ಬಸವ ಕಲ್ಯಾಣ: ನಗರದ ಹೊರವಲಯದ ಪಾರ್ಕ್ನಲ್ಲಿ ಹಿಂದೂ ಯುವಕನ ಜತೆ ಕುಳಿತಿದ್ದ ಕಾರಣಕ್ಕೆ ಮುಸ್ಲಿಂ ಯುವತಿಯನ್ನು ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿರುವ ಘಟನೆ ಬಸವಕಲ್ಯಾಣದಲ್ಲಿ ನಡೆದಿದೆ.
ಹಿಂದೂ ಯುವಕನ ಜತೆ ಯುವತಿಯೊಬ್ಬಳು ಬಸವಕಲ್ಯಾಣ ನಗರದ ಹೊರವಲಯದ ಪಾರ್ಕ್ನಲ್ಲಿ ಕುಳಿತಿದ್ದರು. ಈ ವೇಳೆಗೆ ಅಲ್ಲಿಗೆ ಆಗಮಿಸಿದ ಮುಸ್ಲಿಂ ಯುವಕರ ಗುಂಪೊAದು ನೀನು, ಮುಸ್ಲಿಂ ಸಮುದಾಯದ ಮರ್ಯಾದೆ ಕಳೆಯುತ್ತಿದ್ದೀಯಾ, ಹಿಂದೂ ಯುವಕನ ಜತೆ ಏಕೆ ಕುಳಿತಿದ್ದೀಯಾ ಎಂದು ಪ್ರಶ್ನೆ ಮಾಡಿ ಹಲ್ಲೆ ನಡೆಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಿಂದೂ ಯುವಕನ ಮೇಲೂ ಯುವಕರ ಗುಂಪು ಹಲ್ಲೆ ನಡೆಸಿ, ಪರಾರಿಯಾಗಿದೆ.
ಮೂವರು ಆರೋಪಿಗಳ ಬಂಧನ: ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆಟೋದಲ್ಲಿ ಡ್ರಾಪ್ ತೆಗೆದುಕೊಂಡಿದ್ದನ್ನು ತಪ್ಲಾಗಿ ತಿಳಿದುಕೊಂಡು ಹಲ್ಲೆ ನಡೆಸಿದರು ಎಂದು ಹೇಳಲಾಗಿದೆ.