ಬೆಂಗಳೂರು,ಮೇ14: ಇದೇ ಶನಿವಾರ ರಾತ್ರಿ ಆತಿಥೇಯ ಆರ್.ಸಿ.ಬಿ ಹಾಗೂ ಚೆನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಕ್ಕಾಗಿ ನಮ್ಮ ಮೆಟ್ರೋ ರೈಲಿನ ಸೇವಾವಧಿ ವಿಸ್ತರಣೆ ಮಾಡಲಾಗಿದೆ.
ಮೇ 18ರಂದು ಶನಿವಾರ ರಾತ್ರಿ 11.30 ರವರೆಗೆ ಮೆಟ್ರೋ ರೈಲು ಸೇವೆ ಲಭ್ಯವಾಗಿರಲಿದೆ ಎಂದು ಮೆಟ್ರೋ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
4 ಟರ್ಮಿನಲ್ ನಿಲ್ದಾಣದಿಂದ ಸೇವೆ ವಿಸ್ತರಿಸಲಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಮೆಟ್ರೋ ಸೇವೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ನಿಗದಿತ ದಿನಾಂಕದಲ್ಲಿ ನಡೆಯುವ ಪಂದ್ಯಗಳಿಗೆ ಬರುವ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳು 50 ರೂಪಾಯಿಗೆ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಲಭ್ಯವಿರುತ್ತವೆ.
ಈ ಟಿಕೆಟ್‌ಗಳು ಮಧ್ಯಾಹ್ನ 2 ಗಂಟೆಯಿಂದ ಮಾರಾಟಕ್ಕೆ ಲಭ್ಯವಿರುತ್ತದೆ. ರಾತ್ರಿ 8ರ ನಂತರ ದಿನದ ಸೇವೆ ಕೊನೆಗೊಳ್ಳುವವರಿಗೆ ಮಾತ್ರ ರಿಟರ್ನ್ ಟಿಕೆಟ್ ಬಳಸಬಹುದು. ಕ್ಯೂರ್ ಕೋಡ್ ಟಿಕೆಟ್‌ಗಳು, ಸ್ಮಾರ್ಟ್‌ಕಾರ್ಡುಗಳು, ಎನ್‌ಸಿಎಂಸಿ ಕಾರ್ಡ್‌ಗಳನ್ನು ಸಹ ಎಂದಿನಂತೆ ಬಳಸಬಹುದಾಗಿದೆ.
ವಾಟ್ಸ್ ಆಪ್/ನಮ್ಮ ಮೆಟ್ರೋ ಆ್ಯಪ್/ಪೇಟಿಎಂ ಮೂಲಕ ಜಗಳ ಮುಕ್ತ ವಾಪಸಾತಿ ಪ್ರಯಾಣಕ್ಕಾಗಿ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ ಟಿಕೆಟ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ.