ಉಪಯುಕ್ತ ಸುದ್ದಿ

ಟೊಯೋಟಾ ಕಿರ್ಲೋಸ್ಕರ್‌ ಇಕೋಝೋನ್‌ನಲ್ಲಿ TKM ಸುಸ್ಥಿರತಾ ವರದಿ ಬಿಡುಗಡೆಗೊಳಿಸಿದ ಸಚಿವ ರಾಮಲಿಂಗಾರೆಡ್ಡಿ

Share It

ಬೆಂಗಳೂರು:ಬಿಡದಿಯ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ನ ಇಕೋಝೋನ್‌ನಲ್ಲಿ ಆಯೋಜಿಸಿದ್ದ TKMನ ಸುಸ್ಥಿರತಾ ವರದಿ ಬಿಡುಗಡೆಗೊಳಿಸಿ, ಕಾರ್ಯಕ್ರಮ ಉದ್ದೇಶಿಸಿ ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದರು.

ಟೊಯೋಟಾ ಕಿರ್ಲೋಸ್ಕರ್‌ನ ಇಕೋಝೋನ್‌ಗೆ ಪ್ರವೇಶಿಸಿದಾಗ ಸಂತಸವಾಯಿತು. ಕೈಗಾರಿಕಾ ಚಟುವಟಿಕೆಗಳ ನಡುವೆಯೂ ಇಲ್ಲಿನ ಹಸಿರನ್ನು ಜೀವಂತವಾಗಿರಿಸಿ, ಅದನ್ನು ಪೋಷಿಸುತ್ತಾ ಉತ್ಪಾದನಾ ಚಟುವಟಿಕೆಗಳನ್ನು ಮುನ್ನಡೆಸುತ್ತಿರುವುದು ಅತ್ಯಂತ ಮಾದರಿಯಾದ ಕಾರ್ಯ. ಕೈಗಾರಿಕಾ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಪರಸ್ಪರ ವಿರುದ್ಧವಾದ ಸಂಗತಿಗಳಲ್ಲ. ಅವೆರಡೂ ಜೊತೆಯಾಗಿ ಸಾಗಬಹುದು ಮತ್ತು ಪರಸ್ಪರ ಬಲಪಡಿಸಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದರು.

ಕೈಗಾರಿಕಾ ಪ್ರದೇಶದ ಮಧ್ಯೆ ನೂರು ಎಕರೆಗೂ ಹೆಚ್ಚು ಹಸಿರು ಪ್ರದೇಶವನ್ನು ಅಭಿವೃದ್ಧಿಪಡಿಸಿ, 790ಕ್ಕೂ ಅಧಿಕ ಸ್ಥಳೀಯ ಸಸ್ಯ ಪ್ರಭೇದಗಳು ಹಾಗೂ 400ಕ್ಕೂ ಅಧಿಕ ಪ್ರಾಣಿ-ಪಕ್ಷಿ ಪ್ರಭೇದಗಳಿಗೆ ಅನುಕೂಲಕರವಾದ ನಿತ್ಯಹರಿದ್ವರ್ಣ ಕಾಡುಗಳು, ಉಷ್ಣವಲಯದ ತೇವಾಂಶಭರಿತ ಪರ್ಣಪಾತಿ ಕಾಡುಗಳು ಸೇರಿದಂತೆ ರಾಜ್ಯದ ಅನೇಕ ರೀತಿಯ ಮಾದರಿ ಅರಣ್ಯಗಳನ್ನು ಇಲ್ಲಿ ಸೃಷ್ಟಿಸಿರುವುದು ಗಮನಾರ್ಹ ಸಾಧನೆ ಎಂದರು.

ಇದರ ಜೊತೆಗೆ ಜಲ ಸಂರಕ್ಷಣೆ, ಅಂತರ್ಜಲ ಮರುಪೂರಣ, ತ್ಯಾಜ್ಯನೀರಿನ ಸಂಸ್ಕರಣೆ ಮತ್ತು ಮರುಬಳಕೆ ಸೇರಿದಂತೆ ಹಲವು ಪರಿಸರ ಸ್ನೇಹಿ ಕಾರ್ಯಗಳನ್ನು ಸಂಸ್ಥೆ ಕೈಗೊಂಡಿದೆ ಎಂಬುದನ್ನು ನನ್ನ ಗಮನಕ್ಕೆ ತರಲಾಯಿತು. ಕರ್ನಾಟಕದ ಕೈಗಾರಿಕಾ ಬೆಳವಣಿಗೆಯು ನಮ್ಮ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯೊಂದಿಗೆ ಸಾಗಬೇಕು. ಸರ್ಕಾರ, ಕೈಗಾರಿಕೆಗಳು ಮತ್ತು ಸಮುದಾಯಗಳು ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಸ್ವಚ್ಛ, ಹಸಿರು ಮತ್ತು ಸುಸ್ಥಿರ ಕರ್ನಾಟಕವನ್ನು ಕಟ್ಟಿಕೊಡಲು ಸಾಧ್ಯ.ಎಂದು ತಿಳಿಸಿದರು

ರಾಜ್ಯದಲ್ಲಿ ಪರಿಸರ ಸಂರಕ್ಷಣೆಯ ಕಾಳಜಿಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಸ್ವಸ್ಥ ಮತ್ತು ಸುಸ್ಥಿರ ಸಮಾಜ ನಿರ್ಮಾಣದ ನಮ್ಮ ಪ್ರಯತ್ನಗಳಿಗೆ ಕೈಜೋಡಿಸುವ ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ ಭೂಮಿಯೂ ಸೇರಿದಂತೆ ಅಗತ್ಯ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು> ಜಿ. ಶಂಕರ, ಮುಖ್ಯ ಕಾರ್ಯತಂತ್ರ ಅಧಿಕಾರಿ, ವಿಕ್ರಮ್ ಗುಲಾಟಿ ಕಾರ್ಯನಿರ್ವಾಹಕ ಉಪಾಧ್ಯಕ್ಷರು, ಬಿ. ಪದ್ಮನಾಭ ಕಾರ್ಯನಿರ್ವಾಹಕ ಉಪಾಧ್ಯಕ್ಷರು, ಶ್ರೀನಿವಾಸ ಗೋಟೂರ್ ಸೇರಿ ಅನೇಕರು ಉಪಸ್ಥಿತರಿದ್ದರು.


Share It

You cannot copy content of this page