ಅಪರಾಧ ರಾಜಕೀಯ ಸುದ್ದಿ

ಸಂತ್ರಸ್ತರ ನೆರವಿಗೆ ಸಹಾಯವಾಣಿ ತೆರೆದ ಎಸ್‌ಐಟಿ

Share It

ಬೆಂಗಳೂರು: ಹಾಸನ ಜಿಲ್ಲೆಯ ಪೆನ್ ಡ್ರೈವ್ ಪ್ರಕರಣದ ಸಂಸ್ತçಸ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದ್ದು, ಇವರ ಸಹಾಯಕ್ಕೆ ಎಸ್‌ಐಟಿ ಸಹಾಯವಾಣಿಯೊಂದನ್ನು ತೆರೆದಿದೆ.

ಮಾಜಿ ಎಚ್.ಡಿ.ದೇವೇಗೌಡರ ಮೊಮ್ಮಗ, ಹಾಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಕೇಳಿಬಂದಿದೆ. ಈ ಸಂಬAಧ ಅವರದ್ದು ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿರುವ ಕೆಲ ಮಹಿಳೆಯರು ದೂರು ದಾಖಲಿಸಿ, ತಮ್ಮ ಮೇಲೆ ಅತ್ಯಾಚಾರ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಸಂಬAಧ ಮಾಜಿ ಸಚಿವರೂ ಆದ ಪ್ರಜ್ವಲ್ ತಂದೆ ರೇವಣ್ಣ ಅವರನ್ನು ಈಗಾಗಲೇ ಎಸ್‌ಐಟಿ ಬಂಧನ ಮಾಡಿದೆ.

ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದು, ಆತನ ಬಂಧನಕ್ಕೆ ಎಸ್‌ಐಟಿ ಬಲೆ ಬೀಸಿದೆ. ವೈರಲ್ ಆಗಿರುವ ವಿಡಿಯೋಗಳು ಸುಮಾರು ಎರಡು ಸಆವಿರದಷ್ಟಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಅಷ್ಟು ಜನ ಸಂತ್ರಸ್ತ ಮಹಿಳೆಯರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಈ ನಡುವೆ ಎಸ್‌ಐಟಿ ತನಿಖೆಗೆ ತೆರಳಿದ ವೇಳೆ ಇಂತಹ ಅನೇಕ ಮಹಿಳೆಯರು ತಮ್ಮ ಅಳಲು ತೋಡಿಕೊಂಡಿದ್ದಾರೆ. ತಾವು ದೂರು ನೀಡಲು ಅಸಹಾಯಕವಾಗಿರುವ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, ದೂರು ಹೇಳಿಕೊಳ್ಳುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದ್ದು, ಅದಕ್ಕಾಗಿ, ಸಹಾಯವಾಣಿಯೊಂದನ್ನು ತೆರೆಯುವುದು ಸೂಕ್ತ ಎಂದು ಸಹಾಯವಾಣಿಯನ್ನು ಆರಂಭಿಸಲಾಗಿದೆ. ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯಕ್ಕೆ ಸಂಬAಧಿಸಿದ ಯಾವುದೇ ಮಾಹಿತಿ, ಅಳಲು ಮತ್ತು ಸಹಾಯಕತೆ ಹಂಚಿಕೊಳ್ಳಲು, ನೊಂದ ಮಹಿಳೆಯರು ಅಥವಾ ಸಾಕ್ಷಿದಾರರು ಈ ಸಂಖ್ಯೆಗೆ ಕರೆ ಮಾಡಬಹುದು. ಎಸ್‌ಐಟಿ ನೀಡಿರುವ ಸಹಾಯವಾಣಿ ಸಂಖ್ಯೆ 6360938947 ಆಗಿದೆ.


Share It

You cannot copy content of this page