ರಾಜಕೀಯ ಸುದ್ದಿ

ಅಂತ್ಯೋದಯ ಸಿದ್ಧಾಂತದೊಂದಿಗೆ ಸಮರ್ಥ ನಾಯಕತ್ವನೀಡಿದ ಮೋದಿಜೀ: ಯಡಿಯೂರಪ್ಪ

Share It

ಬೆಂಗಳೂರು: ಅಂತ್ಯೋದಯದ ಸಿದ್ಧಾಂತದೊಂದಿಗೆ ಹೆಮ್ಮೆಯ ವಿಶ್ವನಾಯಕ ನರೇಂದ್ರ ಮೋದಿಜಿಯವರ ಸಮರ್ಥ ನಾಯಕತ್ವ ನಮಗೆ ಆದರ್ಶ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿಪ್ರಾಯಪಟ್ಟರು.

ಸೇವಾ ಸಂಕಲ್ಪ ಅಭಿಯಾನದ ಪ್ರಯುಕ್ತ ನಡೆಯುತ್ತಿರುವ ಸೇವಾ ಜ್ಯೋತಿ ಯಾತ್ರೆಯ ಸಮಾರೋಪ ಸಮಾರಂಭವು ಇಂದು ಡಾ. ಎಂ.ಸಿ. ಮೋದಿ ಆಸ್ಪತ್ರೆಯ ರಸ್ತೆಯಲ್ಲಿರುವ ಶಂಕರಮಠ ಆಟದ ಮೈದಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೋದಿಜೀ ಅವರ ಸಾಧನೆ- ಸೇವಾ ಕಾರ್ಯಗಳು ನಮ್ಮ ದಾರಿಯನ್ನು ಬೆಳಕು ಹುಟ್ಟುವ ಜ್ಯೋತಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸೇವಾ ಜ್ಯೋತಿ ಯಾತ್ರೆ ಸಾರ್ಥಕವಾಗಲಿ ಎಂದು ಹಾರೈಸಿದರು.

ಮೋದಿಜೀ ಅವರ ಸೇವಾ ಕಾರ್ಯವು ಇಂದು 25 ವರ್ಷಗಳ ನಿರಂತರ ಜನಸೇವೆಯ ಮಹತ್ವದ ಮೈಲಿಗಲ್ಲನ್ನು ತಲುಪಿದೆ. ಕಾಲು ಶತಮಾನಗಳ ಕಾಲ ಅಭೂತಪೂರ್ವ ಜನಾದೇಶ ಪಡೆದು, ಸರ್ಕಾರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೊದಲು ಸುಮಾರು 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಗಳಾಗಿ, ನಂತರ ಕಳೆದ 12 ವರ್ಷಗಳಿಂದ ಭಾರತದ ಪ್ರಧಾನಮಂತ್ರಿಗಳಾಗಿ ಮೋದಿಜಿಯವರು ಸೇವೆ ಸಲ್ಲಿಸುತ್ತಿರುವ ಸತತ ದೇಶಸೇವೆಗೆ ಅದ್ವಿತೀಯವಾದುದು ಎಂದು ನುಡಿದರು.

ನರೇಂದ್ರ ಮೋದಿಜಿಯವರು ಸಾರ್ವಜನಿಕ ಜೀವನದಲ್ಲಿ 25 ವರ್ಷಗಳ ಸಾರ್ಥಕ ಸೇವೆಯನ್ನು ಪೂರ್ಣಗೊಳಿಸುತ್ತಿರುವ ಸಂದರ್ಭವಿದು. ಈ ಕಾಲಘಟ್ಟದಲ್ಲಿ, ಸೇವಾ ಸಂಕಲ್ಪ ಅಭಿಯಾನದ ಮೂಲಕ ಅವರ ರಾಷ್ಟ್ರ ಸೇವೆಯನ್ನು ನಾವೆಲ್ಲರೂ ಸ್ಮರಿಸುತ್ತಿದ್ದೇವೆ ಮತ್ತು ಸಂಭ್ರಮಿಸುತ್ತಿದ್ದೇವೆ. ನಮ್ಮ ಪ್ರಧಾನಿಯವರು ಒಂದೇ ಒಂದು ದಿನ ರಜೆ ಪಡೆಯದೆ, ತಮ್ಮ ಸಂಪೂರ್ಣ ಜೀವನವನ್ನೇ ದೇಶಕ್ಕಾಗಿ ಮುಡುಪಾಗಿಟ್ಟ ಶ್ರೇಷ್ಠ ನಾಯಕ. ಅಂಥ ನಾಯಕ ಈ ದೇಶಕ್ಕೆ ಸಿಕ್ಕಿರುವುದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ತರುವ ಸಂಗತಿ ಎಂದು ವಿಶ್ಲೇಷಿಸಿದರು.

ಮೋದಿಜಿಯವರ ಪಯಣವನ್ನು ನೋಡಿದಾಗ, ರಾಜಕೀಯ ಅವರ ಪಾಲಿಗೊಂದು ಅಧಿಕಾರ ಮಾರ್ಗವಲ್ಲ, ಅದು ಜನಸೇವೆ ಮತ್ತು ದೇಶಸೇವೆಗೆ ಒಂದು ಅವಕಾಶ ಎಂದು ನನಗೆ ಅನಿಸುತ್ತದೆ. ಮುಖ್ಯಮಂತ್ರಿಗಳಾಗಿ, ಪ್ರಧಾನಮಂತ್ರಿಗಳಾಗಿ, ದೇಶದ ಸಾಮಾನ್ಯ ನಾಗರಿಕರ ಬದುಕಿನಲ್ಲಿ ಪರಿವರ್ತನೆ ತರಬೇಕು ಎಂಬ ಒಂದೇ ಒಂದು ಸಂಕಲ್ಪದೊಂದಿಗೆ ಅವರು ಸತತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಈ ವಿಶೇಷ ಸಂದರ್ಭದಲ್ಲಿ ನಮ್ಮ ಪ್ರತಿಯೊಬ್ಬ ಕಾರ್ಯಕರ್ತನ ವೈಯಕ್ತಿಕ ಸಂಪರ್ಕದ ಸಂಕಲ್ಪ ನಮ್ಮದಾಗಲಿ. ಮೋದಿಜಿಯವರ ಮೇಲೆ ನಮ್ಮ ಅಭಿಮಾನದ ಅಭಿವ್ಯಕ್ತಿಯಾಗಬೇಕು ಎಂದು ಆಶಿಸಿದರು.


Share It

You cannot copy content of this page