ಬೆಂಗಳೂರು: ಅದೇಕೋ ಮಾಜಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಗ್ರಹಚಾರವೇ ಸರಿಯಿಲ್ಲ. ಉಡುಪಿಯಲ್ಲಿ ಬಿಜೆಪಿ ಕಾರ್ಯಕರ್ತರೇ ಗೋ ಬ್ಯಾಕ್ ಅಭಿಯಾನ ನಡೆಸಿದರೆ, ಬೆಂಗಳೂರು ಉತ್ತರದಲ್ಲಿ ಬಂಡಾಯ ಬಿಸಿ ಮುಟ್ಟಿಸಿದೆ.
ಈ ನಡುವೆ ಮತ್ತೊಂದು ಯಡವಟ್ಟು ಅವರಿಗೆ ವಕ್ಕರಿಸಿಕೊಂಡಿದ್ದು, ಪ್ರಚಾರದ ವೇಳೆ ವ್ಯಕ್ತೊಯೊಬ್ಬನನ್ನು ಬಲಿ ಪಡೆದ ಆರೋಪ ಬಿಜೆಪಿ ಅಭ್ಯಥರ್ಿ ಶೋಭಾ ಕರಂದ್ಲಾಜೆ ಅವರ ಮೇಲೆ ಬಂದಿದೆ. ಸೋಮುವಾರ ಪ್ರಚಾರದ ವೇಳೆ ಕೆ.ಆರ್.ಪುರದ ಗಣೇಶ ದೇವಸ್ಥಾನದ ಬಳಿ ಶೋಭಾ ಕರಂದ್ಲಾಜೆ ಅವರ ಕಾರನ್ನು ನಿಲ್ಲಿಸಿ ಏಕಾಏಕಿ ಡೋರ್ ತೆಗೆಯಲಾಗಿದೆ. ಹಿಂದಿನಂದ ಬೈಕ್ನಲ್ಲಿ ಬಂದ ವ್ಯಕ್ತಿ ಡೋರಿಗೆ ಬಡಿದು ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.
ಶೋಭಾ ಕರಂದ್ಲಾಜೆ ಅವರು ಕೆ.ಆರ್ ಪುರಂ ಭಾಗದಲ್ಲಿ ಪ್ರಚಾರ ಮಾಡುತ್ತಿದ್ದರು. ಅವರ ಕಾರನ್ನ ರಸ್ತೆ ಬದಿ ಪಾಕರ್್ ಮಾಡಲಾಗಿತ್ತು. ಈ ವೇಳೆ ಕಾರಿನ ಚಾಲಕ ಡೋರ್ ತೆಗೆದಿದ್ದು, ಹಿಂದೆಯಿಂದ ಬಂದ ಪ್ರಕಾಶ್ಗೆ ಬಡಿದು ರಸ್ತೆಯ ಮೇಲೆ ಬಿದ್ದಿದ್ದಾರೆ. ಇದೇ ವೇಳೆ ಅಲ್ಲಿಗೆ ಖಾಸಗಿ ಬಸ್ ಅವರ ಮೇಲೆ ಹರಿದಿದೆ. ತಕ್ಷಣವೇ ಕಾರ್ಯಕರ್ತರು ಪ್ರಕಾಶ್ರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಕಾಶ್ ಸಾವನ್ನಪ್ಪಿದ್ದಾರೆ.
ಪ್ರಕಾಶ್ ಬಿಜೆಪಿ ಕಾರ್ಯಕರ್ತ: ಘಟನೆ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಇದೊಂದು ಅನಿರೀಕ್ಷಿತ ಘಟನೆ, ನಾವೆಲ್ಲರೂ ಮುಂದೆ ಹೋಗಿದ್ದೆವು, ಕಾರು ರಸ್ತೆ ಬದಿಯಲ್ಲಿ ನಿಂತಿತ್ತು. ನಮ್ಮ ಕಾರ್ಯಕರ್ತ ಪ್ರಕಾಶ್ ಅವರು ಕಾರಿನ ಬಾಗಿಲಿಗೆ ಡಿಕ್ಕಿ ಹೊಡೆದು ಬಿದ್ದಿದ್ದಾರೆ. ಅವರ ಮೇಲೆ ಬಸ್? ಹರಿದಿದ್ದು, ಗಾಯಗೊಂಡಿದ್ದರು. ಆದರೆ ಅವರಿಗೆ ಯಾವ ರೀತಿ ಗಾಯವಾಗಿದೆ ಎಂಬುದು ಶವ ಪರೀಕ್ಷೆಯಿಂದ ತಿಳಿದುಬರಲಿದೆ. ತಕ್ಷಣವೇ ಪೋಸ್ಟ್ ಮಾರ್ಟಮ್? ಮಾಡಲು ಪೊಲೀಸರಿಗೆ ಹಾಗೂ ವೈದ್ಯಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದಿದ್ದಾರೆ.