ಸುದ್ದಿ

ಶರಣಾಗಲಿಲ್ಲ ಪ್ರಜ್ವಲ; ರೇವಣ್ಣನಿಗೆ ಜಾಮೀನು ಸಿಗಲಿಲ್ಲ

Share It

ಬೆಂಗಳೂರು: ಆರೋಪಿಯು ಪ್ರಭಾವಶಾಲಿಯಾಗಿದ್ದು, ಜಾಮೀನು ನೀಡಿದರೆ, ಪ್ರಕರಣದಲ್ಲಿರುವ ಸಂತ್ರಸ್ತೆಯನ್ನು ಬೆದರಿಸುವ ಸಾಧ್ಯತೆಯಿರುತ್ತದೆ. ಜತೆಗೆ, ಇಂತಹದ್ದೇ ಅಪರಾಧ ಪುನಾರಾವರ್ತನೆಯಾದರೂ ಆಗಬಹುದು ಎಂಬ ಕಾರಣ ನೀಡಿದ ಪ್ರಾಸಿಕ್ಯೂಷನ್ ವಾದ ರೇವಣ್ಣ ಅವರ ಜಾಮೀನು ತಡೆಗೆ ಕಾರಣವಾಯಿತು.

ಏಳು ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ರೇವಣ್ಣ, ಜಾಮೀನು ಕೋರಿ ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅರ್ಜಿ ವಿಚಾರಣೆ ನಡೆಸಿದರು.

ಜಾಮೀನು ನೀಡಬಾರದು ಎಂದು ಎಸ್‌ಐಟಿ ಪರ ವಾದ ಮಂಡಿಸಿದ ಜಯ್ನಾ ಕೊಠಾರಿ, ಈ ಪ್ರಕರಣದಲ್ಲಿ ನ್ಯಾಯಾಲಯ ತೆಗೆದುಕೊಳ್ಳುವ ತೀರ್ಮಾನದಿಂದ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಒಂದು ಸ್ಪಷ್ಟ ಸಂದೇಶ ಸಿಕ್ಕಂತಾಗಬೇಕು. ಆರೋಪಿಯ ಆದೇಶದ ಮೇರೆಗೆ ಮಹಿಳೆಯನ್ನು ಒತ್ತೆಯಾಳಾಗಿ ಇಟ್ಟುಕೊಳ್ಳಲಾಗಿತ್ತು. ಇದು ಸ್ಪಷ್ಟ ಅಪಹರಣ ಪ್ರಕರಣವಾಗಿದ್ದು, ಇದನ್ನು ಸಾಕ್ಷಿಗಳ ವಿಚಾರಣೆ ವೇಳೆಯೂ ಒಪ್ಪಿಕೊಂಡಿದ್ದಾರೆ. ಹೀಗಾಗಿ, ಜಾಮೀನು ಕೊಡಬಾರದು ಎಂದು ವಾದ ಮಂಡಿಸಿದರು.

ರೇವಣ್ಣ ಮತ್ತು ಅವರ ಕುಟುಂಬ ಪ್ರಭಾವಿಯಾಗಿದ್ದು, ಸಾಕ್ಷಿ ಹೇಳುವವರು ನಿರ್ಭೀತಿಯಿಂದ ಇರಲು ಸಾಧ್ಯವಾಗುವುದಿಲ್ಲ. ಅವರ ಪುತ್ರ ಈಗಾಗಲೇ, ವಿದೇಶಕ್ಕೆ ಪರಾರಿಯಾಗಿದ್ದು, 196 ದೇಶಗಳಿಗೆ ಬ್ಲೂ ಕಾರ್ನರ್ ನೊಟೀಸ್ ನೀಡಿದರೂ, ವಿಚಾರಣೆಗೆ ಹಾಜರಾಗಿಲ್ಲ. ಅವರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ರೇವಣ್ಣ ಅವರಿಗೆ ಜಾಮೀನು ನೀಡಿದರೂ, ಇಂತಹದ್ದೇ ಮರುಕಳಿಸಬಹುದು ಎಂದು ವಾದಿಸಿದರು.

ರೇವಣ್ಣ ಪರ ವಾದ ಮಂಡಿಸಿದ ವಕೀಲ ಸಿ.ವಿ ನಾಗೇಶ್, ರೇವಣ್ಣ ವಿರುದ್ಧ ದಾಖಲಿಸಿರುವ ಪ್ರಕರಣ ರಾಜಕೀಯ ಪ್ರೇರಿತ, ಮಹಿಳೆ ರೇವಣ್ಣ ಅವರ ಬಂಧನದ ದಿನವೇ ಪತ್ತೆಯಾಗಿದ್ದಾರೆ. ಹೀಗಾಗಿ, ಜಾಮೀನು ನೀಡಿದರೆ ಸಮಸ್ಯೆ ಇಲ್ಲ, ಎಸ್‌ಐಟಿ ತನಿಖೆ ರಾಜಕೀಯ ಪ್ರೇರಿತ ಎಂಬAತೆ ಸಾಗುತ್ತಿದೆ ಎಂದು ವಾದಿಸಿದರು. ಪ್ರಾಸಿಕ್ಯೂಷನ್ ಅವರು ಮತ್ತಷ್ಟು ವಾದಕ್ಕೆ ಅವಕಾಶ ಕೇಳಿದ ಕಾರಣಕ್ಕೆ ವಿಚಾರಣೆಯನ್ನು ನ್ಯಾಯಾಲಯ ಮೇ.13 ಕ್ಕೆ ಮುಂದೂಡಿತು.


Share It

You cannot copy content of this page