ಬೆಂಗಳೂರು: ಸಂತ್ರಸ್ತೆಯೊಬ್ಬರ ಕಿಡ್ನಾಪ್ ಮಾಡಿ ಕೂಡಿ ಹಾಕಿದ್ದ ಪ್ರಕರಣಕ್ಕೆ ಸಂಬAಧಿಸಿ ಎಸ್‌ಐಟಿ ಪೊಲೀಸರು ತಮ್ಮ ತನಿಖೆ ಚುರುಕುಗೊಳಿಸಿದ್ದು, ಭವಾನಿ ರೇವಣ್ಣ ಕಾರು ಚಾಲಕನಿಗೆ ಸಮನ್ಸ್ ನೀಡಿದ್ದಾರೆ.
ಅದೇ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿ ಬೇಲ್ ಪಡೆದಿರುವ ರೇವಣ್ಣ, ಇವತ್ತಷ್ಟೇ ಹೊಳೇನರಸೀಪುರಕ್ಕೆ ಪ್ರವೇಶ ಮಾಡಿದ್ದಾರೆ. ಅವರು ಪುರ ಪ್ರವೇಶ ಮಾಡಿದ ದಿನವೇ ಅವರ ಡ್ರೆöÊವರ್‌ಗೆ ಸಮನ್ಸ್ ನೀಡಿರುವ ಪೊಲೀಸರು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ. ರೇವಣ್ಣ ಕುಟುಂಬಕ್ಕೆ ಪ್ರಕರಣ ಬಿಡಿಸಲಾಗದ ಗಂಟಾಗುತ್ತಿದೆ.
ಸಂಸ್ತçಸ್ತೆಯನ್ನು ಕಾರಿನಲ್ಲಿ ಕರೆದುಕೊಂಡು ಹೋದ ಆರೋಪದಲ್ಲಿ ಭವಾನಿ ರೇವಣ್ಣ ಅವರ ಕಾರು ಚಾಲಕ ಅಜಿತ್ ಮೇಲೆ ದೂರು ದಾಖಲಾಗಿತ್ತು. ಈ ದೂರಿನನ್ವಯ ಎಸ್‌ಐಟಿ ಪೊಲೀಸರು, ಆತನಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದದರು. ಆದರೆ, ಆತ ಅಂದಿನಿAದಲೇ ತಲೆಮರೆಸಿಕೊಂಡಿದ್ದು, ಪೊಲೀಸರಿಗೆ ಸಿಕ್ಕಿಲ್ಲ.
ಈ ಕಾರಣದಿಂದ ಪದೇಪದೆ ವಿಚಾರಣೆಗೆ ಆತನನ್ನು ಕರೆಯಲಾಗಿದೆ. ಆತ ಈವರೆಗೆ ಪೊಲೀಸರ ಕೈಗೆ ಸಿಗದೆ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದಾನೆ. ಹೀಗಾಗಿ, ಎಸ್‌ಐಟಿ ಪೊಲೀಸರು, ಆತನಿಗೆ ಸಮನ್ಸ್ ನೀಡಿದ್ದಾರೆ. ಈಗಾಗಲೇ ಎರಡು ಬಾರಿ ನೊಟೀಸ್ ನೀಡಿದ್ದು, ಅಜಿತ್ ನಿವಾಸಕ್ಕೆ ತೆರಳಿ ಸಮನ್ಸ್ ನೀಡಿ ಬಂದಿದಾರೆ.