ಗೌರಿಬಿದನೂರು: ಮದುವೆಗೆ ನೆಂಟನ ನೆಪದಲ್ಲಿ ಬಂದು ಕಳ್ಳತನದ ಪ್ರಯತ್ನ ನಡೆಸಿದ ವ್ಯಕ್ತಿಯನ್ನು ಮದುವೆಗೆ ಬಂದಿದ್ದ ಜನರು ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನಲ್ಲಿ ನಡೆದಿದೆ.
ಗೌರಿಬಿದನೂರು ಪಟ್ಟಣದ ಸಾಯಿಕೃಷ್ಣ ಕನ್ವೆನ್ಷನ್ ಹಾಲ್‌ನಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಇಲ್ಲಿ ಬಟ್ಟೆ ಬದಲಾಯಿಸುತ್ತಿದ್ದ ಮಹಿಳೆಯೊಬ್ಬರು ಕಿಟಾರನೆ ಕಿರುಚಿಕೊಂಡರು. ಸಂಬಂಧಿಕರೆಲ್ಲ ಓಡಿಹೋಗಿ ನೋಡಿದರೆ, ಅಲ್ಲೊಬ್ಬ ಆಸಾಮಿ ಆಕೆ ತೊಟ್ಟಿದ್ದ ಚಿನ್ನದ ಸರವನ್ನು ಕದ್ದು ಪರಾರಿಯಾಗಲು ಪ್ರಯತ್ನ ಮಾಡುತ್ತಿದ್ದ.
ಕಳ್ಳನನ್ನು ಕಂಡ ವಧುವರರಸಂಬಂಧಿಕರು, ಆತನಿಗೆ ಮನಬಂದಂತೆ ಥಳಿಸಿ, ಆತನನ್ನು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲು ಮಾಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆರೋಪಿಯನ್ನು ಆಂಧ್ರಪ್ರದೇಶ ಮೂಲಕ ಮುಲ್ಲಮೋತುಪಲ್ಲಿ ಗ್ರಾಮದ ನತೇಶ್ ಎಂದು ಗುರುತಿಸಲಾಗಿದೆ.