ಅಪರಾಧ ರಾಜಕೀಯ ಸುದ್ದಿ

ರಾಜ್ಯದಲ್ಲಿ ಫಾರ್ಮ್ 7 ದುರುಪಯೋಗ, SIT ರಚನೆ ಮಾಡಲಿ: ರಾಮಲಿಂಗಾರೆಡ್ಡಿ

Share It

ಬೆಂಗಳೂರು:ರಾಜ್ಯದಲ್ಲಿ ಫಾರ್ಮ್ 7 ದುರುಪಯೋಗವಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ತಂಡ (SIT) ರಚನೆ ಮಾಡಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಒತ್ತಾಯಿಸಿದ್ದಾರೆ.

ಜಯನಗರದಲ್ಲಿ ಫಾರ್ಮ್ 7 ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಸೌಮ್ಯಾ ರೆಡ್ಡಿ ದೂರು ನೀಡಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಈಗಾಗಲೇ FIR ದಾಖಲಾಗಿದೆ ಎಂದು ಹೇಳಿದರು.

ಸಿಎಂ ಜತೆ ಸೇರಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಬಿಜೆಪಿ ಶಾಸಕರ ಕಚೇರಿಯಿಂದ RSS ಕುಮ್ಮಕ್ಕಿನಿಂದ ಕಾಂಗ್ರೆಸ್ ಮತಗಳನ್ನು ಕದಿಯುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಜಯನಗರದಲ್ಲಿ ಈ ಬಗ್ಗೆ ಆಡಿಯೋ ಕೂಡ ವೈರಲ್ ಆಗಿದೆ. ಸೌಮ್ಯಾ ರೆಡ್ಡಿ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯಬೇಕು. RSS ಕುಮ್ಮಕ್ಕಿನಿಂದ ಹಾಗೂ ಬಿಜೆಪಿ ಪಕ್ಷದಿಂದ ಈ ಕೆಲಸ ನಡೆಯುತ್ತಿದೆ ಎಂಬ ಆರೋಪದ ಬಗ್ಗೆ ಆಡಿಯೋ ಆಧರಿಸಿ ತನಿಖೆ ನಡೆಸಬೇಕು ಎಂದು ಹೇಳಿದರು.


Share It

You cannot copy content of this page