ಬೆಂಗಳೂರು: ತಾಯಿ ಮಗ ಸೇರಿ ಮಹಿಳೆಯೊಬ್ಬರಿಗೆ ದೋಷಮುಕ್ತ ಪೂಜೆ ಹೆಸರಿನಲ್ಲಿ ಲಕ್ಷಾಂತರ ರುಪಾಯಿಗಳನ್ನು ವಂಚನೆ ಮಾಡಿರುವ ಪ್ರಕರಣ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬನಶಂಕರಿ 2 ನೇ ಹಂತದಲ್ಲಿ ವಾಸವಿರುವ ಮಹಿಳೆಯೊಬ್ಬರು, 2022 ರಲ್ಲಿ ಕೆಲಸಕ್ಕಾಗಿ ಬಿಟಿಎಂ ಲೇಔಟ್ನ ಕಚೇರಿಯೊಂದಕ್ಕೆ ಹೋಗಿದ್ದರು. ಆದರೆ, ಅಲ್ಲಿ ಬಾಡಿ ಮಸಾಜ್ ಮಾಡುತ್ತಿರುವುದನ್ನು ಕಂಡು, ಇಂತಹ ಕೆಲಸ ನನಗೆ ಇಷ್ಟವಿಲ್ಲ ಎಂದು ವಾಪಸ್ ಬಂದಿದ್ದರು.
ಆದರೆ, ಅಲ್ಲಿದ್ದ ಮಹೇಶ್ ಎಂಬ ವ್ಯಕ್ತಿ, ಇವರ ಜತೆ ದೂರವಾಣಿ ಸಂಪರ್ಕ ಬೆಳಸಿ, 2023 ರಲ್ಲಿ ಕರೆ ಮಾಡಿ ನೀನು ಆರು ತಿಂಗಳ ಹಿಂದೆ ನನ್ನ ಬಳಿ ಬಂದಿರುವ ಕುರಿತು ಮಾಹಿತಿಯಿದೆ. ಇದೆಲ್ಲ ನಿಮ್ಮ ಮನೆಯಲ್ಲಿ ಗೊತ್ತಾಗದೆ ಇರಬೇಕು ಎಂದರೆ ನೀನು ನನ್ನ ಜತೆ ದೈಹಿಕ ಸಂಪರ್ಕ ಇಟ್ಟುಕೊಳ್ಳಬೇಕು ಎಂದು ಬೇಡಿಕೆಯಿಟ್ಟಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ನಡುವೆ ಆರೋಪಿ ಮಹೇಶನ ತಾಯಿ ಕರೆ ಮಾಡಿ, ನೀನು ನನ್ನ ಮಗನ ಬಾಳಿನಲ್ಲಿ ಬಂದಿರುವ ಕಾರಣ ಆತನಿಗೆ ನೆಮ್ಮದಿಯಿಲ್ಲದಂತಾಗಿದೆ. ಹೀಗಾಗಿ, ಶಾಂತಿ ಪೂಜೆ ಮಾಡಿಸಬೇಕು. ಅದಕ್ಕಾಗಿ ತಗಲುವ ಖಚರ್ು ವೆಚ್ಚವನ್ನು ನೀನೇ ಕೊಡಬೇಕು ಎಂದು ಹೇಳಿದ್ದಾರೆ.
35 ಗ್ರಾಂ ತೂಕದ ಚಿನ್ನದ ತಾಳಿ, ಉಂಗುರ ಮತ್ತು 4 ಲಕ್ಷ ರು. ನಗದು ಪಡೆದುಕೊಂಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಜತೆಗೆ, ಮತ್ತಷ್ಟು ಹಣವನ್ನು ಕೊಡುವಂತೆಯೂ ಆಗಾಗ ಕರೆ ಮಾಡಿ ಪೀಡಿಸುತ್ತಿದ್ದಾರೆ. ಹಣ ನೀಡದಿದ್ದರೆ, ನೀನು ಸ್ಪಾಗೆ ಬಂದದ್ದನ್ನೆಲ್ಲ ಮನೆಗೆ ಹೇಳುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ.