ಬೇಬಿ ಕೇರ್ ಸೆಂಟರ್‌ನಲ್ಲಿ ಬೆಂಕಿ ಅವಘಡ: ಏಳು ಹಸುಳೆಗಳ ಸಾವು
ನವದೆಹಲಿ: ದೆಹಲಿಯಲ್ಲಿ ಪ್ರತಿಷ್ಠಿತ ಆಸ್ಪತ್ರೆಯೊಂದರ ಮಕ್ಕಳ ವಿಭಾಗದಲ್ಲಿ ಬೆಂಕಿ ದುರಂತ ಸಂಭವಿಸಿದ್ದು, ಏಳು ಮುದ್ದು ಕಂದಮ್ಮಗಳು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ದೆಹಲಿ ವಿವೇಕ್ ವಿಹಾರ್ ಪರದೇಶದ ಆಸ್ಪತ್ರೆಯೊಂದರ ಬೇಬಿ ಕೇರ್ ಸೆಂಟರ್‌ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಅಲ್ಲಿದ್ದ ಬೇಬಿ ಕೇರ್ ಸೆಂಟರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ, ಆಸ್ಪತ್ರೆಯಲ್ಲಿ ಸಂಗ್ರಹಿಸಿದ್ದ ಸಿಲಿಂಡರ್‌ಗಳು ಸ್ಪೋಟವಾಗಿವೆ. ಇದರಿಂದ ಬೆಂಕಿ ಕೆನ್ನಾಲಗೆ ಇಡೀ ಆಸ್ಪತ್ರೆಗೆ ಆವರಿಸಿದೆ.
ಬೇಬಿ ಕೇರ್ ಸೆಂಟರ್‌ನಲ್ಲಿ ಸುಮಾರು 14 ಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು, ಅದರಲ್ಲಿ ಏಳು ಮಕ್ಕಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಪಕ್ಕದ ಹೆರಿಗೆ ವಾರ್ಡ್ನಲ್ಲಿದ್ದ ತಾಯಿಯಂದಿರು ಮಕ್ಕಳ ಸಾವನ್ನು ನೋಡಿ ರೋಧನೆ ಪಡುತ್ತಿದ್ದಾರೆ. ಉಳಿದ ಆರು ಮಕ್ಕಳು ಬದುಕುಳಿದಿದ್ದು, ಸುಟ್ಟ ಗಾಯಗಳಾಗಿವೆ.
ಸಿನಿಮಾ ಮಾದರಿ ಆಪದ್ಭಾಂಧವ: ಬೇಬಿ ಕೇರ್ ಸೆಂಟರ್‌ಗೆ ಬೆಂಕಿಬೀಳುತ್ತಿದ್ದಂತೆ ಮಕ್ಕಳು ಸುಟ್ಟು ಕರಕಲಾಗಲು ಆರಂಭವಾಗಿತ್ತು. ಇದನ್ನು ಕಂಡ ಸ್ಥಳೀಯ ಯುವಕನೊಬ್ಬ ಸಿನಿಮಾ ಮಾದರಿಯಲ್ಲಿ ಮಕ್ಕಳನ್ನು ಕಾಪಾಡುವ ಪ್ರಯತ್ನ ನಡೆಸಿದ. ತನ್ನ ಜೀವನನ್ನು ಲೆಕ್ಕಿಸದೆ ಆತ ಆರು ಮಕ್ಕಳ ಪ್ರಾಣವನ್ನು ಉಳಿಸಿದ ಎಂದು ವರದಿಯಾಗಿದೆ. ಜಿತೇಶ್ ಸಿಂಗ್ ಎಂಬಾತನ ಸಾಹಸಕ್ಕೆ ಸ್ಥಳೀಯರು ಮತ್ತು ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾಲೀಕನ ವಿರುದ್ಧ ಪ್ರಕರಣ: ಆಸ್ಪತ್ರೆಯ ಮಾಲೀಕ ನವೀನ್ ಕಿಚಿ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದು, ನಾಪತ್ತೆಯಾಗಿರುವ ಆತನ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾದ ಅಗ್ನಿಶಾಮಕ ಸುರಕ್ಷತೆ ಅಳವಡಿಸದಿರುವುದು ಸಏರಿದಂತೆ ವಿವಿಧ ಪ್ರಕರಣಗಳನ್ನು ಆತನ ಮೇಲೆ ಹಾಕಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಮತ್ತೊಂದು ಅಗ್ನಿ ಅವಘಡ: ಮೂವರ ಸಾವು: ದೆಹಲಿಯಲ್ಲಿಯೇ ನಡೆದ ಮತ್ತೊಂದು ಅಗ್ನಿ ದುರಂತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಕೃಷ್ಣಾ ನಗರದ ಮನೆಯಲ್ಲಿ ನಡೆದಿದೆ. ಘಟನೆಯಲ್ಲಿ ಏಳು ಜನರನ್ನು ರಕ್ಷಣೆ ಮಾಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.