ಹುಬ್ಬಳ್ಳಿ: ನೇಹಾ ಪ್ರಕರಣದ ಬಿಸಿ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಕಹಾನಿ ಕೊಲೆ ನಡೆದಿದ್ದು, ಕೊಲೆಗಾರ ಯುವಕನ ಪತ್ತೆಗೆ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ.
ಯುವಕನೊಬ್ಬ ಅಂಜಲಿಗೆ ನಾಲ್ಕು ಬಾರಿ ಚಾಕು ಇರಿದು ಕೊಲೆ ಮಾಡಿದ್ದಾನೆ. ಅಂಜಲಿ ಕೊಲೆ ಮಾಡಿದ ವಿಶ್ವ ಅಲಿಯಾಸ್ ಗಿರಿ ಪರಿಚಯಸ್ಥ ಹುಡುಗನಾಗಿದ್ದು, ಬುಧವಾಋ ಮುಂಜಾನೆ ಅಂಜಲಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದರು.
ಮಲಗಿದ ವೇಳೆ ಬಾಗಿಲು ತೆರೆಯುತ್ತಲೇ ಚಾಕು ಇರಿದು ಕೊಲೆ ಮಾಡಿದ್ದಾನೆ. ಅವರ ಮನೆಯವರು ದೂರು ಕೊಟ್ಟಿರೋ ಪ್ರಕಾರ, ವಿಶ್ವ ಅಂಜಲಿ ಪ್ರೀತಿ ಮಾಡುವಂತೆ ಪಟ್ಟು ಹಿಡಿದಿದ್ದ. ಅಂಜಲಿ ಪ್ರೀತಿ ನಿರಾಕರಣೆ ಮಾಡಿರೋ ಕಾರಣಕ್ಕೆ ಕೊಲೆ ಮಾಡಿರುವ ಶಂಕೆ ಇದೆ.
ಕೊಲೆ ಆರೋಪಿ ಪತ್ತೆಗಾಗಿ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರನ್ ತಿಳಿಸಿದ್ದಾರೆ. ಆರೋಪಿ ವಿಶ್ವ ಅಲಿಯಾಸ್ ಗಿರಿ ವಿರುದ್ದ ಹಲವು ಪ್ರಕರಣಗಳಿವೆ. ಆತ ಕಳ್ಳತನದ ಆಸಾಮಿಯಾಗಿದ್ದು, ಆತನ ವಿರುದ್ದ ಹಲವು ಕಳ್ಳತನದ ಪ್ರಕರಣಗಳು ಇವೆ. ಈ ಎಲ್ಲ ಆಯಾಮದಲ್ಲಿ ತನಿಖೆ ನಡೆಸಲಾಗ್ತಿದೆ ಎಂದರು.
ಕೊಲೆ ಬೆದರಿಕೆಗೆ ಸಂಬAಧಿಸಿ ಅಂಜಲಿ ಕುಟುಂಬ ಬೆಂಡಿಗೇರಿ ಪೊಲೀಸ್ ಠಾಣೆಗೆ ಬಂದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಠಾಣೆಗೆ ಬಂದಿದ್ದು ನಿಜ. ಈ ಕುರಿತು ಠಾಣೆಯಲ್ಲಿ ಸಿಸಿ ಕ್ಯಾಮೆರಾ ದೃಶ್ಯಗಳಿವೆ. ಆದರೆ ಯಾವ ಕಾರಣಕ್ಕೆ ಬಂದಿದ್ದಾರೆ ಅನ್ನೋ ಸ್ಪಷ್ಟತೆ ಇಲ್ಲ. ಹೀಗಾಗಿ ಡಿಸಿಪಿ ಕ್ರೈಂ ಅವರ ನೇತೃತ್ವದಲ್ಲಿ ತನಿಖೆಗೆ ಸೂಚನೆ ನೀಡಲಾಗಿದೆ. ಆದರೆ, ಈ ಬಗ್ಗೆ ತನಿಖೆ ಆರಂಭಿಸಿದ್ದೇವೆ. ಅಕಸ್ಮಾತ್ ಬೆಂಡಿಗೇರಿ ಪೊಲೀಸ್ ಠಾಣೆ ಸಿಬ್ಬಂದಿ ಲೋಪದೋಷ ಇದ್ರೆ ಕ್ರಮ ಕೈಗೊಳ್ತೀವಿ ಎಂದರು.