ರಾಜಕೀಯ ಸುದ್ದಿ

ಆಂಧ್ರ ಸಿಎಂ ಜಗನ್ ಮೇಲೆ ಕಲ್ಲು ತೂರಾಟ

Share It


ವಿಜಯವಾಡ: ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಬಸ್ಯಾತ್ರೆ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಸಂದರ್ಭದಲ್ಲಿ ಸಿಎಂ ಜಗನ್ ಗಾಯಗೊಂಡಿದ್ದಾರೆ. ಅವರ ಕಣ್ಣಿನ ಮೇಲ್ಭಾಗಕ್ಕೆ(ಹುಬ್ಬು) ಗಾಯವಾಗಿದೆ.

ವಿಜಯವಾಡದ ಅಜೀತ್ ಸಿಂಗ್ ನಗರದಲ್ಲಿರುವ ಗಂಗಾರಾಮ್ ಗುಡಿ ಬಳಿ ಮತದಾರರಿಗೆ ಕೈಮುಗಿಯುತ್ತಿದ್ದಾಗ ದುಷ್ಕಮರ್ಿಗಳು ಬಸ್ ಮೇಲೆ ಕಲ್ಲು ತೂರಿದ್ದು, ಅದು ಸಿಎಂಗೆ ತಗುಲಿದೆ. ತಕ್ಷಣ ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದು, ವೈದ್ಯಕೀಯ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ಮುಖ್ಯಮಂತ್ರಿ ಜಗನ್ ಅವರ ಬಸ್ ಯಾತ್ರೆ ಯಥಾಪ್ರಕಾರ ಮುಂದುವರಿಯಿತು. ಸಿಎಂ ಮೇಲೆ ಕಲ್ಲು ತೂರಿದವರ ಬಂಧನಕ್ಕೆ ಪೊಲೀಸರು ಕಾಯರ್ಾಚರಣೆ ಮುಂದುವರಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ.


Share It

You cannot copy content of this page