ದೇವನಹಳ್ಳಿ : ತಾಲ್ಲೂಕಿನ ಕಾರಹಳ್ಳಿ ಸಮೀಪದ ಪ್ರೆಸ್ಟಿಜ್ ಗಾಲ್ಪ್ ಶೈರ್ ಬಳಿಯ ಸೊಣ್ಣೇನಹಳ್ಳಿ ಸರ್ವೇ ನಂ.1 ರಲ್ಲಿ ಹಾದು ಹೋಗಿರುವ ರಾಜ ಕಾಲುವೆಯನ್ನು ಒತ್ತುವರಿ ಮಾಡಿ ಆಂದ್ರ ಮೂಲದ ವ್ಯಕ್ತಿಗಳು ಅಕ್ರಮವಾಗಿ ಕಾಂಪೌoಡ್ ನಿರ್ಮಿಸಿದ್ದಾರೆ ಸಂಬಂಧಿಸಿದ ಅಧಿಕಾರಿಗಳು ಇದನ್ನು ಈ ಕೂಡಲೇ ತೆರವುಗೊಳಿಸಬೆಕು ಎಂದು ಸೊಣ್ಣೇನಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಸೊಣ್ಣೆನಹಳ್ಳಿಯಲ್ಲಿ ಸೊಣ್ಣೆನಹಳ್ಳಿ ಸರ್ವೆ ನಂ. 1ರಲ್ಲಿ ಆಂದ್ರ ಮೂಲದ ಶ್ರೀಕಾಂತ ರೆಡ್ಡಿ ಮತ್ತು ಸೊಮಗುಟ್ಟ ವಿಷ್ಣುವರ್ಧನ್ ರೆಡ್ಡಿ ಎಂಬುವವರ ಹೆಸರಿನಲ್ಲಿರುವ ಜಮೀನ ಪಕ್ಕದಲ್ಲಿ ಸೊಣ್ಣೆನಹಳ್ಳಿ ಗ್ರಾಮದಿಂದ ರಾಜ ಕಾಲುವೆ ಹಾದು ಹೋಗಿದ್ದು ಮಳೆಗಾಲದಲ್ಲಿ ಈ ರಾಜ ಕಾಲುವೆಯು ತುಂಬಿ ಹರಿದು ಕೆರೆಗಳಲ್ಲಿ ಸಂಗ್ರಹವಾಗಿ ಬೇಸಿಗೆಯ ಬಿರು ಬಿಸಿಲಿನ ದಿನಗಳಲ್ಲಿ ಸ್ಪಲ್ಪ ಮಟ್ಟಿಗೆ ನೀರಿನ ಅಭಾವವನ್ನು ನೀಗಿಸಲು ಸಹಾಯವಾಗುತ್ತದೆ ಇಂತಹ ರಾಜಕಾಲುವೆಯ ಮೇಲೆ ಕಾಂಪೌಂಡ್ ನಿರ್ಮಾಣ ಮಾಡಿ ರಾಜ ಕಾಲುವೆಯನ್ನು ಒತ್ತುವರಿ ಮಾಡಿ 20 ಅಡಿಯಷ್ಟು ಅಗಲದ ರಾಜ ಕಾಲುವೆಯನ್ನು 5 ಅಡಿಗೆ ಸರಿಸಿದ್ದಾರೆ.
ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೊಣ್ಣೆನಹಳ್ಳಿ ಗ್ರಾಮಸ್ಥರು ಅಕ್ರಮ ರಾಜಕಾಲುವೆ ತೆರವುಗೊಳಿಸಲೆಂದು ಸೊಣ್ಣೆನಹಳ್ಳಿ ಗ್ರಾಮದ ನೂರಾರು ಜನ ಸೇರಿ ಕಳೆದ 3 ತಿಂಗಳ ಹಿಂದೆ ತಾಲ್ಲೂಕು ಕಛೇರಿಗೆ ದೂರು ಕೊಟ್ಟಾಗ ಅಧಿಕಾರಿಗಳು ಸ್ಥಳಕ್ಕೆ ಬಂದು ಕಾಂಪೌಂಡ್ ಗೋಡೆ ನಿರ್ಮಾಣವನ್ನು ಸ್ಥಗಿತಗೊಳಿಸಿ ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಿ ಹೋಗಿದ್ದರು ಆದರೆ ಚುನಾವಣಾ ಸಂದರ್ಭದಲ್ಲಿ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿರುವುದನ್ನು ಕಂಡುಕೊಂಡು ಆತುರಾತುರವಾಗಿ ಕಾಮಗಾರಿಯನ್ನು ಮಾಡುತ್ತಿದ್ದಾರೆ.
ಈ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಮಾಡಿದರೆ, ಇದೆ ಸರ್ವೇ ನಂಬರ್ ನಲ್ಲಿ ನಾರ್ಥ ಲ್ಯಾಂಡ್ ಹೋಲ್ಡಿಂಗ್ ಕಂಪನಿಯವರು ಕೂಡ ರಾಜ ಕಾಲುವೆಯನ್ನು ಒತ್ತುವರಿ ಮಾಡಿದ್ದಾರೆ ಅವಾಗ ನೀವೆಲ್ಲ ಏನು ಮಾಡುತ್ತಿದ್ದಿರಿ ಎಂದು ದಬಾಯಿಸುತ್ತಾರೆ ಇದನ್ನು ಕೇಳಲು ನಿವ್ಯಾರು ಎಂದು ಉಡಾಫೆಯಿಂದ ಮಾತನಾಡಿ ಬೆದರಿಕೆ ಹಾಕುತ್ತಾರೆ ಎಂದು ಗ್ರಾಮಸ್ಥ ಮಂಜುನಾಥ್ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರಹಳ್ಳಿ ಗ್ರಾ. ಪಂ. ಸದಸ್ಯ ಆಂಜಿನಪ್ಪ, ಸೊಣ್ಣೆನಹಳ್ಳಿ ಗ್ರಾಮಸ್ಥರಾದ ಲೋಕೇಶ್, ಮುರಳಿ, ವೆಂಕಟೇಶ್, ಮುನಿರಾಜು, ಸುಬ್ರಮಣ್ಯ , ಕೃಷ್ಣಪ್ಪ ಹಾಗೂ ಗ್ರಾಮಸ್ಥರು ಇದ್ದರು.