ನವದೆಹಲಿ: ಸಾಮಾಜಿಕ ಜಾಲತಾಣದ ಮೂಲಕ ಆಗಾಗ ಸದ್ದು ಮಾಡುವ ಆನಂದ್ ಮಹೀದ್ರ ಮತ್ತೊಮ್ಮೆ ತಮ್ಮ ಸೇವಾ ಮನೋಭಾವನೆಯಿಂದ ಸದ್ದು ಮಾಡಿದ್ದಾರೆ.
ಸಣ್ಣ ಸಣ್ಣ ಸಾಮಾಜಿಕ ಸಮಸ್ಯೆಗಳಿಗೆ ತುಡಿಯುವ ಗುಣವುಳ್ಳ ಆನಂದ್ ಮಹೀದ್ರ ಅವರು, ಆಗಾಗ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವರ ನೆರವಿಗೆ ದಾವಿಸುವ ಮೂಲಕ ಸದ್ದು ಮಾಡುತ್ತಾರೆ. ಇದೀಗ ದೆಹಲಿಯಲ್ಲಿ ಕುಟುಂಬ ನಿರ್ವಹಣೆಗಾಗಿ ತಳ್ಳುಗಾಡಿಯಲ್ಲಿ ರೋಲ್ಸ್ ಮಾರಾಟ ಮಾಡುತ್ತಿರುವ ಹುಡುಗನ ನೆರವಿಗೆ ಧಾವಿಸಿದ್ದಾರೆ.
ಶಾಲೆಯಲ್ಲಿ ಓದುತ್ತಾ, ಸ್ನೇಹಿತರೊಂದಿಗೆ ಆಟವಾಡುತ್ತಾ ಕಾಲ ಕಳೆಯಬೇಕಿದ್ದ ೧೦ ವರ್ಷದ ಜಸ್ಪ್ರೀತ್ ಎಂಬ ಬಾಲಕನ ಹೆಗಲ ಮೇಲೆ ಇದೀಗ ಕುಟುಂಬ ನಿರ್ವಹಣೆಯ ಹೊರೆ ಬಿದ್ದಿದೆ. ಇದರಿಂದ ತಮ್ಮ ಸಂಬAಧಿ ಜೊತೆ ರಾಷ್ಟ್ರ ರಾಜಧಾನಿ ದೆಹಲಿಯ ರಸ್ತೆ ಬದಿಯಲ್ಲಿ ತಳ್ಳುಗಾಡಿಯಲ್ಲಿ ರೋಲ್ಸ್ ಮಾರಾಟ ಮಾಡುತ್ತಿದ್ದಾನೆ. ಆ ಹುಡುಗನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದನ್ನು ಗಮನಿಸಿದ ಮಹೀಂದ್ರ ನೆರವಿಗೆ ಬಂದಿದ್ದಾರೆ.
ಕುಟುಂಬದ ಜವಾಬ್ದಾರಿಯಿಂದಾಗಿ ಬಾಲಕ ಶಿಕ್ಷಣದಿಂದ ವಂಚಿತನಾಗಬಾರದು. ಶಿಕ್ಷಣಕ್ಕೆ ನಮ್ಮಿಂದಾದ ಸಹಾಯ ಮಾಡುತ್ತೇವೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊAಡಿರುವ ಮಹೀಂದ್ರಾ, ಕುಟುಂಬ ಸಾಕುವ ಹೊಣೆ ಹೊತ್ತಿರುವ ಆತನ ಪ್ರಯತ್ನವನ್ನು ಮೆಚ್ಚಿದ್ದಾರೆ.
ಆತನ ಬಗ್ಗೆ ಸುಳಿವು ಸಿಕ್ಕರೆ ತಕ್ಷಣ ತಿಳಿಸಿ. ನವದೆಹಲಿಯ ತಿಲಕ್‌ನಗರ್‌ನಲ್ಲಿ ಹುಡುಗ ಇರಬೇಕು ಎಂದು ನಂಬುತ್ತೇನೆ. ಮಹೀಂದ್ರಾ ಫೌಂಡೇಷನ್ ತಂಡ ಕೂಡ ಹುಡುಕಾಟ ನಡೆಸಿ, ಶಿಕ್ಷಣಕ್ಕೆ ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ. ಸದ್ಯ ಅವರ ಈ ಎಕ್ಸ್ ಪೋಸ್ಟ್ ೫೦೦ ಸಾವಿರ ಬಾರಿ ಶೇರ್ ಆಗಿದ್ದು, ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.