ಜೈಪುರ: ಐಪಿಎಲ್ನಲ್ಲಿ ವಿರಾಟ್ ಕೋಹ್ಲಿ ಗರಿಷ್ಠ ರನ್ ಗಳಿಸಿದ್ದರೂ, ಆರ್ಸಿಬಿಯನ್ನು ಸತತ ಸೋಲಿನಿಂದ ಪಾರು ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಅವರ ನಿಧಾನಗತಿಯ ಬ್ಯಾಟಿಂಗ್ ಕಾರಣವೇ? ಎಂಬುದೊಂದು ಚಚರ್ೆ ಇತ್ತೀಚೆಗೆ ಹೆಚ್ಚಾಗುತ್ತಿದೆ.
ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಆರಂಭಿಸಿದ ವಿರಾಟ್ ಕೋಹ್ಲಿ ಮತ್ತು ಪಾಪ್ ಡುಪ್ಲಸಿಸ್ ಮೊದಲ ವಿಕೆಟ್ ಜತೆಯಾಟದಲ್ಲಿ 14 ಓವರ್ಗಳಲ್ಲಿ 125 ರನ್ಗಳ ಜತೆಯಾಟ ನೀಡುವ ಮೂಲಕ ಬೃಹತ್ ಇನ್ನಿಂಗ್ಸ್ನ ಮುನ್ಸೂಚನೆ ನೀಡಿದರು. ಒಂದು ಬದಿಯಲ್ಲಿ ಕಿಂಗ್ ಕೋಹ್ಲಿ ಆರ್ಭಟ ನಡೆಸುತ್ತಿದ್ದರೆ, ಮತ್ತೊಂದು ತುದಿಯಲ್ಲಿ ನಾಯಕ ಪಾಪ್ 33 ಎಸೆತಗಳಲ್ಲಿ 44 ರನ್ಗಳಿಸಿ ಸ್ಪಿನ್ನರ್ ಚಾಹಲ್ಗೆ ವಿಕೆಟ್ ಒಪ್ಪಿಸಿದರು. ಕೋಹ್ಲಿ ಅಂತಿಮವಾಗಿ 72 ಎಸೆತಗಳಲ್ಲಿ 113 ರನ್ಗಳಿಸಿ ಅಜೇಯವಾಗಿ ಉಳಿದರು. ಈ ಐಪಿಎಲ್ನ ನಿಧಾನಗತಿಯ ಶತಕ ಇದಾಗಿದ್ದು, ಇಂತಹ ನಿಧಾನಗತಿಯ ಬ್ಯಾಟಿಂಗ್ ಕಾರಣ ಎನ್ನಲಾಗುತ್ತಿದೆ.
ಕೋಹ್ಲಿ 12 ಓವರ್ಗಳನ್ನು ತಾವೇ ಆಡಿದ್ದಾರೆ. ಉಳಿದ ಎಂಟು ಓವರ್ಗಳಲ್ಲಿ ಉಳಿದವರಿಗೆ ಬ್ಯಾಟಿಂಗ್ ಸಿಕ್ಕಿದೆ. ಕಳೆದ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಸೋಲು ಕಂಡಿರುವ ಆರ್ಸಿಬಿಯ ಎಲ್ಲ ಪಂದ್ಯಗಳಲ್ಲಿ ಕೋಹ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದಾರೆ. ಈವರೆಗೆ 316 ರನ್ ಗಳಿಸಿ, ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ರಿಯಾನ್ ಪರಾಗ್ 181 ರನ್ಗಳಷ್ಟೇ ಗಳಿಸಿದ್ದಾರೆ. ಹೀಗಿದ್ದರೂ, ಆರ್ಸಿಬಿ ಸೋಲಿನ ಮೇಲೆ ಸೋಲು ಕಾಣುತ್ತಿದೆ. ನಿಧಾನ ಗತಿಯಲ್ಲಿ ಬ್ಯಾಟಿಂಗ್ ಆಡುವ ಮೂಲಕ ಉಳಿದವರಿಗೆ ಬ್ಯಾಟಿಂಗ್ ಅವಕಾಶ ಸಿಗದಂತೆ ಮಾಡಿರುವುದು ಕೂಡ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.
2024ರ ಐಪಿಎಲ್ ಪಂದ್ಯಾವಳಿಯಲ್ಲಿ ಎಲ್ಲ ತಂಡಗಳು ಮೊದಲು ಬ್ಯಾಟ್ ಮಾಡಿ, 250ಕ್ಕಿಂತ ಅಧಿಕ ರನ್ಗಳ ಟಾಗರ್ೆಟ್ ಫಿಕ್ಸ್ ಮಾಡಲು ನೋಡುವಂತೆ ಬ್ಯಾಟಿಂಗ್ ಮಾಡುತ್ತಿವೆ. ಇದೇ ಕಾರಣದಿಂದ ಈ ಐಪಿಎಲ್ನಲ್ಲಿ 19 ಪಂದ್ಯಗಳಲ್ಲಿ ಏಳು ಬಾರಿ ವಿವಿಧ ತಂಡಗಳು 200ಕ್ಕೂ ಅಧಿಕ ರನ್ಗಳ ಮೊತ್ತವನ್ನು ಗಳಿಸಿವೆ. ಸನ್ ರೈಸರ್ಸ್ ಹೈದರಾಬಾದ್ ತಂಡ 277 ರನ್ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 272 ರನ್ಗಳಿಸಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ತಂಡವಾಗಿದೆ. ಆದರೆ, ಈವರೆಗೆ ಆರ್ಸಿಬಿ 200 ರ ಗಡಿಯನ್ನು ಯಾವುದೇ ಪಂದ್ಯದಲ್ಲಿ ದಾಟಿಲ್ಲ.
ಮೊದಲು ಬ್ಯಾಟ್ ಮಾಡುವ ಯಾವುದೇ ತಂಡ ಬೃಹತ್ ರನ್ ಗಳಿಸುವ ಪ್ರಯತ್ನದಲ್ಲಿ ಬ್ಯಾಟಿಂಗ್ ನಡೆಸಿದರೆ, ಅಷ್ಟೇನೋ ಬೌಲಿಂಗ್ ವಿಭಾಗವೂ ಬಲಿಷ್ಠವಲ್ಲದ ಆರ್ಸಿಬಿ ಮಾತ್ರ 180ರ ಆಸುಪಾಸಿನಲ್ಲಿಯೇ ಟಾಗರ್ೆಟ್ ಸೆಟ್ ಮಾಡುತ್ತಿದೆ. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಗುತ್ತಿದೆ. ಉಳಿದ ಬ್ಯಾಟರ್ಗಳ ವೈಫಲ್ಯವೂ ಕಳಪೆ ಸ್ಕೋರ್ ಗಳಿಸಲು ಕಾರಣ ಎನ್ನಬಹುದಾದರೂ, ಕೋಹ್ಲಿ ಇಡೀ ಇನ್ಸಿಂಗ್ ಆಡುವುದು ಮತ್ತೊಂದು ಕಾರಣ ಎಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿವೆ.
ಕೆಟ್ಟ ಬೌಲಿಂಗ್ ಮಾಡಿದ ಆರ್ಸಿಬಿ:
ನಿಧಾನಗತಿಯ ಬ್ಯಾಟಿಂಗ್ ನಡೆಸಿದ ಆರ್ಸಿಬಿ ವಿರಾಟ್ ಕೋಹ್ಲಿ ಅವರ ಎಂಟನೇ ಶತಕದ ಮೂಲಕ 183 ರನ್ಗಳ ಟಾಗರ್ೆಟ್ ಸೆಟ್ ಮಾಡಿತು.ಆದರೆ, ರಾಜಸ್ಥಾನ ರಾಯಲ್ಸ್ ತಂಡ 19.1 ಓವರ್ಗಳಲ್ಲಿ 189 ರನ್ಗಳಿಸಿ ಗುರಿಮುಟ್ಟಿತು. ಜೋಸ್ ಬಟ್ಲರ್ 58 ಎಸೆತಗಳಲ್ಲಿ ಶತಕ ಗಳಿಸಿ ಗೆಲುವು ತಂದುಕೊಟ್ಟರೆ, ನಾಯಕ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 69 ರನ್ ಗಳಿಸಿ ಗೆಲುವಿಗೆ ಸಾಥ್ ನೀಡಿದರು. ಆರ್ಸಿಬಿಯ ಕಳಪೆ ಬೌಲಿಂಗ್ ಪ್ರದರ್ಶನ ಈ ಪಂದ್ಯದಲ್ಲಿಯೂ ಮುಂದುವರಿದರೆ, ರೀಸ್ ಟೋಪ್ಲೆ ಎರಡು ವಿಕೆಟ್ ಪಡೆದು ಕೊಂಚ ಸಮಾಧಾನಕಾರ ಬೌಲಿಂಗ್ ಪ್ರದರ್ಶನ ನೀಡಿದರು.