ಉಪಯುಕ್ತ ಸುದ್ದಿ

ಸೌರಶಕ್ತಿ ಉತ್ಪಾದನೆಯಲ್ಲಿ ಜಪಾನ್ ಹಿಂದಿಕ್ಕಿದ ಭಾರತ

Share It

ನವದೆಹಲಿ: ಸೌರಶಕ್ತಿಯಲ್ಲಿ ವಿಶ್ವದ ಬಲಿಷ್ಠ ರಾಷ್ಟçವಾಗುವ ಕಡೆಗೆ ಭಾರತದ ಹೆಜ್ಜೆ ಸಾಂಗವಾಗಿ ಸಾಗುತ್ತಿದ್ದು, 2023 ರಲ್ಲಿ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಜಪಾನ್ ದೇಶವನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ.

ಪವನ ಶಕ್ತಿ ಮತ್ತು ಸೌರಶಕ್ತಿಯ ಉತ್ಪಾದನೆಯ ಮೂಲಕ ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ಹೆಚ್ಚಿಸಲು ಇಡೀ ವಿಶ್ವ ಪ್ರಯತ್ನ ಮಾಡುತ್ತಿದೆ. ಆ ಮಾರ್ಗವಾಗಿ ಸೌರಶಕ್ತಿ ಉತ್ಪಾದನೆಯನ್ನು ಹೆಚ್ಚಾಗಿ ಎಲ್ಲ ದೇಶಗಳು ಕೈಗೊಂಡಿವೆ. 2023ರಲ್ಲಿ ಜಾಗತಿಕ ವಿದ್ಯುತ್ ವಲಯದಲ್ಲಿ ದಾಖಲೆಯ ಶೇ.5.5 ರಷ್ಟು ಸೌರ ಶಕ್ತಿಯನ್ನು ಉತ್ಪಾದಿಸಲಾಗಿದೆ. ಈ ಜಾಗತಿಕ ಅಂಕಿ-ಅಂಶಗಳಿಗೆ ಅನುಗುಣವಾಗಿ ಕಳೆದ ವರ್ಷ ಭಾರತ ಸೌರಶಕ್ತಿಯಿಂದ ಶೇ.5.8 ರಷ್ಟು ವಿದ್ಯುತ್ ಉತ್ಪಾದಿಸಿದೆ.

ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ ಇಂಗಾಲದ ತೀವ್ರತೆ ಹೊಸ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. 2007 ರಲ್ಲಿ ವಿದ್ಯುಚ್ಛಕ್ತಿಯ ಇಂಗಾಲವು ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಇದಕ್ಕೆ ಹೋಲಿಸಿದರೆ ಈಗ ಶೇ.12 ರಷ್ಟು ಇದರ ಪ್ರಮಾಣ ಕಡಿಮೆಯಾಗಿದೆ. ನವೀಕರಿಸಬಹುದಾದ ಉತ್ಪಾದನೆ ಬೆಳವಣಿಗೆಯು 2023 ರಲ್ಲಿ ಇನ್ನೂ ಹೆಚ್ಚಾಗಬಹುದಿತ್ತು. ಆದರೆ, ಚೀನಾ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ಬರದಿಂದಾಗಿ ಜಲವಿದ್ಯುತ್ ಉತ್ಪಾದನೆ ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಪವನ ಮತ್ತು ಸೌರಶಕ್ತಿ ಉತ್ಪಾದನೆ ಹೆಚ್ಚಳ ಜಾಗತಿಕ ವಿದ್ಯುಚ್ಛಕ್ತಿ ಮಿಶ್ರಣದಲ್ಲಿ ನವೀಕರಿಸಬಹುದಾದ ಪಾಲನ್ನು ಶೇ.30 ರಷ್ಟು ಮತ್ತು ಒಟ್ಟು ಶುದ್ಧ ಉತ್ಪಾದನೆ(ಪರಮಾಣು ಒಳಗೊಂಡAತೆ) ಸುಮಾರು ಶೇ.40 ಕ್ಕೆ ಏರಿಕೆ ಮಾಡಿದೆ ಎಂದು ಗ್ಲೋಬಲ್ ಎಲೆಕ್ಟ್ರಿಸಿಟಿ ರಿವ್ಯೂ ವರದಿ ತಿಳಿಸಿದೆ.

ಸೋಲಾರ್ ಸತತ 19 ನೇ ವರ್ಷವೂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿದ್ಯುತ್ ಮೂಲವಾಗಿದೆ. ವಿಶ್ವಾದ್ಯಂತ 2023 ರಲ್ಲಿ ಕಲ್ಲಿದ್ದಲಿಗಿಂತ ಎರಡು ಪಟ್ಟು ಹೆಚ್ಚು ಹೊಸ ವಿದ್ಯುತ್ ಸೌರ ಶಕ್ತಿಯಿಂದ ಉತ್ಪಾದನೆಯಾಗಿದೆ. 2023 ರಲ್ಲಿ ಸೌರ ಉತ್ಪಾದನೆಯಲ್ಲಿ ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಹೆಚ್ಚಳವನ್ನು ಕಂಡಿದೆ. ಚೀನಾ, ಅಮೆರಿಕ, ಮತ್ತು ಬ್ರೆಜಿಲ್ ನಂತರದಲ್ಲಿ ಭಾರತ ಇದೆ. ಒಟ್ಟಾರೆ, ಈ ಅಗ್ರ ನಾಲ್ಕು ಸೌರ ಬೆಳವಣಿಗೆಯ ರಾಷ್ಟ್ರಗಳು 2023 ರಲ್ಲಿ ಶೇ.7.5 ರಷ್ಟು ಬೆಳವಣಿಗೆ ಹೊಂದಿವೆ.

2023 ರಲ್ಲಿ ಜಾಗತಿಕ ಸೌರ ಉತ್ಪಾದನೆಯು 2015 ಕ್ಕಿಂತ ಆರು ಪಟ್ಟು ಹೆಚ್ಚಳವಾಗಿದೆ. ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ಸೌರ ಕೊಡುಗೆಯು 2015 ರಲ್ಲಿದ್ದ ಶೇ.0.5 ರಿಂದ 2023 ಕ್ಕೆ ಶೇ.5.8 ಕ್ಕೆ ಏರಿಕೆಯಾಗಿದೆ. ಇದೇ ವೇಳೆ, ಇಂಟರ್‌ನ್ಯಾಷನಲ್ ಎನರ್ಜಿ ಏಜೆನ್ಸಿಯ ನೆಟ್ ಝೀರೋ ಎಮಿಷನ್ಸ್ ಪ್ರಕಾರ, ಸೌರಶಕ್ತಿಯು 2030 ರ ವೇಳೆಗೆ ಜಾಗತಿಕ ವಿದ್ಯುತ್ ಉತ್ಪಾದನೆಯ ಶೇ.22 ಕ್ಕೆ ಏರಿಕೆಯಾಗುಬಹುದು. ವಿದ್ಯುಚ್ಛಕ್ತಿ ಉತ್ಪಾದನೆಯು ಭಾರತದ ವಾರ್ಷಿಕ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯ ಅರ್ಧದಷ್ಟು (2023 ರಲ್ಲಿ 1.18 ಗಿಗಾಟನ್) ಪಾಲನ್ನು ಹೊಂದಿದ್ದು, ದೇಶವು ತನ್ನ ಅಭಿವೃದ್ಧಿ ಮತ್ತು ಹವಾಮಾನ ಗುರಿಗಳನ್ನು ಪೂರೈಸಲು ಶುದ್ಧ ಉತ್ಪಾದನಾ ಮೂಲಗಳಿಗೆ ಪರಿವರ್ತನೆ ವೇಗಗೊಳಿಸುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದೆ.


Share It

You cannot copy content of this page