ಬೆಂಗಳೂರು: ಅಟಲ್ ಸೇತು ಜಾಹೀರಾತಿನಲ್ಲಿ ಕಾಣಿಸಿಕೊಂಡು, ಬಿಜೆಪಿ ನೇತೃತ್ವದ ಸರಕಾರವನ್ನು ಕೊಂಡಾಡಿರುವ ನಟಿ ರಶ್ಮಿಕಾ ಮಂದಣ್ಣ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೋಲ್ ಮಾಡಲಾಗುತ್ತಿದೆ.
ಇತ್ತೀಚೆಗೆ ಬಾಲಿವುಡ್ ಅಂಗಳ ಸೇರಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, ಅಟಲ್ ಸೇತು ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈನ ಸೀ ಬ್ರಿಡ್ಜ್ ಮೇಲೆ ನಿಂತು, ಇಂತಹ ಅಭಿವೃದ್ಧಿ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕಾಣುತ್ತಿದ್ದೇವೆ. ಹೀಗಾಗಿ, ಇಂತಹ ಅಭಿವೃದ್ಧಿಗೆ ನನ್ನ ಮತ ಎಂದು ಹೇಳಿಕೊಂಡಿದ್ದಾರೆ.
ಈ ವಿಡಿಯೋವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರೀ ಟ್ವೀಟ್ ಮಾಡುವ ಮೂಲಕ ತಮಗೆ ಬಂದ ಹೊಗಳಿಕೆಯನ್ನು ಜಾಹೀರು ಮಾಡಿಕೊಂಡಿದ್ದಾರೆ. ಆದರೆ, ಈ ವಇಡಿಯೋದಲ್ಲಿ ರಶ್ಮಿಕಾ ಉಲ್ಲೇಖ ಮಾಡಿರುವ ವಿಚಾರಗಳ ಬಗ್ಗೆ ಅನೇಕರು ಆಕ್ಷೇಪ ಎತ್ತಿದ್ದಾರೆ.
ರಶ್ಮಿಕಾ ಕೂಡ ಮತ್ತೇ ಕೆಲವು ಸೆಲೆಬ್ರಿಟಿಗಳಂತೆ ೨೦೧೪ ರ ನಂತರವಷ್ಟೇ ಕಣ್ಣು ಬಿಟ್ಟಂತಿದೆ. ಇಂತಹದ್ದೇ ಸೀ ಬ್ರಿಡ್ಜ್ ಹಿಂದಿನ ಸರಕಾರದ ಅವಧಿಯಲ್ಲಿ ಸಾಕಷ್ಟು ಆಗಿವೆ. ಆಗ ಯಾವ ಸೆಲೆಬ್ರಿಟಯೂ ನಿಮ್ಮಂತೆ ಪ್ರೊಪಗೆಂಡಾ ಸೃಷ್ಟಿ ಮಾಡಿರಲಿಲ್ಲ ಅಷ್ಟೇ, ಈಗ ನೀವು ವಿಡಿಯೋ ಮಾಡಿ, ಸುಳ್ಳೂ ಮಾಹಿತಿಗಳನ್ನು ಹೇಳಿ ಜನರ ದಾರಿ ತಪ್ಪಿಸುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.
ಮೊದಲನೆಯದಾಗಿ ನಟ ಚೇತನ್ ಅಹಿಂಸಾ ರಶ್ಮಿಕಾ ಅವರ ವಿಡಿಯೋ ಬಗ್ಗೆ ಕಿಡಿಕಾರಿದ್ದಾರೆ. ರಶ್ಮಿಕಾ ಅವರ ನಡೆಯನ್ನು ಬುದ್ಧಿಹೀನ ಮನಸ್ಥಿತಿ ಎಂದು ಜರಿದಿದ್ದಾರೆ. ಇನ್ನು ಕೆಲವು ನೆಟ್ಟಿಗರು ರಶ್ಮಿಕಾ ಮನೆಯ ಮೇಲೆ ಆದ ಐಟಿ ದಾಳಿಯನ್ನು ಉಲ್ಲೇಖ ಮಾಡಿ, ಈ ದಾಳಿಯಿಂದ ತಪ್ಪಿಸಿಕೊಳ್ಳಲು, ಇಂತಹ ಪ್ರೊಪಗೆಂಡಾ ಸೃಷ್ಟಿಗೆ ಮುಂದಾಗಿರಬಹುದು ಎಂದು ಟೀಕಿಸಿದ್ದಾರೆ.
ಒಟ್ಟಾರೆ, ಸದಾ ಒಂದಿಲ್ಲೊAದು ವಿವಾದದ ಮೂಲಕವೇ ಸುದ್ದಿಯಲ್ಲಿರುವ ರಶ್ಮಿಕಾ ಮಂದಣ್ಣ ಇದೀಗ, ಅಟಲ್ ಸೇತುವ ಜಾಹೀರಾತಿನ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ, ಕಿರಿಕ್ ಪಾರ್ಟಿ ಸಮಯದಿಂದಲೂ ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗುತ್ತಲೇ ಬಂದಿದ್ದಾರೆ.
ವೇದಿಕೆಗಳಲ್ಲಿ, ಪ್ರೆಸ್‌ಮೀಟ್‌ಗಳಲ್ಲಿ ಕನ್ನಡ ಮಾತನಾಡದೆ ಇರುವುದು, ತಮ್ಮ ಮೊದಲ ಸಿನಿಮಾ ಬಗ್ಗೆ, ಅವಕಾಶ ಕೊಟ್ಟ ರಕ್ಷಿತ್ ಶೆಟ್ಟಿ, ವೃಷಬ್ ಶೆಟ್ಟಿ ಬಗ್ಗೆ ನೆನಪು ಮಾಡಿಕೊಳ್ಳದಿರುವುದು, ತೆಲುಗು ಮತ್ತು ತಮಿಳು ಭಾಷೆಗೆ ಕೊಡುವಷ್ಟು ಗೌರವವನ್ನು ಕನ್ನಡಕ್ಕೆ ಕೊಡದೆ ನಡೆದುಕೊಳ್ಳುವುದು ಸೇರಿ ಅನೇಕ ವಿಚಾರಗಳಲ್ಲಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಆಧರೆ, ಈ ವಿಡಿಯೋ ಮೂಳಕ ಇಡೀ ಭಾರತದಲ್ಲೇ ಟ್ರೋಲ್ ಆಗುತ್ತಿದ್ದಾರೆ.