ಉಪಯುಕ್ತ ರಾಜಕೀಯ ಸುದ್ದಿ

ಸಂಪತ್ತಿನ ಮರುಹಂಚಿಕೆ:ಬಡವರಿಗೆ ವರವಾಗುತ್ತಾ ಕಾಂಗ್ರೆಸ್ ನಿರ್ಧಾರ?

Share It


ಬೆಂಗಳೂರು: ಭೂಸುಧಾರಣೆಯಂತಹ ಕ್ರಾಂತಿಕಾರಕ ಕಾನೂನು ಜಾರಿಗೆ ತಂದ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದರೆ, ಮತ್ತದೇ ರೀತಿಯ ಕ್ರಾಂತಿಕಾರಕ ಕಾನೂನೊಂದನ್ನು ಜಾರಿಗೊಳಿಸಲು ತೀರ್ಮಾನಿಸಿದೆಯೇ? ಇದೇನಾದರೂ ಜಾರಿಯಾದರೆ, ಭಾರತದ ಬಡವರ ಪಾಲಿನ ಭಾಗ್ಯದ ಬಾಗಿಲು ತೆರೆಯಲಿದೆಯೇ?

ಹೌದು, ಕಾಂಗ್ರೆಸ್ ಬಡವರ ಪರವಾಗಿಯೇ ಯೋಚಿಸುವ ಪಕ್ಷ ಎನಿಸಿಕೊಂಡಿದೆ. ಹೀಗಿದ್ದೂ, ೭೦ ವರ್ಷಗಳ ಕಾಲ ಬಡತನ ನಿರ್ಮೂಲನೆ ಮಾಡಲು ಸಆಧ್ಯವಾಗಿಲ್ಲ ಎಂಬುದು ಬಿಜೆಪಿಯ ಆರೋಪ. ಈ ನಡುವೆ ಸಂಪತ್ತಿನ ಮರುಹಂಚಿಕೆ ಕುರಿತಂತೆ ತನ್ನದೇ ಆದ ಕ್ರಾಂತಿಕಾರ ಕಾನೂನು ಜಾರಿಗೊಳಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಈ ನೀತಿಯನ್ನು ಇಟ್ಟುಕೊಂಡು ಈಗಾಗಲೇ ಶ್ರೀಮಂತ ವರ್ಗವನ್ನು ಕಾಂಗ್ರೆಸ್‌ನಿAದ ದೂರಯಿಡುವ ಕೆಲಸವನ್ನು ವಿಪಕ್ಷ ಬಿಜೆಪಿ ಮಾಡುತ್ತಿದೆ.

ಇತ್ತೀಚೆಗೆ ಕಾಂಗ್ರೆಸ್‌ನ ಸಾಗರೋತ್ತರ ಘಟಕದ ಅಧ್ಯಕ್ಷ ಶ್ಯಾಮ್ ಪಿತ್ರೋಡಾ ಅವರು, ಅಮೇರಿಕಾ ಮಾದರಿಯಲ್ಲಿ ಪಿತ್ರಾರ್ಜಿತ ತೆರಿಗೆ ಕಾನೂನನ್ನು ದೇಶದಲ್ಲಿ ತರಬೇಕಾದ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದ್ದರು. ಈ ಕಾನೂನು ಜಾರಿಯಾದರೆ, ದೇಶದಲ್ಲಿರುವ ಅಸಮಾನತೆ ಕೊನೆಯಾಗುತ್ತದೆ. ಸಂಪತ್ತಿನ ಕ್ರೋಡೀಕರಣ ಸಾಧ್ಯವಾಗಿ, ಸಾಮಾಜಮುಖಿ ಕಾರ್ಯಗಳನ್ನು ಸರಕಾರ ಕೈಗೊಂಡು, ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದ್ದರು. ಇದೀಗ ಅವರ ಹೇಳಿಕೆಗೆ ಬಿಜೆಪಿ ಭಾರಿ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಭಾರತದ ನಾಶಕ್ಕೆ ಮುಂದಾಗಿದೆ ಎಂದು ಆರೋಪಿಸಿದೆ.

ಅಮೆರಿಕದಲ್ಲಿ ಪಿತ್ರಾರ್ಜಿತ ತೆರಿಗೆ ಪರಿಕಲ್ಪನೆ ಜಾರಿಯಲ್ಲಿ ಇದೆ. ಅಮೇರಿಕದಲ್ಲಿ ಒಬ್ಬ ವ್ಯಕ್ತಿ ೧೦೦ ಮಿಲಿಯನ್ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದ್ದರೆ, ಅವನು ಸತ್ತಾಗ ತನ್ನ ಮಕ್ಕಳಿಗೆ ಶೇ. ೪೫ ಪ್ರತಿಶತವನ್ನು ಮಾತ್ರ ವರ್ಗಾಯಿಸಬಹುದು. ಉಳಿದ ೫೫ ಪ್ರತಿಶತವನ್ನು ಸರ್ಕಾರಕ್ಕೆ ನೀಡಬೇಕಾಗುತ್ತದೆ. ನಮ್ಮ ಪೀಳಿಗೆಯಲ್ಲಿ ನಾವು ಸಂಪಾದಿಸುವ ಆಸ್ತಿಯನ್ನು ನಮ್ಮ ಮರಣದ ನಂತರ ಸಾರ್ವಜನಿಕ ಆಸ್ತಿಯನ್ನಾಗಿ ಬಿಡಬೇಕಾಗುತ್ತದೆ. ಒಂದಷ್ಟು ಕೋಟಿವರೆಗಿನ ಸಂಪಾದನೆಗಿ0ತ ಹೆಚ್ಚು ಸಂಪಾದಿಸುವ ವ್ಯಕ್ತಿ ತನ್ನ ಮರಣ ನಂತರ ತನ್ನ ಆಸ್ತಿಯ ಶೇ. ೫೦ ರಷ್ಟನ್ನು ಸರಕಾರಕ್ಕೆ ಕೊಡುವ ಕಾನೂನು ಇದಾಗಿದೆ.

ಶ್ಯಾಮ್ ಪಿತ್ರೊಡಾ ಅವರು, ಈ ಕುರಿತು “ಭಾರತದಲ್ಲಿ ಇಂತಹ ಕಾನೂನು ಇಲ್ಲ. ಯಾರಾದರೂ ೧೦ ಶತಕೋಟಿ ಮೌಲ್ಯದ ಆಸ್ತಿ ಹೊಂದಿರುವವರು ಮೃತಪಟ್ಟರೆ, ಅವರ ಮಕ್ಕಳು ೧೦ ಶತಕೋಟಿ ಸರದಾರರಾಗುತ್ತಾರೆ. ಸಾರ್ವಜನಿಕರಿಗೆ ಏನೂ ಸಿಗುವುದಿಲ್ಲ. ಆದ್ದರಿಂದ ಈ ವಿಷಯಗಳ ಬಗ್ಗೆ ಜನರು ಚರ್ಚಿಸಬೇಕಾಗುತ್ತದೆ. ನಾವು ಸಂಪತ್ತಿನ ಮರುಹಂಚಿಕೆ ಬಗ್ಗೆ ಮಾತನಾಡುವಾಗ, ನಾವು ಹೊಸ ನೀತಿಗಳು ಮತ್ತು ಹೊಸ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತೇವೆ. ಅದು ಜನರ ಹಿತಾಸಕ್ತಿಯಾಗಿದೆಯೇ ಹೊರತು ಕೇವಲ ಅತಿ ಶ್ರೀಮಂತರ ಹಿತಾಸಕ್ತಿಗಾಗಿ ಅಲ್ಲ. ಸಂಪತ್ತು ಹಂಚಿಕೆ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಹವಲಾರು ಸಮಸ್ಯೆಯಿದೆ’ ಎಂದಿದ್ದಾರೆ.

”ಕಾಂಗ್ರೆಸ್ ಪಕ್ಷ ಸಂಪತ್ತಿನ ಹಂಚಿಕೆ ಬಗ್ಗೆ ಉತ್ತಮ ನೀತಿ ತರಲು ಉತ್ಸುಕವಾಗಿದೆ ಎಂದಿರುವ ಶ್ಯಾಮ್ ಪಿತ್ರೊಡಾ, ಭಾರತದಲ್ಲಿ ಕನಿಷ್ಠ ವೇತನ ನಿಗದಿ ಮಾಡಲು ಸಾಧ್ಯವಾಗುತ್ತಿಲ್ಲ. ಶ್ರೀಮಂತರು ಬಡವರಿಗೆ ಇಷ್ಟೇ ಹಣ ನೀಡಬೇಕು ಎಂದು ಕನಿಷ್ಠ ವೇತನ ಪದ್ಧತಿ ಜಾರಿಗೆ ತಂದರೆ ಅದು ಸಂಪತ್ತಿನ ಹಂಚಿಕೆ. ಶ್ರೀಮಂತರು ತಮ್ಮ ಸಂಪತ್ತನ್ನು ಕೆಲಸಗಾರರಿಗೆ ಮತ್ತು ಮನೆಯ ಸಹಾಯಕರಿಗೆ ಕೊಡುವ ಮನಸ್ಥಿತಿ ಭಾರತದಲ್ಲಿಲ್ಲ. ಆದರೆ, ಅದೇ ಹಣವನ್ನು ದುಬೈ ಮತ್ತು ಲಂಡನ್‌ನಲ್ಲಿ ವಿಹಾರ ಮಾಡಲು ಖರ್ಚು ಮಾಡುತ್ತಾರೆ. ಸಂಪತ್ತಿನ ಹಂಚಿಕೆ ಬಗ್ಗೆ ಮಾತನಾಡುವುದಾದರೆ, ನನ್ನ ಬಳಿ ಇಷ್ಟು ಹಣವಿದೆ. ಮತ್ತು ನಾನು ಅದನ್ನು ಎಲ್ಲರಿಗೂ ಹಂಚುತ್ತೇನೆ ಎಂಬ ಮನಸ್ಥಿತಿ ಮತ್ತು ಪರಿಸ್ಥಿತಿಯನ್ನು ನಿರ್ಮಾಣ ಮಾಡಬೇಕಿದೆ ಎಂದು ಹೇಳಿದ್ದರು.

ಈ ಸಿದ್ಧಾಂತ ಜಾರಿಗೆ ಬಂದದ್ದೆ, ಆದರೆ, ದೇಶದಲ್ಲಿ ಬಡತನ ರೇಖೆಗಿಂತ ಕಡಿಮೆಯಿರುವ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಆದರೆ, ಭಾರಿ ಸಂಪತ್ತು ಕ್ರೋಢೀಕರಣ ಮಾಡಿಕೊಂಡು ಶ್ರೀಮಂತವಾಗಿರುವ ಸಮುದಾಯ ಇದನ್ನು ವಿರೋಧಿಸುತ್ತದೆ. ಅದೇ ರೀತಿ ಶ್ರೀಮಂತರ ಪರವಾದ ಯೋಜನೆಗಳನ್ನೇ ಹೆಚ್ಚಾಗಿ ಜಾರಿಗೊಳಿಸುವ ಆರೋಪ ಹೊತ್ತಿರುವ ಬಿಜೆಪಿ ಸಹಜವಾಗಿಯೇ ಈ ಕಾನೂನನ್ನು ವಿರೋಧಿಸಿದೆ. ಈ ಕಾನೂನು ಜಾರಿಗೆ ಬಂದರೆ, ಬಡವರ ಪಾಲಿಗೆ ಇದೊಂದು ಕ್ರಾಂತಿಕಾರಕ ಕಾನೂನಾಗುವುದರಲ್ಲಿ ಅನುಮಾನವಿಲ್ಲ.

ಬಿಜೆಪಿ ವಿರೋಧ: ಶ್ಯಾಮ್ ಪಿತ್ರೊಡಾ ಹೇಳಿಕೆಯನ್ನು ಟೀಕೆ ಮಾಡಿರುವ ಅಮಿತ್ ಮಾಳವಿಯಾ., ಕಾಂಗ್ರೆಸ್ ಭಾರತವನ್ನು ನಾಶಮಾಡಲು ನಿರ್ಧರಿಸಿದೆ. ಇದೀಗ ಸ್ಯಾಮ್ ಪಿತ್ರೋಡಾ ಅವರು ಸಂಪತ್ತಿನ ಮರುಹಂಚಿಕೆಗಾಗಿ ೫೦ ಪ್ರತಿಶತ ಪಿತ್ರಾರ್ಜಿತ ತೆರಿಗೆಯನ್ನು ಪ್ರತಿಪಾದಿಸುತ್ತಾರೆ. ಇದರರ್ಥ ನಮ್ಮ ಎಲ್ಲಾ ಶ್ರಮ ಮತ್ತು ಉದ್ಯಮದೊಂದಿಗೆ ನಾವು ನಿರ್ಮಿಸುವ ೫೦ ಪ್ರತಿಶತವನ್ನು ತೆಗೆದುಕೊಳ್ಳಲಾಗುತ್ತದೆ. ಶೇ ೫೦ ರಷ್ಟು ನಾವು ಪಾವತಿಸುವ ಎಲ್ಲ ತೆರಿಗೆ ಜೊತೆಗೆ, ಪಿತ್ರಾರ್ಜಿತ ತೆರಿಗೆ ಕೂಡ ಹೆಚ್ಚಾಗುತ್ತದೆ” ಎಂದು ಕಿಡಿಕಾರಿದ್ದಾರೆ.


Share It

You cannot copy content of this page