ಉಪಯುಕ್ತ ಸುದ್ದಿ

ಜೂನ್ ೧ ರಿಂದ ಪದವಿ ಪೂರ್ವ ಕಾಲೇಜುಗಳು ಆರಂಭ

Share It


ಬೆAಗಳೂರು: ಪ್ರಥಮ ಪಿಯುಸಿ ಪ್ರವೇಶಕ್ಕೆ ಪ್ರಕ್ರಿಯೆಗಳು ಮೇ. ೧೩ರಿಂದ ಆರಂಭವಾಗಲಿದ್ದು, ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳು ಜೂನ್ ೧ ರಿಂದ ತೆರಯಲಿವೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ೨೦೨೪-೨೫ ನೇ ಸಾಲಿನ ಶೈಕ್ಷಣಿಕ ವರ್ಷವನ್ನು ನಿಗದಿಪಡಿಸಿದೆ. ಮೇ ೧೩ ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ಜೂನ್ ೧ಕ್ಕೆ ಕಾಲೇಜುಗಳು ಆರಂಭವಾಗಲಿವೆ. ಅಕ್ಟೋಬರ್ ೨ ರಿಂದ ಅ.೧೮ ರವಗೆ ದಸರಾ ರಜೆ ಇದ್ದು, ಅ.೧೯ ರಿಂದ ೨೦೨೫ರ ಮಾರ್ಚ್ ೩೧ರವರೆಗೆ ೨ ನೇ ಅವಧಿಯ ತರಗತಿಗಳು ನಡೆಯಲಿವೆ. ಏ.೧ ರಿಂದ ಬೇಸಿಗೆ ರಜೆಯನ್ನು ಘೋಷಿಸಲಾಗಿದೆ.

ಪ್ರವೇಶಾತಿಗೆ ಸಂಬAಧಿಸಿದAತೆಯೂ ಮಾರ್ಗಸೂಚಿಯಲ್ಲಿ ತಿಳಿಸಿದ್ದು, ಪ್ರವೇಶ ಶುಲ್ಕಗಳು ಹಿಂದಿನ ವರ್ಷದಂತೆಯೇ ಮುಂದುವರಿಯಲಿದ್ದು, ಯಾವುದೇ ಬದಳಾವಣೆಯಾಗಿಲ್ಲ. ಮೆರಿಟ್ ಆಧಾರದಲ್ಲಿಯೇ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿಗೆ ಪ್ರವೇಶದ ಅವಕಾಶ ಕಲ್ಪಿಸಿಕೊಡಬೇಕು. ಜೂನ್ ೧೪ರವೆರೆಗೆ ದಂಡ ಶುಲ್ಕವಿಲ್ಲದೆ ಪ್ರವೇಶ ಪಡೆಯುವ ಅವಕಾಶವಿದೆ. ದ್ವಿತಿಯ ಪಿಯುಸಿಯೂ ಸೇರಿದಂತೆ ಎಲ್ಲ ಪ್ರವೇಶ ಪ್ರಕ್ರಿಯೆಗಳು ಜೂನ್ ೨೯ರೊಳಗೆ ಪೂರ್ಣಗೊಳ್ಳಬೇಕು ಎಂದು ಸೂಚಿಸಲಾಗಿದೆ.


Share It

You cannot copy content of this page