ಬೆಂಗಳೂರು, ಭಾರತ, ಮೇ 7, 2024: ಫನ್ ವರ್ಲ್ಡ್ ಅಮ್ಯೂಸ್ಮೆಂಟ್ ಪಾರ್ಕ್ ಬೆಂಗಳೂರಿನಲ್ಲಿ ಥ್ರಿಲ್ ಮತ್ತು ಉತ್ಸಾಹವನ್ನು ಮರು ವ್ಯಾಖ್ಯಾನಿಸುವ ತನ್ನ ಹೊಚ್ಚಹೊಸ ಆಕರ್ಷಣೆಗಳನ್ಜು ಅನಾವರಣಗೊಳಿಸಲು ಸಂತೋಷ ಪಡುತ್ತದೆ. ಹಲವು ವರ್ಷಗಳಿಂದ ಕೋಟ್ಯಂತರ ಜನರನ್ನು ರಂಜಿಸುತ್ತಿರುವ ಪರಂಪರೆ ಹೊಂದಿರುವ ಫನ್ ವರ್ಲ್ಡ್ ಕುಟುಂಬಗಳು ಮತ್ತು ಸಾಹಸ ನಿರೀಕ್ಷಿಸುವರಿಗೆ ಪ್ರಮುಖ ತಾಣವಾಗಿ ಮುಂದುವರಿಯುತ್ತಿದೆ.
ಫನ್ ವರ್ಲ್ಡ್ ಇದೀಗ 29 ರೋಮಾಂಚಕ ಹೊಸ ವಾಟರ್ ಸ್ಲೈಡ್ ಗಳನ್ನು ಪರಿಚಯಿಸಿದ್ದು ಅದರಲ್ಲಿ ದೇಶದಲ್ಲೇ ಅತ್ಯಂತ ಎತ್ತರದ ರೈಡ್ ಒಳಗೊಂಡಿದ್ದು ಈ ವಿಶೇಷವು ನಮ್ಮ ಪಾರ್ಕ್ ನಲ್ಲಿ ಮಾತ್ರ ಲಭ್ಯವಿದೆ. ಈ ಮಹತ್ತರ ಸೇರ್ಪಡೆಯು ಹಿಂದೆಂದೂ ಕಾಣದ ರೋಮಾಂಚಕ ಅನುಭವ ನೀಡುತ್ತದೆ. ಈ ಉತ್ಸಾಹಕ್ಕೆ ಸೇರ್ಪಡೆಯಾದಂತೆ ಫನ್ ವರ್ಲ್ಡ್ ಹೆಮ್ಮೆಯಿಂದ ದೇಶದ ಅತ್ಯಂತ ದೊಡ್ಡ ಕರೌಸಲ್ ಹೊಂದಿದ್ದು 100 ಸೀಟುಗಳ ಸಾಮರ್ಥ್ಯ ಹೊಂದಿದ್ದ ಎಲ್ಲ ವಯೋಮಾನದವರನ್ನೂ ರಂಜಿಸುತ್ತದೆ.
ಬೆಂಗಳೂರಿನ ನಗರದ ಕೇಂದ್ರದಲ್ಲಿರುವ ಫನ್ ವರ್ಲ್ಡ್ ನಲ್ಲಿರುವ ಹೊಸ ಮಾನವ ನಿರ್ಮಿತ ಜಲಪಾತವು ಪಾರ್ಕ್ ನ ಸಾಹಸಗಳ ಸಾಲಿಗೆ ಆಕರ್ಷಕ ಸೇರ್ಪಡೆಯಾಗಿದೆ. ಈ ಪ್ರಾರಂಭೋತ್ಸವದಲ್ಲಿ ವಯಸ್ಕರು ಹಾಗೂ ಮಕ್ಕಳಿಗೆ ಎಚ್ಚರಿಕೆಯಿಂದ ರೂಪಿಸಲಾದ 10 ಉತ್ಸಾಹಕರ ಕ್ರೀಡೆಗಳನ್ನು ಪ್ರದರ್ಶಿಸಿದ್ದು ಅವು ಪಾರ್ಕ್ ನ ವಿಸ್ತಾರ ಕೊಡುಗೆಗಳನ್ನು ಮತ್ತಷ್ಟು ಹೆಚ್ಚಿಸುತ್ತವೆ. ಒಟ್ಟು 85ಕ್ಕೂ ಹೆಚ್ಚು ರೈಡ್ ಗಳನ್ನು ಯುವ ಮತ್ತು ಯುವ ಮನಸ್ಸು ಹೊಂದಿದವರಿಗೆ ತಂದಿರುವ ಫನ್ ವರ್ಲ್ಡ್ ಭೇಟಿ ನೀಡಿದ ಎಲ್ಲರಿಗೂ ಸ್ಮರಣೀಯ ಅನುಭವ ನೀಡುತ್ತದೆ.
ಫನ್ ವರ್ಲ್ ಮ್ಯಾನೇಜರ್ ಶ್ರೀ ಪ್ರದೀಪ್, “ನಾವು ನಮ್ಮ ಹೊಚ್ಚಹೊಸ ಆಕರ್ಷಣೆಗಳ ರೋಮಾಂಚನ ಮತ್ತು ಅದ್ಭುತವನ್ನು ಅನುಭವಿಸಲು ಸಾರ್ವಜನಿಕರನ್ನು ಆಹ್ವಾನಿಸಲು ಸಂತೋಷಿಸುತ್ತೇವೆ” ಎಂದರು. “ಈ ಮಹತ್ತರ ರೈಡ್ ಗಳು ಮತ್ತು ಅನುಭವಗಳ ಪರಿಚಯದಿಂದ ನಾವು ಸ್ಮರಣೀಯ ನೆನಪುಗಳನ್ನು ಸೃಷ್ಟಿಸಲು ಮತ್ತು ಎಲ್ಲ ವಯೋಮಾನದ ಸಂದರ್ಶಕರಿಗೆ ಸರಿಸಾಟಿ ಇರದ ಮನರಂಜನೆ ನೀಡುವ ಗುರಿ ಹೊಂದಿದ್ದೇವೆ” ಎಂದರು.
ಹಿಂದೆಂದೂ ಕಾಣದಂತಹ ಸಾಹಸದಲ್ಲಿ ತೊಡಗಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬೇಡಿ. ನಾವು ಹೊಚ್ಚಹೊಸ ಕೊಡುಗೆಗಳನ್ನು ಅನಾವರಣಗೊಳಿಸುತ್ತಿರುವ ಫನ್ ವರ್ಲ್ಡ್ ಸೇರಿಕೊಳ್ಳಿರಿ ಮತ್ತು ವಿನೋದ ಮತ್ತು ಉತ್ಸಾಹದ ಸ್ಫೂರ್ತಿಯನ್ನು ಸಂಭ್ರಮಿಸಿ.
ಫನ್ ವರ್ಲ್ಡ್, ಟಿ.ವಿ. ಟವರ್ ಎದುರು, ಪ್ಯಾಲೇಸ್ ಗ್ರೌಂಡ್ಸ್, ಜಯಮಹಲ್ ಮುಖ್ಯರಸ್ತೆ, ಜೆ.ಸಿ.ನಗರ, ಬೆಂಗಳೂರು