ಅಹಮದಾಬಾದ್: ಭರ್ಜರಿ ಪ್ರದರ್ಶನದ ಮೂಲಕ ಪ್ಲೇ ಆಫ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲಿಮನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 172 ರನ್‌ಗಳ ಸಾಧಾರಣ ಮೊತ್ತ ದಾಖಲಿಸಿದೆ.
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡ ಆರ್‌ಸಿಬಿಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಮಾಡಿಕೊಟ್ಟಿತು. ಉತ್ತಮ ಆರಂಭವನ್ನೇ ಪಡೆದರೂ, ಪಾಪ್ ಡುಪ್ಲೆಸಿಸ್ ಕೇವಲ 17 ರನ್‌ಗಳಿಗೆ ಔಟಾದರು. ವಿರಾಟ್ ಕೋಹ್ಲಿ ಎಂದಿನAತೆ ಅಗ್ರೆಸೀವ್ ಮೋಡ್‌ನಲ್ಲಿ ಬ್ಯಾಟಿಂಗ್ ನಡೆಸಿ, 24 ಎಸೆತಗಳಲ್ಲಿ 33 ರನ್‌ಗಳಿಸಿ ಔಟಾದರು.
ಅನಂತರ ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಆರ್‌ಸಿಬಿ, ಕೊನೆಯ ಓವರ್‌ಗಳಲ್ಲಿ ಸ್ಕೋರ್ ಗಳಿಸಲು ಪರದಾಡಿತು. ಕೆಮರಾನ್ ಗ್ರೀನ್ 21 ಎಸೆತಗಳಲ್ಲಿ 27 ರನ್ ಗಳಿಸಿದರೆ, ರಜತ್ ಪಾಟೀದಾರ್ 22 ಎಸೆತಗಳಲ್ಲಿ 34 ರನ್‌ಗಳಿ ಔಟಾದರು. ಗ್ಲೇನ್ ಮ್ಯಾಕ್ಸ್ವೆಲ್ ಮೊದಲ ಬಾಲ್‌ನಲ್ಲಿಯೇ ವಿಕೆಟ್ ಒಪ್ಪಿಸಿ, ನಿರಾಸೆ ಮೂಡಿಸಿದರು.
ಮಹಿಪಾಲ್ ಲೊಮ್ರಾರ್ 17 ಎಸೆತಗಳಲ್ಲಿ 32 ರನ್‌ಗಳಿಸಿ ಕೊನೆಯಲ್ಲಿ ಉತ್ತಮ ಮೊತ್ತದತ್ತ ತಂಡವನ್ನು ಮುನ್ನಡೆಸುವ ಪ್ರಯತ್ನ ನಡೆಸಿದರು. ದಿನೇಶ್ ಕಾರ್ತಿಕ್ ಮತ್ತೊಮ್ಮೆ ನಿರಾಸೆ ಮೂಡಿಸಿ, ಕೇವಲ 11 ರನ್‌ಳಿಗೆ ಔಟಾದರು. ಸ್ವಪ್ನಿಲ್ ಸಿಂಗ್ ಕೊನೆಯ ಓವರ್‌ನಲ್ಲಿ ಒಂದು ಸಿಕ್ಸರ್ ಸಿಡಿಸಿ, ಮೊತ್ತವನ್ನು 170 ಗಡಿ ದಾಟಿಸಿದರು.
ಅಂತಿಮವಾಗಿ ತಂಡ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿದ ಆರ್‌ಸಿಬಿ, 173 ರನ್‌ಗಳ ಟಾರ್ಗೆಟ್ ಫಿಕ್ಸ್ ಮಾಡಿತು. ಆವೇಶ್ ಖಾನ್ ಬೌಲಿಂಗ್‌ನಲ್ಲಿ ಮಿಂಚಿ ಮೂರು ವಿಕೆಟ್ ಪಡೆದುಕೊಂಡರು, ರವಿಚಂದ್ರನ್ ಅಶ್ವಿನ್ 2 ವಿಕೆಟ್ ಪಡೆದುಕೊಂಡರೆ, ಸಂದೀಪ್ ಶರ್ಮಾ, ಚಹಾಲ್ ಮತ್ತು ಟ್ರೆಂಟ್ ಬೌಲ್ಟ್ ತಲಾ ಒಂದು ವಿಕೆಟ್ ಪಡೆದುಕೊಂಡರು.