ನವಲಗುಂದ : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಲ್ಹಾದ ಜೋಶಿ 3 ಲಕ್ಷಕ್ಕೂ ಜಾಸ್ತಿ ಅಂತರದಲ್ಲಿ ಗೆಲ್ತಾರೆ, ಕಾಂಗ್ರೆಸ್ ನವರು ಹಣ, ಹೆಂಡ ಬಲದಿಂದ ಗೆಲ್ತಿವೆ ಅನ್ಕೊಂಡಿದ್ರು ವಿಷ ಬೀಜ ಬಿತ್ತಿ ಚುನಾವಣೆ ಗೆಲ್ಲುವ ಭ್ರಮೆಯಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದಲ್ಲಿ ನಡೆದ ರೋಡ್ ಶೋನಲ್ಲಿ ಮಾತನಾಡಿದ ಅವರು ನಿಮ್ಮ ಮುಂದಿನ ಪ್ರಧಾನಿ ಯಾರು ಅಂತಾ ಕಾಂಗ್ರೆಸ್ ನವರಿಗೆ ಕೇಳ್ತೇನೆ, ಪಾಕಿಸ್ತಾನ್ ಕೂಡ ಹೆದರುವಂತ ಮಹಾನ್ ವ್ಯಕ್ತಿ ಮೋದಿ. ಪ್ರಲ್ಹಾದ ಜೋಶಿ ದೊಡ್ಡ ಅಂತರದಲ್ಲಿ ಗೆಲ್ತಾರೆ ನಾನು ಕೊಟ್ಟ ಭಾಗ್ಯಲಕ್ಷ್ಮಿ, ಸುವರ್ಣ ಗ್ರಾಮ ನಿಂತೋಯ್ತು ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆ. ಇದನ್ನ ಕಿತ್ತೊಗೆದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲೋದು ನಿಶ್ಚಿತ ಎಂದ ಬಿಎಸ್ ವೈ.
ಈ ವೇಳೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ,ಜೆಡಿಎಸ್ ಮುಖಂಡ ಮಾಜಿ ಸಚಿವ ಕೆ ಏನ್ ಗಡ್ಡಿ, ಎಸ್ ಬಿ ದಾನಪ್ಪಗೌಡ, ಸಿದ್ದನಗೌಡ ಪಾಟೀಲ, ನಿಂಗಪ್ಪ ಬಾರಕೇರ, ಅಣ್ಣಪ್ಪ ಭಾಗಿˌ ಷಣ್ಮುಖ ಗುರಿಕಾರˌ ಮೈಲಾರಪ್ಪ ವೈದ್ಯˌ ಬಸವರಾಜ ಕಾತರಕಿˌ ಜಯಪ್ರಕಾಶ್ ಬದಾಮಿˌ ಮಾಂತೇಶ ಕಲಾಲ, ಈರಣ್ಣ ಚವಡಿ, ಮನೋಜ ಪಟ್ಟಣಶೆಟ್ಟಿ, ಶಂಕ್ರಣ್ಣ ತೋಟದ ಬಿಜೆಪಿಯ ಕಾರ್ಯಕರ್ತರು ಹಾಗೂ ಮೋದಿ ಅಭಿಮಾನಿಗಳು ಭಾಗಿಯಾಗಿದ್ದರು.