ಬೆಂಗಳೂರು: ಟೀಂ ಇಂಡಿಯಾ ಮತ್ತು ಆರ್‌ಸಿಬಿಯ ಸ್ಟಾರ್ ಕ್ರಿಕೆಟರ್ ವಿರಾಟ್ ಕೋಹ್ಲಿ ಜ್ಯೂನಿಯರ್ ಎನ್‌ಟಿಆರ್ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದು, ಆತನ ಅಭಿನಯಕ್ಕೆ ಮನಸೋತಿರುವುದಾಗಿ ತಿಳಿಸಿದ್ದಾರೆ.
ಎನ್‌ಟಿಆರ್ ಮತ್ತು ತಮ್ಮ ನಡುವಿನ ಗೆಳೆತನವನ್ನು ವಿವರಿಸಿರುವ ವಿರಾಟ್ ಕೋಹ್ಲಿ, ಜ್ಯೂನಿಯರ್ ಎನ್‌ಟಿಆರ್ ನನ್ನ ಆತ್ಮೀಯ ಗೆಳೆಯ. ಆರ್‌ಆರ್‌ಆರ್ ಸಿನಿಮಾದಲ್ಲಿ ಅವರ ಅಭಿನಯ ಮನಮೋಹಕವಾಗಿದ್ದು, ಅದನ್ನು ನಾನು ಮೆಚ್ಚಿಕೊಂಡಿದ್ದೇನೆ ಎಂದು ವಿವರಿಸಿದ್ದಾರೆ.

ನನಗೆ ಆರ್‌ಆರ್‌ಆರ್‌ನ ಅವರ ಅಭಿನಯ ಎಷ್ಟು ಇಷ್ಟವಾಗಿತ್ತೆಂದರೆ, ಅವರು ಅಭಿನಯಿಸಿದ “ನಾಟು ನಾಟು” ಹಾಡಿಗೆ ನಾನು ಸ್ಟೆಪ್ ಹಾಕುವ ಮೂಲಕ ಖುಷಿಪಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

ವಿರಾಟ್ ಕೋಹ್ಲಿ, ತಮ್ಮ ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವ ಹವ್ಯಾಸ ಬೆಳೆಸಿಕೊಂಡಿದ್ದು, ಸೌತ್ ಇಂಡಿಯಾದ ಸಿನಿಮಾಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರು ಈ ಹಿಂದೆ ತೆರೆ ಕಂಡಿದ್ದ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದ ಹಾಡಿಗೆ ಮೈದಾನದಲ್ಲಿಯೇ ಸ್ಟೆಪ್ ಹಾಕುವ ಮೂಲಕ ಟ್ರೆಂಡ್ ಆಗಿದ್ದರು.