625 ಕ್ಕೆ 625 ಅಂಕಿತಾ ಬಸಪ್ಪಾ ಕನ್ನೂರ ಬಾಗಲಕೋಟೆ ಜಿಲ್ಲೆಯ ಮುರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
7 ಮಂದಿ ವಿದ್ಯಾರ್ಥಿಗಳು 624 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಮಾರ್ಚ್ 25 ರಿಂದ ಏಪ್ರಿಲ್ 26ರವರೆಗೂ ನಡೆದ ಎಸ್.ಎಲ್.ಎಲ್.ಸಿ ಪರೀಕ್ಷಾ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಇಂದು ಪ್ರಕಟಿಸಿದೆ.
ಒಟ್ಟು 4.36.138 ವಿದ್ಯಾರ್ಥಿಗಳಲ್ಲಿ (ಗಂಡು) 2.87.416 ಮಂದಿ ಉತ್ತೀರ್ಣರಾಗಿದ್ದಾರೆ. (ಶೇಕಡಾ 65.90%) ಒಟ್ಟು 4.23.829 ವಿದ್ಯಾರ್ಥಿನಿಯರಲ್ಲಿ 3.41.778 ಮಂದಿ ಉತ್ತೀರ್ಣರಾಗಿದ್ದಾರೆ. (ಶೇಕಡಾ 81.11)
ನಗರ ಪ್ರದೇಶದಲ್ಲಿ 4.93.900 ವಿದ್ಯಾರ್ಥಿಗಳಲ್ಲಿ 35.97.703 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
(72.83%) ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 3.66.067 ಮಂದಿ ಉತ್ತೀರ್ಣರಾಗಿದ್ದಾರೆ. (74.17%) ಒಟ್ಟು 5.906 ಸರ್ಕಾರಿ ಶಾಲೆಗಳಲ್ಲಿ 72.46% , 3.666 ಅನುದಾನ ಶಾಲೆಗಳಲ್ಲಿ 72.22%, 6.144 ಅನುದಾನ ರಹಿತ ಶಾಲೆಗಳು ಫಲಿತಾಂಶವಾಗಿದೆ.