ಬೆಲ್ಲ ಅನೇಕ ರೋಗಗಳಿಗೆ ರಾಮಬಾಣ. ಬೆಲ್ಲದಲ್ಲಿ ಅಗತ್ಯ ಪೋಷಕಾಂಶಗಳಿದ್ದು, ಇದು ಅನೇಕ ರೋಗಗಳಿಗೆ ಪರಿಣಾಮಕಾರಿ ಔಷಧ ಎಂದರೆ ತಪ್ಪೇನಿಲ್ಲ .
ಬೆಲ್ಲವನ್ನು ದಿನವು ತಿನ್ನುವುದರಿಂದ ಬಹಳ ಪ್ರಯೋಜನಗಳಿವೆ. ಬೆಲ್ಲವು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ಇದು ಎಲೆಕ್ಟ್ರೋಲೈಟ್ ಸಮತೋಲನಕ್ಕೆ ಸಹಾಯ ಮಾಡುತ್ತದೆ. ಮತತು ಸ್ನಾಯುಗಳನ್ನು ಬಲಪಡಿಸಲು ಸಹಾಯಮಾಡುತ್ತದೆ.
ಮುಟ್ಟಿನ ಸಮಯದಲ್ಲಿ ಬರುವ ನೋವು ಮತ್ತು ಸ್ನಾಯು ಸೆಳೆತದತಂಹ ನೋವುಗಳನ್ನು ಬೆಲ್ಲ ತಿನ್ನುವುದರಿಂದ ಪರಿಹರಿಸಿಕೊಳ್ಳಬಹುದು. ಬೆಲ್ಲ ಪೊಟ್ಯಾಸಿಯಮ್ ಮತ್ತು ಸೋಡಿಯಂ ಅನ್ನು ಹೆಚ್ಚಾಗಿ ಹೊಂದಿದ್ದು, ಇದು ದೇಹದಲ್ಲಿ ಆಮ್ಲ ಮಟ್ಟವನ್ನು ಕಾಪಾಡುತ್ತದೆ. ಬೆಲ್ಲ ತಿನ್ನುವುದರಿಂದ ರಕ್ತದ ಒತ್ತಡವನ್ನು ಸರಿಯಾಗಿ ಕರ‍್ಯನಿರ್ವಹಿಸುವಂತೆ ಮಾಡಬಹುದು.
ಊಟದ ನಂತರ ಬೆಲ್ಲ ಸೇವಿಸುವುದು ಒಳ್ಳೆಯದು ಇದರಿಂದ ಜೀರ್ಣಾಂಗ ವ್ಯವಸ್ಥೆ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಬೆಲ್ಲದಲ್ಲಿ ಕಬ್ಬಿಣ ಮತ್ತು ಫೋಲೇಟ್ಟ ಅನ್ನು ಹೆಚ್ಚಾಗಿ ಹೊಂದಿದೆ. ಕೆಂಪು ರಕ್ತಕಣಗಳ ಸಾಮಾನ್ಯ ಮಟ್ಟವನ್ನು ಕಾಪಾಡುತ್ತದೆ ಮತ್ತು ರಕ್ತಹೀನತೆಯನ್ನು ತಡೆಯುತ್ತದೆ. ಬೆಲ್ಲವನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತವನ್ನು ಶುದ್ಧಿ ಮಾಡುತ್ತದೆ, ಜತೆಗೆ ದೇಹವನ್ನು ಆರೋಗ್ಯವಾಗಿ ಇಡುತ್ತದೆ.
ಬೆಲ್ಲವು ರಕ್ತದಲ್ಲಿನ ಹಿಮೋಗ್ಲೋಬಿನ್ನ ಒಟ್ಟು ಸಂಖ್ಯೆಯನ್ನು ಹೆಚ್ಚಿಸುತ್ತದೆ. ವಿವಿಧ ರೀತಿಯ ರಕ್ತ ಅಸ್ವಸ್ಥತೆ ಮತ್ತು ರೋಗಗಳನ್ನು ತಡೆಯುತ್ತದೆ. ಬೆಲ್ಲ ಸೇವನೆಯಿಂದ ಶ್ವಾಸಕೋಶಗಳು, ಕರುಳುಗಳು, ಹೊಟ್ಟೆ ಮತ್ತು ಆಹಾರನಾಳಗಳ ಶೂದ್ಧೀಕರಣವಾಗುತ್ತದೆ.