ಇದೇ ಮೇ 23ರಂದು ಹೊಸಕೋಟೆ ನಗರದಲ್ಲಿ ನಡೆಯಲಿರುವ ಶ್ರೀ ಅವಿಮುಕ್ತೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಹಾಗೂ ಶ್ರೀ ದ್ರೌಪದಮ್ಮ ದೇವಿಯ ಕರಗ ಮಹೋತ್ಸವದ ಅಂಗವಾಗಿ ಇಂದು ಪೂರ್ವಭಾವಿ ಸಭೆ ನಡೆಸಲಾಯಿತು. ಹೊಸಕೋಟೆ ನಗರದ ತೇರು ಸಮಿತಿ, ಪೇಟೆ ಯಜಮಾನರು ಮತ್ತು ಮುಖಂಡರು ಭಾಗಿಯಾಗಿದ್ದರು.
ಇದೇ ಸಂಧರ್ಭದಲ್ಲಿ ತೇರು ಸಮಿತಿಯ ಸಂಚಾಲಕರಾಗಿ ಬಿಎಂಆರ್ ಡಿ ಅಧ್ಯಕ್ಷರು, ನಗರಸಭೆ ಸದಸ್ಯರಾದ ಶ್ರೀ ಕೇಶವಮೂರ್ತಿ ಅವರನ್ನು ಒಮ್ಮತದೊಂದಿಗೆ ಆಯ್ಕೆ ಮಾಡಲಾಯಿತು.