ಅಪರಾಧ ರಾಜಕೀಯ ಸುದ್ದಿ

ಇಂದು ಶರಣಾಗ್ತಾರಾ ಪ್ರಜ್ವಲ್ ರೇವಣ್ಣ?

Share It

ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ಹಾಕಿದ ಎಸ್‌ಐಟಿ
ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು

ಬೆಂಗಳೂರು: ಪೆನ್ ಡ್ರೈವ್ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಇಂದು ಶರಣಾಗುವ ಸಾಧ್ಯತೆಯಿದ್ದು, ವಿಮಾನ ನಿಲ್ದಾಣಗಳಲ್ಲಿ ಎಸ್‌ಐಟಿ ಪೊಲೀಸರು ಅಲರ್ಟ್ ಆಗಿದ್ದಾರೆ.

ಪ್ರಜ್ವಲ್ ರೇವಣ್ಣ ಜರ್ಮನಿಯಲ್ಲಿರುವುದಾಗಿ ಮೊದಲಿಗೆ ಹೇಳಲಾಗುತ್ತಿತ್ತು. ಆದರೆ, ಅವರು ದುಬೈನಲ್ಲಿರುವ ಸಾಧ್ಯತೆಗಳು ಹೆಚ್ಚಾಗಿವೆ. ದುಬೈನಿಂದ ಬೆಂಗಳೂರು ಅಥವಾ ಮಂಗಳೂರು ವಿಮಾನ ನಿಲ್ದಾಣಕ್ಕೆ ನೇರವಾಗಿ ಆಗಮಿಸುವ ಸಾಧ್ಯತೆಯಿದ್ದು, ಆ ವೇಳೆ ಪ್ರಜ್ವಲ್‌ರನ್ನು ಬಂಧಿಸಲು ಎಸ್‌ಐಟಿ ಅಧಿಕಾರಿಗಳು ಕಾಯುತ್ತಿದ್ದಾರೆ. ಹೀಗಾಗಿ, ವಿಮಾನ ನಿಲ್ದಾಣಗಳಲ್ಲಿ ಕಣ್ಗಾವಲು ಇಡಲಾಗಿದೆ.

ಈಗಾಗಲೇ ಬಂಧನಕ್ಕೊಳಗಾಗಿರುವ ಅವರ ತಂದೆ ಎಚ್.ಡಿ.ರೇವಣ್ಣ, ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯುಲಿದ್ದು, ರೇವಣ್ಣಗೆ ಜಾಮೀನು ಸಿಕ್ಕಿದ ನಂತರವೇ ಪ್ರಜ್ವಲ್ ಶರಣಾಗಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ತಂದೆ-ಮಗ ಇಬ್ಬರೂ ಜೈಲಿಗೆ ಹೋಗುವುದು ಬೇಡ, ತಂದೆ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ತಾನು ಶರಣಾಗಿ, ಕಾನೂನು ಹೋರಾಟ ನಡೆಸಬಹುದು ಎಂಬ ಲೆಕ್ಕಾಚಾರದಲ್ಲಿ ಕುಟುಂಬಸ್ಥರು ಇದ್ದಾರೆ ಎನ್ನಲಾಗಿದೆ.

ಪ್ರಕರಣದ ಸಂಬAಧ ಪೆನ್ ಡ್ರೈವ್ ಹಂಚಿಕೆ ಮಾಡಿದ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಅವರ ವಿಚಾರಣೆ ನಡೆಯುತ್ತಿದ್ದು, ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕೊಡಲಾಗಿದೆ. ದೇವರಾಜೇಗೌಡ ಅವರನ್ನು ಅರೆಸ್ಟ್ ಮಾಡಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇಂದು ದೇವರಾಜೇಗೌಡ ಅವರನ್ನು ಎಸ್‌ಐಟಿ ತನ್ನ ವಶಕ್ಕೆ ಪಡೆಯಲು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಕೆ ಮಾಡಲಿ ತೀರ್ಮಾನಿಸಲಾಗಿದೆ.


Share It

You cannot copy content of this page