ಕಠ್ಮಂಡು: ನೇಪಾಳದ ಪ್ರವಾಹಕ್ಕೆ ಸುಮಾರು 616 ಮಂದಿ ಸಾವನ್ನಪ್ಪಿದ್ದು, ಸುಮಾರು 2,500 ಮಂದಿ ನಾಪತ್ತೆಯಾಗಿದ್ದಾರೆ. ಈ ಕಠಿಣ ಪರಿಸ್ಥಿತಿಯಲ್ಲಿಯೂ ನೇಪಾಳ ಮತ್ತು ಚೀನಾದಿಂದ ರಕ್ಷಣಾ ಕಾರ್ಯ ಮುಂದುವರೆದಿದೆ.
ದಟ್ಟ ಕೇಸರಿನ ಮಣ್ಣಿನಲ್ಲಿ ಸಿಲುಕಿ ಬದುಕುಳಿದವರನ್ನು ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ನಡೆಸಿ, ರಕ್ಷಿಸುತ್ತಿದ್ದಾರೆ. ಹೆಲಿಕಾಪ್ಟರ್ಗಳ ಮೂಲಕ ಸಂಕಷ್ಟದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ.
ಪ್ರವಾಹದ ಪರಿಣಾಮಕ್ಕೆ ಚೀನಾದ ಗಡಿ ಭಾಗ ತೀವ್ರ ಹಾನಿಗೊಳಗಾದ ಚೆಕ್ಪಾಯಿಂಟ್ ಪ್ರದೇಶದಲ್ಲಿ ಚೀನಾ ಸೇನೆ ಕಾರ್ಯಾಚರಣೆ ನಡೆಸಿದೆ. ಪ್ರವಾಹದಿಂದ ತೀವ್ರವಾಗಿ ಬಾಧಿತವಾಗಿರುವ ನೇಪಾಳದ ಜಿಲ್ಲೆಗಳಲ್ಲಿರುವ ಜಲವಿದ್ಯುತ್ ಸ್ಥಾವರವೊಂದರ ಸುರಂಗದೊಳಗೆ ಸುಮಾರು 100 ಜನರು ಸಿಲುಕಿರಬಹುದು ಎಂಬ ಶಂಕೆ ಇದ್ದು, ಅವರ ರಕ್ಷಣೆಗೆ ನೇಪಾಳ ಸೇನೆಯನ್ನು ನಿಯೋಜಿಸಲಾಗಿದೆ. ಇಲ್ಲಿಯೂ ದಟ್ಟವಾದ ಮಣ್ಣಿನ ಪದರು ರಕ್ಷಣಾ ಕಾರ್ಯಕ್ಕೆ ಅಡಚಣೆಯಾಗಿದೆ.
ರ್ಯಾಪ್ಪೆಲಿಂಗ್ ರಕ್ಷಣಾ ತಂಡವು ಕಾಡಿನ ಪರ್ವತ ಇಳಿಜಾರುಗಳಿಂದ ಗಡಿ ದಾಟುವ ಪ್ರದೇಶಕ್ಕೆ ಇಳಿದಿದೆ ಎಂದು ಚೀನಾದ ಸೆಂಟ್ರಲ್ ಟೆಲಿವಿಷನ್ ತಿಳಿಸಿದೆ.
ಕಾರ್ಯಾಚರಣೆ ಕುರಿತು ಸರ್ಕಾರಿ ಮಾಧ್ಯಮದೊಂದಿಗೆ ಮಾತನಾಡಿರುವ ಅಧಿಕಾರಿ ಝೌ ಮಿಂಗ್ಕಿ, ಇದೀಗ ನಾವು ಕೇವಲ ಅವಶೇಷಗಳನ್ನು ಕಾಣುತ್ತಿದ್ದೇವೆ ಎಂದಿದ್ದಾರೆ. ಉಪಗ್ರಹ ಚಿತ್ರಗಳ ಪ್ರಕಾರ, ಚೀನಾವನ್ನು ಪ್ರವೇಶಿಸಲು ಅಥವಾ ಗಡಿ ತಪಾಸಣೆಯನ್ನು ದಾಟುತ್ತಿದ್ದ ಪ್ರದೇಶವು ಈಗ ಸಂಪೂರ್ಣವಾಗಿ ನೆಲಸಮವಾಗಿದೆ. ಇದು ಕೆಸರುಮಯ ಪ್ರದೇಶವಾಗಿ ಮಾರ್ಪಟ್ಟಿದೆ.

