳ್ಳಬೇಕು. ಹೀಗಾಗಿ, ಅವರಿಗೆ ಜಾಮೀನು ನೀಡಬಾರದು. ಆರೋಪಿ ಸ್ಥಾನದಲ್ಲಿರುವ ಅವರು ಯಾವುದೇ ಕಡತಗಳಿಗೆ ಸಹಿ ಹಾಕುವಂತಿಲ್ಲ ಎಂದು ವಾದಿಸಿದರು.

ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಶೇಕ್ ಮನು ಸಿಂಘ್ವಿ, ದೆಹಲಿಯಲ್ಲಿ ಮುಖ್ಯಮಂತ್ರಿ ಇಲ್ಲದ ಸರ್ಕಾರ ನಡೆಯುತ್ತಿದೆ. ಇದನ್ನು ಹೀಗೆಯೇ ಮುಂದುವರಿಸಬೇಕೆ?. ಜಾಮೀನು ಸಿಕ್ಕಲ್ಲಿ ಅವರು ಯಾವುದೇ ಕಡತಗಳಿಗೆ ಸಹಿ ಮತ್ತು ನಿರ್ದೇಶನ ನೀಡುವುದಿಲ್ಲ ಎಂದು ಆಶ್ವಾಸನೆ ನೀಡಿದರು

ಜಾಮೀನು ನೀಡಲು ನಿರಾಕರಿಸಿದ್ದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ದೆಹಲಿ ಸಿಎಂ ಕೇಜ್ರೀವಾಲ್, ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ದೀಪಾಂಕರ್ ದತ್ತ ನೇತೃತ್ವದ ಪೀಠ ಜಾಮೀನು ನೀಡಲು ಒಪ್ಪಲಿಲ್ಲ.

ಕೇಜ್ರೀವಾಲ್ ಸಿಎಂ ಆಗಿರುವ ಕಾರಣ ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ. ಅವರು ಗಂಭಿರ ಪ್ರಕರಣದ ಆರೋಪ ಹೊತ್ತು ಅದೇಗೆ ಸಿಎಂ ಕಚೇರಿಯಲ್ಲಿ ಹೋಗಿ ಕೆಲಸ ಮಾಡುತ್ತಾರೆ. ಇದು ಇತರ ಪ್ರಕರಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. .

ಅರವಿಂದ ಕೇಜ್ರೀವಾಲ್ ಅವರಿಗೆ ಸುಪ್ರೀಂ ಕೋರ್ಟ್ನಲ್ಲೂ ಹಿನ್ನಡೆಯಾಗಿದ್ದು, ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಗುರುವಾರ ಅಥವಾ ಮುಂದಿನ ವಾರ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆಯಿದ್ದು, ಕೇಜ್ರೀವಾಲ್ ಜಾಮೀನಿನ ನಿರೀಕ್ಷಣೆಯಲ್ಲಿದ್ದಾರೆ.


Share It

You cannot copy content of this page