ಹಾಸನ: ಪೆನ್ ಡ್ರೈವ್ ಇದೆ, ವಿಡಿಯೋ ಹಂಚಿದ್ದಾರೆ ಎಂಬ ಕಾರಣವನ್ನಿಟ್ಟುಕೊಂಡು ಅರೆಸ್ಟ್ ಮಾಡುವುದೇ ಆದರೆ, ಹಾಸನದಲ್ಲಿ ಸುಮಾರು ಒಂದೂವರೆ ಲಕ್ಷ ಜನರನ್ನು ವಶಕ್ಕೆ ಪಡೆಯಬೇಕಾಗುತ್ತದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ತಿಳಿಸಿದ್ದಾರೆ.
ಪೆನ್ ಡ್ರೆöÊವ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಇಬ್ಬರು ಆರೋಪಿಗಳು ಪ್ರೀತಂ ಗೌಡ ಬೆಂಬಲಿಗರು ಎಂದು ಹೇಳಲಾಗುತ್ತಿದ್ದು, ಇದನ್ನು ನಿರಾಕರಿಸಿರುವ ಪ್ರೀತಂ ಗೌಡ, ಅರ‍್ಯಾರು ನನಗೆ ಗೊತ್ತಿಲ್ಲ. ಅರೆಸ್ಟ್ ಮಾಡಿರುವುದು ನನ್ನ ಬೆಂಬಲಿಗರನ್ನು ಎಂದು ಹೇಳಲಾಗುತ್ತಿದೆ. ಇದು ಸುಳ್ಳು ಎಂದು ತಿಳಿಸಿದರು.
ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಬೇಕು. ಆದರೆ, ಪೆನ್ ಡ್ರೈವ್ ಹಂಚಿಕೆ ಮಾಡಿದವರು, ವಿಡಿಯೋ ಹಂಚಿದವರನ್ನೆಲ್ಲ ಬಂಧನ ಮಾಡುವುದಾದರೆ, ಹಾಸನದಲ್ಲಿ ಸುಮಾರು ಒಂದೂವರೆ ಲಕ್ಷ ಜನರನ್ನು ಬಂಧಿಸಬೇಕಾಗುತ್ತದೆ. ಹೀಗಾಗಿ, ಪ್ರಕರಣದ ತನಿಖೆಯನ್ನು ಎಸ್‌ಐಟಿ, ತನ್ನ ತನಿಖಾ ವ್ಯಾಪ್ತಿಯಲ್ಲಿ ಮಾಡಿ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವ ಪ್ರಯತ್ನ ಮಾಡಲಿ ಎಂದು ಅವರು ತಿಳಿಸಿದರು.