ರಾಜಕೀಯ ಸುದ್ದಿ

ಹುಬ್ಬಳ್ಳಿಯಲ್ಲಿ ಪರಿವಾರದ ಜತೆ ಸಚಿವ ಪ್ರಲ್ಹಾದ ಜೋಶಿ ಮತದಾನ

Share It

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಬೆಳಗ್ಗೆಯೇ ಮತದಾನ ಮಾಡಿ, ಮತೋತ್ಸವಕ್ಕೆ ಪ್ರೇರಣೆ ನೀಡಿದರು.

ಹುಬ್ಬಳ್ಳಿಯ ಭವಾನಿ ನಗರದಲ್ಲಿ ಇರುವ ಚಿನ್ಮಯಿ ವಿದ್ಯಾಲಯದ ಮತಗಟ್ಟೆ 111ರಲ್ಲಿ ಸಚಿವರು ಬೆಳಗ್ಗೆ 8.30ಕ್ಕೇ ಕುಟುಂಬ ಸಮೇತ ತೆರಳಿ ಗುಪ್ತ ಮಾತದಾನಗೈದರು.

ಮತದಾನ ಪ್ರಜಾಪ್ರಭುತ್ವದ ಪವಿತ್ರ ಹಬ್ಬವಾಗಿದೆ.
ಭವ್ಯ ಭಾರತದ ನಿರ್ಮಾಣ, ರಾಷ್ಟ್ರದ ಅಭಿವೃದ್ಧಿಗಾಗಿ ಸರ್ವರೂ ಮತಗಟ್ಟೆಗಳಿಗೆ ಧಾವಿಸಿ ತಮ್ಮ ಅಮೂಲ್ಯ ಹಕ್ಕು ಚಲಾಯಿಸಬೇಕು ಎಂದು ಕರೆ ನೀಡಿದರು.

ಪ್ರತಿಯೊಬ್ಬರೂ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗುವಂತೆ ನೋಡಿಕೊಳ್ಳಬೇಕು. ಪರಿವಾರ, ಅಕ್ಕಪಕ್ಕದವರು ವೋಟ್ ಮಾಡುವಂತೆ ಪ್ರೇರೇಪಿಸಿ ಮತಗಟ್ಟೆಗಳಿಗೆ ಕರೆತರಬೇಕು ಎಂದು ಕೋರಿದರು.


Share It

You cannot copy content of this page