ಅಪರಾಧ ಸುದ್ದಿ

Shravanabelagola: ನೇರಳೆ ಮರದಿಂದ ಬಿದ್ದು ಯುವಕ ಸಾವು

Share It

ಶ್ರವಣಬೆಳಗೊಳ: ಹೋಬಳಿಯ ರಾಚೇನಹಳ್ಳಿ ಎಂಬ ಗ್ರಾಮದ ರಂಗಣ್ಣ ಕೊಂ ಕೆಂಪಮ್ಮ ಎಂಬುವವರ ಪುತ್ರ ಉಮೇಶ್ 30 ಎಂಬುವವರ ನೇರಳೆ ಹಣ್ಣಿನ ಮರದಿಂದ ಬಿದ್ದಿರುವ ಘಟನೆ ಶ್ರವಣಬೆಳಗೊಳದ ರಾಚೇನಹಳ್ಳಿ ಎಂಬ ಗ್ರಾಮದಲ್ಲಿ ಇಂದು ಸಂಜೆ ನಡೆದಿರುತ್ತದೆ.

ಈತ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ಚಾಮುಂಡೇಶ್ವರಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿದ್ದ ಎನ್ನಲಾಗಿದೆ. ನೇರಳೆ ಹಣ್ಣಿನ ಆಸೆಗೆ ಮರವನ್ನು ಹತ್ತಿ ಕೊಂಬೆ ಮುರಿದಿದ್ದು ಮರದಿಂದ ಬಿದ್ದು ಸಾವನಪ್ಪಿದ್ದಾನೆ.

ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


Share It

You cannot copy content of this page