- ಶತಾಯುಷಿಯ ಅಭಿನಂದನೆಗೆ ವಿನೂತನ ಕಾರ್ಯಕ್ರಮ
- ಚನ್ನರಾಯಪಟ್ಟಣ ತಾಲೂಕು ದೇವಿಗೆರೆಯ ಶತಾಯುಷಿ
ಚನ್ನರಾಯಪಟ್ಟಣ: 100 ವರ್ಷ ತುಂಬಿದ ಅಜ್ಜನಿಗೆ ಇಡೀ ಕುಟುಂಬ, ಹಾಗೂ ಗ್ರಾಮದ ವತಿಯಿಂದ ಹುಟ್ಟುಹಬ್ಬದ ಸಂಭ್ರಮ ಆಚರಣೆ ಮಾಡಿದ ವಿಶೇಷ ಕಾರ್ಯಕ್ರಮ ದೇವಿಗೆರೆ ಗ್ರಾಮದಲ್ಲಿ ನಡೆದಿದೆ.
ಮಕ್ಕಳು, ಮೊಮ್ಮಕ್ಕಳು ಹಾಗೂ ಗ್ರಾಮದ ಪುಟ್ಟ ಮಕ್ಕಳು ಸೇರಿದಂತೆ ಎಲ್ಲರೂ ಅಜ್ಜನಿಗೆ ಹ್ಯಾಪಿ ಬರ್ತಡೆ ಎಂದು ಕೂಗುತ್ತಾ, ಕೇಕನ್ನ ಕಟ್ ಮಾಡಿಸಿದ ಘಟನೆ ಇದಾಗಿತ್ತು. ಈ ಅಜ್ಜ ತಾಲೂಕಿನ ಕಲ್ಕೆರೆ ದೇವಿಗೆರೆ ಗ್ರಾಮದ, ನೂರು ವರ್ಷ ತುಂಬಿದ, ನಿವೃತ್ತ ಶಿಕ್ಷಕ, ರಂಗಕರ್ಮಿ, ಹಾಗೂ ರೈತ ಡಿ ಮಲ್ಲೇಗೌಡರು, ಗ್ರಾಮದಲ್ಲಿ ಹುಟ್ಟು ಹಬ್ಬದ ಸಂಭ್ರಮದ ಸಂಗಡ ವಿಶೇಷ ಭೋಜನ ಮಾಡಲಾಗಿತ್ತು.
ಮಲ್ಲೇಗೌಡರ ಮನೆಯ ಹತ್ತಿರವೇ ಶಾಮಿಯಾನ ಹಾಕಿ ವಿಶೇಷ ವೇದಿಕೆ ನಿರ್ಮಿಸಲಾಗಿತ್ತು. ಶತಾಯುಷಿಗೆ ಮೈಸೂರು ಪೇಟ ತೊಡಿಸಿ, ಹಾರವನ್ನ ಅರ್ಪಿಸಿ, ಪುಷ್ಪಗಳನ್ನ ನೀಡಿ, ಅದನ್ನು ಉಡುಗೊರೆಯಾಗಿ ನೀಡಿದ, ಬಂಧುಗಳು ಸ್ನೇಹಿತರು, ವಿಶೇಷವಾಗಿ ಸತ್ಕರಿಸಿದರು. ಅಜ್ಜ ಮಲ್ಲೇಗೌಡರು ಕೂಲಿ ಮಠದಲ್ಲಿ ಶಿಕ್ಷಣವನ್ನ ಅಭ್ಯಾಸ ಮಾಡಿ, ಸರ್ಕಾರಿ ಶಾಲೆಯ ಶಿಕ್ಷಕರಾಗಿ ಸೇವೆ ಮಾಡಿದ್ದಾರೆ ಪ್ರತಿ ವರ್ಷ ಗ್ರಾಮದ ಹಬ್ಬದ ಸಂದರ್ಭದಲ್ಲಿ, ಸಾಮಾಜಿಕ ಪೌರಾಣಿಕ ನಾಟಕಗಳನ್ನು ಅಭಿನಯಿಸುವ ಪರಿಪಾಠ ಬೆಳೆಸಿದ್ದಾರೆ, ಸ್ವತಹ ಹಾರ್ಮೋನಿಯಂ ಮಾಸ್ಟರ್ ಆದ ಇವರು, ಕಲೆಯನ್ನ ಪ್ರೋತ್ಸಾಹಿಸುತ್ತಿದ್ದಾರೆ.
ಸದಾ ಹಸನ್ಮುಖಿ ಗೌಡರು ಈ ವೇಳೆ ಮಾತನಾಡಿ. ನನಗೆ ಎಲ್ಲರೂ ಸ್ನೇಹಿತರು, ನನಗೆ ವಿರೋಧಿಗಳೇ ಇಲ್ಲ ನನ್ನಿಂದ ನೋವಾಗಿದ್ದರೆ ಕ್ಷಮಿಸಿ ಎನ್ನುತ್ತಾರೆ. ಸುಮಾರು 250 ಮನೆಗಳನ್ನು ಹೊಂದಿದ ದೇವಿಗೆರೆ ಗ್ರಾಮ. ಕಲ್ಪವೃಕ್ಷದ ಗ್ರಾಮವು ಆಗಿದೆ. ಹಳ್ಳಿಯ ಸೊಬಗನ್ನ ಸೊಗಡನ್ನ ಹೊಂದಿದೆ ಮೌಲ್ಯಗಳನ್ನ ಸಂಸ್ಕಾರವನ್ನ ಬಿತ್ತುವ ಕಾರ್ಯಕ್ರಮ ಇದಾಗಿದೆ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ರಂಗೇಗೌಡ, ನಿವೃತ್ತ ಉಪನ್ಯಾಸಕರಾದ ಸಿದ್ದೇಗೌಡರು, ಚಂದ್ರೇಗೌಡರು, ಬ್ಯಾಂಕ್ ಅಧಿಕಾರಿ ಆಗಿದ್ದ ಬೆಟ್ಟೆಗೌಡರು, ಶಿಕ್ಷಕ ರಾಘವೇಂದ್ರ, ಸಮಾಜ ಸೇವಕಿ ಸಾವಿತ್ರಮ್ಮಾ , ಅಜ್ಜನ ಕಾರ್ಯಗಳನ್ನು ಸ್ಮರಿಸಿ ಪ್ರಶಂಶಿಸಿದ್ದಾರೆ.
ಕಾರ್ಯಕ್ರಮದಲ್ಲಿ ನಿವೃತ್ತ ಡಿಡಿಪಿಐ ಡಿ ಟಿ ಪುಟ್ಟರಾಜು, ಡಯಟ್ ನ ಉಪನ್ಯಾಸಕ ಕೃಷ್ಣೆಗೌಡರು, ಮಲ್ಲೇಗೌಡರ ಪುತ್ರ ಹಾಗೂ ಉಪನ್ಯಾಸಕ ಡಿ. ಎಂ ಕೃಷ್ಣ, ಗುರು ಕಲಾ ಸಂಘದ ಪದಾಧಿಕಾರಿಗಳಾದ ಎಚ್ಎನ್ ರಾಮಣ್ಣ, ಅಂತನಹಳ್ಳಿ ಕೃಷ್ಣೇಗೌಡ, ಎಸ್. ಎಲ್ ಎನ್ ಮೂರ್ತಿ, ಕಲಾವಿದ ಮಹದೇವ್, ಶಿವಲಿಂಗೇಗೌಡರು, ನರಸಿಂಹೇಗೌಡರು, ಸೇರಿದಂತೆ ಇತರರು ಹಾಜರಿದ್ದರು.