ಬೆಂಗಳೂರು: ದೇವೇಗೌಡರ ಕುಟುಂಬದ ಕುಡಿ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬAಧಿಸಿದAತೆ ಆಗಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವಂತೆ ರಾಷ್ಟಿçÃಯ ಮಹಿಳಾ ಆಯೋಗ ನೊಟೀಸ್ ನೀಡಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ ಕುಟುಂಬದಲ್ಲಿ ಇಂತಹ ಘಟನೆ ನಡೆದಿದ್ದು, ಸಂಸದ ಪ್ರಜ್ವಲ್ ರೇವಣ್ಣ ಅನೇಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪವಿದೆ. ಈ ವಿಡಿಯೋಗಳು ರಾಜ್ಯಾದ್ಯಂತ ವೈರಲ್ ಆಗಿದ್ದು, ಈ ಸಂಬAಧ ಮಾಹಿತಿ ನೀಡುವಂತೆ ಮಹಿಳಾ ಆಯೋಗ ಸೂಚಿಸಿದೆ.
ಸರಕಾರ ಪೆನ್‌ಡ್ರೆöÊವ್ ವಿಡಿಯೋ ವೈರಲ್ ಆಗಿರುವ ಸಂಬAಧ ತನಿಖೆ ನಡೆಸಲು ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಿದ್ದು, ಈವರೆಗೆ ಎಸ್‌ಐಟಿ ತನಿಖೆ ಏನಾನಾಗಿದೆ? ಲೈಂಗಿಕ ದೌರ್ಜನ್ಯ ಮಾಡಿದವರ ವಿರುದ್ಧ ಏನು ಕ್ರಮವಾಗಿದೆ? ವಿಡಿಯೋದಲ್ಲಿರುವ ಮಹಿಳೆಯರ ರಕ್ಷಣೆಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂಬೆಲ್ಲ ವಿಷಯಗಳನ್ನು ಮೂರು ದಿನಗಳಲ್ಲಿ ಮಾಹಿತಿ ನೀಡುವಂತೆ ಆಯೋಗ ಸೂಚಿಸಿದೆ.
ಸೈಬರ್ ಪೊಲೀಸರ ಜತೆ ಸಭೆ:
ವಿಡಿಯೋ ವೈರಲ್ ಆಗುತ್ತಿರುವುದರಿಂದ ಮಹಿಳೆಯರ ಘಟನೆತೆ ಧಕ್ಕೆ ಆಗುತ್ತಿದ್ದು, ಕೆಲವು ಮಹಿಳೆಯರು ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ, ಆ ವಿಡಿಯೋಗಳು ವೈರಲ್ ಆಗದಂತೆ ಕ್ರಮ ತೆಗೆದುಕೊಳ್ಳಲು ಮಹಿಳಾ ಆಯೋಗ ತೀರ್ಮಾನಿಸಿದ್ದು, ಈ ಸಂಬAಧ ಸೈಬರ್ ಪೊಲೀಸರ ಜತೆಗೆ ಸಭೆ ನಡೆಸಲಿದೆ.