ಬೆಂಗಳೂರು: ಮೋದಿ ಮತ್ತೊಮ್ಮೆ ಏನಾದ್ರೂ ಗೆದ್ದು ಬಂದರೆ ದಲಿತರು ಗುಲಾಮರಂತೆ ಬದುಕಬೇಕಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಂವಿಧಾನ ಬದಲಾವಣೆಯ ಹುನ್ನಾರ ನಡೆಯುತ್ತಿದೆ. ಮೀಸಲಾತಿ ತೆಗೆದು ಹಾಕಬೇಕು ಎಂಬುದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಬಹುದಿನದ ಕನಸು. ಈಗ ಮತ್ತೊಮ್ಮೆ ಮೋದಿ ಗೆದ್ದರೆ, ಆ ಕನಸನ್ನು ಅವರು ನನಸು ಮಾಡಿಕೊಳ್ಳುತ್ತಾರೆ ಎಂದರು.
ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಈಗಾಗಲೇ ಜಾರಿಗೆ ಬಂದAತಾಗಿದೆ. ಮೋದಿ ತಮ್ಮ ಮನಸ್ಸಿಗೆ ಬಂದAತೆ ಆಡಳಿತ ನಡೆಸುತ್ತಿದ್ದಾರೆ. ವಿರೋಧ ಮಾಡಿದವರನ್ನು ಜೈಲಿಗೆ ಕಳುಹಿಸುವ ಹುನ್ನಾರ ನಡೆಯುತ್ತಿದೆ. ಈ ಹಿನ್ನಾರಕ್ಕೆ ಬಲಿಯಾಗ ಅನೇಕ ನಾಯಕರು ಜೈಲು ಸೇರಿದ್ದಾರೆ. ಕೆಲವರು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ತಮ್ಮೆಲ್ಲ ತಪ್ಪುಗಳನ್ನು ಮಾಫಿ ಮಾಡಿಕೊಂಡಿದ್ದಾರೆ ಎಂದರು.
ಡಾ. ಅಂಬೇಡ್ಕರ್ ಅವರು ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಾರಿಗೆ ತಂದ ಸಂವಿಧಾನವನ್ನು ವಿರೋಧಿಸುತ್ತಲೇ ಅಧಿಕಾರಕ್ಕೆ ಬಂದಿರುವ ಬಿಜೆಪಿ ಮತ್ತು ಮೋದಿ ಮತ್ತೊಮ್ಮೆ ಅಧಿಕಾರ ಸಿಕ್ಕರೆ, ಸಂವಿಧಾನ ಬದಲಾವಣೆಗೆ ಕೈ ಹಾಕುತ್ತಾರೆ. ಆಗ ದಲಿತರು ಗುಲಾಮರಂತೆ ಬದುಕಬೇಕಾಗುತ್ತದೆ. ಹಿಂದಿನ ಶತಮಾನದಲ್ಲಿದ್ದ ಮನು ಸಂವಿಧಾನವನ್ನು ಜಾರಿಗೆ ತಂದು ನಮ್ಮನ್ನು ಗುಲಾಮರನ್ನಾಗಿ ಮಾಡಿಕೊಳ್ಳುವ ಹುನ್ನಾರ ನಡೆದಿದೆ ಎಂದರು.