ಬೆಂಗಳೂರು: ಇತ್ತೀಚೆಗೆ ಹೈದರಾಬಾದ್‌ನಲ್ಲಿ ಸಾವನ್ನಪ್ಪಿದ ಮಂಡ್ಯ ಮೂಲದ ಪವಿತ್ರಾ ಜಯರಾಂ ಜತೆಯಲ್ಲಿ ನಟಿಸುತ್ತಿದ್ದ ಸಹನಟ ಚಂದ್ರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.
ನಟಿ ಪವಿತ್ರಾ ಮತ್ತು ಚಂದ್ರು ಜತೆಯಾಗಿ ತ್ರಿನಯನಿ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದರು. ಎರಡು ದಿನಗಳ ಹಿಂದೆ ಪವಿತ್ರಾ ಜಯರಾಂ ಅವರು ಹೈದರಾಬಾದ್‌ಗೆ ತೆರಳುವ ದಾರಿಯ ನಡುವೆ ಅಪಘಾತವಗಿ ಸಾವನ್ನಪ್ಪಿದ್ದರು. ಮಂಡ್ಯದ ಹುಟ್ಟೂರಿನಲ್ಲಿ ಅವರ ಅಂತ್ಯಸAಸ್ಕಾರ ನಡೆಸಲಾಗಿತ್ತು. ಅಲ್ಲಿಗೆ ಆಗಮಿಸಿದ್ದ ಚಂದ್ರು, ಪವಿತ್ರಾ ಸಾವಿನ ನಂತರ ಖಿನ್ನತೆಗೆ ಒಳಗಾಗಿದ್ದರು.
ಎರಡು ದಿನದಿಂದ ಅದೇ ಬೇಸರದಲ್ಲಿದ್ದ ಚಂದ್ರು, ಹೈದರಾಬಾದ್‌ನ ಮಣಿಕೊಂಡದಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಂದ್ರು ಅವರಿಗೆ 2015 ರಲ್ಲಿ ರೇಖಾ ಜತೆಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರು. ನಾರಸಿಂಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.